Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 52

42:52
وَكَذَٰلِكَ أَوۡحَيۡنَآ إِلَيۡكَ رُوحٗا مِّنۡ أَمۡرِنَاۚ مَا كُنتَ تَدۡرِي مَا ٱلۡكِتَٰبُ وَلَا ٱلۡإِيمَٰنُ وَلَٰكِن جَعَلۡنَٰهُ نُورٗا نَّهۡدِي بِهِۦ مَن نَّشَآءُ مِنۡ عِبَادِنَاۚ وَإِنَّكَ لَتَهۡدِيٓ إِلَىٰ صِرَٰطٖ مُّسۡتَقِيمٖ ٥٢
ಇದೇ ರೀತಿಯಲ್ಲಿ ನಿಮಗೆ ನಾವು ನಮ್ಮ ಅಪ್ಪಣೆ ಯಿಂದ ಒಂದು ಆತ್ಮ ಚೈತನ್ಯದಾಯಕ ದಿವ್ಯ ಸಂದೇಶವನ್ನು ನೀಡಿರುತ್ತೇವೆ1. ವೇದ ಗ್ರಂಥವಾಗಲಿ, ಸತ್ಯವಿಶ್ವಾಸವಾಗಲಿ ಏನೆಂದು ನಿಮಗೆ ಗೊತ್ತಿರಲಿಲ್ಲ2. ಆದರೆ ಅದನ್ನು ನಾವು ಒಂದು ಪ್ರಕಾಶವಾಗಿ ಮಾಡಿದೆವು. ಆ ಮೂಲಕ ನಾವು ನಮ್ಮ ದಾಸರ ಪೈಕಿ ನಾವಿಚ್ಛಿಸುವವರಿಗೆ ದಾರಿ ತೋರಿಸುತ್ತೇವೆ. ನಿಸ್ಸಂದೇಹವಾಗಿಯೂ ನೀವು ನೇರಮಾರ್ಗದ ಕಡೆಗೆ ಮಾರ್ಗದರ್ಶನ ಮಾಡಿಸುತ್ತಿರುವಿರಿ.
Footnotes
  • [1] ಇಲ್ಲಿ ಖುರ್‍ಆನಿಗೆ ರೂಹ್ (ಆತ್ಮ) ಎಂದು ಹೆಸರಿಸಲಾಗಿದೆ. ದೇಹಕ್ಕೆ ಆತ್ಮ ಇರುವಂತೆ ಖುರ್‍ಆನ್ ಆತ್ಮದ ಆತ್ಮ. ಶಾಶ್ವತ ವಿಜಯಕ್ಕೆ ಬೆಳಕು ನೀಡುವುದರಿಂದ ಖುರ್‍ಆನಿಗೆ ನೂರ್ (ಬೆಳಕು) ಎಂಬ ಹೆಸರೂ ಇದೆ.
  • [2] ಅರ್ಥಾತ್ ವೇದಗ್ರಂಥವಾದ ಖುರ್‍ಆನ್ ಬರುವ ಮೊದಲು ಖುರ್‍ಆನ್‍ನ ಬಗ್ಗೆಯಾಗಲಿ ಪ್ರವಾದಿತ್ವದ ಬಗ್ಗೆಯಾಗಲಿ ನೀವು ತಿಳಿದಿರಲಿಲ್ಲ ಎಂದರ್ಥ. ಇಲ್ಲಿನ ‘ಈಮಾನ್’ಗೆ ನುಬುವ್ವತ್ ಎಂದರ್ಥ. (ಇಬ್ನು ಕಸೀರ್)