Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 22

42:22
تَرَى ٱلظَّٰلِمِينَ مُشۡفِقِينَ مِمَّا كَسَبُواْ وَهُوَ وَاقِعُۢ بِهِمۡۗ وَٱلَّذِينَ ءَامَنُواْ وَعَمِلُواْ ٱلصَّٰلِحَٰتِ فِي رَوۡضَاتِ ٱلۡجَنَّاتِۖ لَهُم مَّا يَشَآءُونَ عِندَ رَبِّهِمۡۚ ذَٰلِكَ هُوَ ٱلۡفَضۡلُ ٱلۡكَبِيرُ ٢٢
(ಪರಲೋಕದಲ್ಲಿ) ಈ ಅಕ್ರಮಿಗಳು ತಮ್ಮ ಸಂಪಾದನೆಯ ಪರಿಣಾಮದಿಂದ ಭಯಪಡುವುದನ್ನು ತಾವು ಕಾಣುವಿರಿ. ಆ ಶಿಕ್ಷೆ ಅವರ ಮೇಲೆ ಸಂಭವಿಸಿಯೇ ತೀರುವುದು. ಸತ್ಯವಿಶ್ವಾಸ ಸ್ವೀಕರಿಸಿ ಸತ್ಕರ್ಮಗಳನ್ನು ಅನುಷ್ಠಿಸಿದವರು ಸ್ವರ್ಗೋದ್ಯಾನದಲ್ಲಿರುವರು. ತಮ್ಮ ಪ್ರಭುವಿನಿಂದ ಅವರು ಬಯಸಿದುದನ್ನೆಲ್ಲಾ ಪಡೆಯು ವರು. ಅದುವೇ ಮಹಾ ಅನುಗ್ರಹವಾಗಿದೆ1.
Footnotes
  • [1] ಪ್ರವಾದಿಗಳೆಲ್ಲರೂ ಪ್ರಬೋಧನೆ ಮಾಡಿದ ತೌಹೀದ್‍ನಲ್ಲಿ ಆಧರಿತವಾದ ಧರ್ಮವನ್ನು ಅಲ್ಲಾಹು ಅಂಗೀಕರಿಸಿದ್ದಾನೆ ಎನ್ನುವಾಗ ಈ ಮುಶ್ರಿಕರಿಗೆ ಈ ಶಿರ್ಕ್‍ನ ಮತವು ಎಲ್ಲಿಂದ ಸಿಕ್ಕಿತು? ಅಲ್ಲಾಹನಿಗೆ ಹಲವಾರು ಬಾಗೀದಾರರನ್ನು ಅವರು ನಿಶ್ಚಯಿಸಿದರು. ಶಿಕ್ಷೆಯನ್ನೂ ಪರಲೋಕಕ್ಕೆ ಮುಂದೂಡುವ ತೀರ್ಮಾನವು ಮೊದಲೇ ನಿರ್ಧರಿತವಾಗಿಲ್ಲದಿರುತ್ತಿದ್ದರೆ ತಕ್ಷಣ ಅವರು ಶಿಕ್ಷೆಗೊಳಗಾಗುತ್ತಿದ್ದರು. ಅವರು ಪರಲೋಕಕ್ಕೆ ಹೋಗುವಾಗ ಶಿಕ್ಷೆಯನ್ನು ಭಯಪಡುವರು. ಆದರೆ ಅದೇನೂ ಪ್ರಯೋಜನಕಾರಿಯಾಗಲಾರದು. ಸತ್ಯವಿಶ್ವಾಸಿಗಳ ನೆಲೆ ಇದಕ್ಕೆ ವಿರುದ್ಧವಾಗಿದೆ. ಅವರು ಸಮುನ್ನತವಾದ ಸ್ವರ್ಗ ಆರಾಮಗಳಲ್ಲಿ ಸುಖಪಡುತ್ತಿರುವರು.