Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 51

42:51
۞ وَمَا كَانَ لِبَشَرٍ أَن يُكَلِّمَهُ ٱللَّهُ إِلَّا وَحۡيًا أَوۡ مِن وَرَآيِٕ حِجَابٍ أَوۡ يُرۡسِلَ رَسُولٗا فَيُوحِيَ بِإِذۡنِهِۦ مَا يَشَآءُۚ إِنَّهُۥ عَلِيٌّ حَكِيمٞ ٥١
ಮನುಷ್ಯನೊಂದಿಗೆ ಅಲ್ಲಾಹನು ಖುದ್ದು ಮಾತಾ ಡುವ ಸಂಭವವಿಲ್ಲ. ಬೋಧನೆಯ ರೂಪದಲ್ಲಿ1 ಅಥವಾ ತೆರೆಯಮರೆಯಿಂದ2 ಅಥವಾ ಓರ್ವ ದೂತನನ್ನು ಕಳುಹಿಸಿ ಅಲ್ಲಾಹನ ಅನುಮತಿಯಂತೆ ಅವನಿಚ್ಚಿಸಿದ್ದನ್ನು ಆ ದೂತರು ಬೋಧನೆ ಕೊಡುವ ರೂಪದಲ್ಲಿ ಹೊರತು3. ಅವನು ಮಹೋನ್ನತನೂ ಮಹಾಯುಕ್ತಿವಂತನೂ ಆಗಿರುತ್ತಾನೆ.
Footnotes
  • [1] ಭಾಷಾರ್ಥದಲ್ಲಿ ‘ವಹ್‍ಯ್’ ಅಂದರೆ ಸೂಚನೆ, ಇಶಾರೆ, ಮನಸ್ಸಿಗೆ ಹಾಕುವುದು, ಮನಸ್ಸಿಗೆ ತೋಚಿಸುವುದು. ಖಾಸಗಿಯಾಗಿ ತಿಳಿಸುವುದು ಮುಂತಾದ ಹಲವು ಅರ್ಥಗಳಿವೆ. ಜೇನುನೊಣಕ್ಕೆ ವಹ್‍ಯ್ ನೀಡಲಾಯಿತು, ಭೂಮಿಗೆ ವಹ್ಯ್ ಕೊಡಲಾಯಿತು ಮುಂತಾದ ಖುರ್‍ಆನಿನ ವಾಕ್ಯಗಳಿಗೆ ಇಂತಹ ಅರ್ಥಗಳ ಪೈಕಿ ಅಲ್ಲಲ್ಲಿಗೆ ಸೂಕ್ತವಾದ ಅರ್ಥವು ಹೊಂದಿಕೆಯಾಗುತ್ತದೆ. ಇಲ್ಲಿ ಮನುಷ್ಯರಿಗೆ ವಹ್ಯ್ ಲಭಿಸುವುದರ ವಿಧಾನವನ್ನು ಹೇಳಲಾಗಿದೆ. ಭೋಧನೆಯು ರೂಪದಲ್ಲಿ ಮನದಲ್ಲಿ ಹೊಳೆಯಿಸುವುದು, ಕನಸಿನಲ್ಲಿ ತಿಳಿಸುವುದು ಮುಂತಾದ ವಿಧಾನಗಳಿದ್ದು ಇದಕ್ಕೆ ಇಲ್ಹಾಮ್ ಎನ್ನಲಾಗುತ್ತದೆ. ಇಬ್‍ರಾಹೀಮ್ ನಬಿಯವರಿಗೆ ಪುತ್ರ ಬಲಿಗೆ ಕನಸಿನಲ್ಲಿ ಸಿಕ್ಕಿದ ಆದೇಶ, ನಬಿಯವರಿಗೆ ಪ್ರವಾದಿತ್ವಕ್ಕೆ ಮೊದಲು ಕಾಣುತ್ತಿದ್ದ ಕನಸುಗಳು, ಮೂಸಾ ನಬಿಯವರ ತಾಯಿಗೆ ಶಿಶುವನ್ನು ಪೆಟ್ಟಿಗೆಯಲ್ಲಿಟ್ಟು ನದಿಗೆ ಬಿಡುವಂತೆ ದೊರೆತ ವಹ್ಯ್ ಈ ವಿಧಾನಕ್ಕೆ ಸೇರಿವೆ. ಪ್ರವಾದಿಗಳ ಕನಸು ಹಾಗೂ ಇಲ್ಹಾಮ್ ವಾಸ್ತವವಾಗಿರುವುದು.
  • [2] ‘ತೆರೆಯ ಮೆರೆಯಿಂದ’ ಎಂಬುದು ವಹ್ಯ್‍ನ ಇನ್ನೊಂದು ವಿಧಾನ. ಮಾತಾಡುವವನನ್ನು ಕಾಣದೆ ಕೇವಲ ಮಾತು ಮಾತ್ರ ಕೇಳಿಸುವ ವಿಧಾನವದು. ಮೂಸಾ ನಬಿಯವರಲ್ಲಿ ಅಲ್ಲಾಹನು ಮಾತುಕತೆ ನಡೆಸಿದ್ದು ಈ ವಿಧಾನದಲ್ಲಾಗಿತ್ತು.
  • [3] ದೂತನನ್ನು ಕಳುಹಿಸಿ ಆ ದೂತ ಹೇಳುವ ಮಾತು ಕೇಳಿಸುವುದು ವಹ್ಯ್‍ನ ಇನ್ನೊಂದು ವಿಧಾನ. ದೂತ ಅಂದರೆ ಮಲಕ್. ಇಬ್ರಾಹೀಮ್ ನಬಿ ಲೂಥ್ ನಬಿ ಮುಂತಾದವರ ಬಳಿಗೆ ಮನುಷ್ಯರ ರೂಪದಲ್ಲಿ ಹಲವು ಮಲಕ್‍ಗಳು ಬಂದು ಮಾತುಕತೆ ನÀಡೆಸಿದ ಬಗ್ಗೆ ಪ್ರಸ್ತಾಪವಿದೆ. ಜಿಬ್‍ರೀಲರು ನಬಿಯವರ ಬಳಿ ಬಂದು ಸಂದೇಶ ಮುಟ್ಟಿಸುವ ಘಟನೆ ಧಾರಾಳ ನಡೆದಿದೆ. ಇಂತಹ ವಹ್ಯ್ ವಾಹಕರ ಪೈಕಿ ಅತಿ ಪ್ರಧಾನರಾದವರು ಜಿಬ್‍ರೀಲ್. ಇಡೀ ಖುರ್‍ಆನನ್ನು ತಲುಪಿಸಿದವರು ಅವರು. ಮಲಕ್‍ಗಳು ಪಾಪ ಮುಕ್ತರಾಗಿದ್ದು ತಲುಪಿಸುವ ಸಂದೇಶದಲ್ಲಿ ಯಾವುದೇ ಹೆಚ್ಚು ಕಮ್ಮಿ ಮಾಡದೆ ಯಥಾವತ್ತಾಗಿ ತಲುಪಿಸುತ್ತಾರೆ.