Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 61

43:61
وَإِنَّهُۥ لَعِلۡمٞ لِّلسَّاعَةِ فَلَا تَمۡتَرُنَّ بِهَا وَٱتَّبِعُونِۚ هَٰذَا صِرَٰطٞ مُّسۡتَقِيمٞ ٦١
ಅವರು (ಮರ್ಯಮರ ಪುತ್ರ) ಲೋಕಾಂತ್ಯದ ಒಂದು ಅರಿವು (ಕುರುಹು) ಆಗಿದ್ದಾರೆ1. ಆದು ದರಿಂದ ನೀವು ಅದರ ಕುರಿತು ಸ್ವಲ್ಪವೂ ಸಂಶಯ ಪಡಬೇಡಿರಿ. ನನ್ನನ್ನು (ನನ್ನ ಮಾರ್ಗವನ್ನು) ಅನುಸರಿಸಿರಿ. ಇದು ನೇರ ಮಾರ್ಗವಾಗಿದೆ.
Footnotes
  • [1] ಈಸಾ ನಬಿ ಯವರು ವಿಶ್ವದ ಅಂತ್ಯಕ್ಕೆ ಅರಿವು ಅಂದರೆ ಅವರ ಆಗಮನವು ಲೋಕಾಂತ್ಯದ ಲಕ್ಷಣ ಎಂದರ್ಥ. “ಲಇಲ್ಮುನ್” ಬದಲಿಗೆ “ಲಅಲಮುನ್” (ಚಿಹ್ನೆ) ಎಂಬ ಇಲ್ಲಿರುವ ಇನ್ನೊಂದು ಖಿರಾಅತ್ ಈ ಅರ್ಥಕ್ಕೆ ಇನ್ನಷ್ಟು ಬಲ ನೀಡುತ್ತದೆ. ಅಲ್ಲದೆ ಲೋಕಾಂತ್ಯಕ್ಕೆ ಮೊದಲು ಅವರು ಭೂಮಿಗೆ ಆಗಮಿಸುವವರು ಕೂಡಾ. ‘ವಅನ್ನಹೂ’ ಎಂಬುದರ ಸರ್ವನಾಮ ಈಸಾ ನಬಿಗೆ ಅಲ್ಲ, ಖುರ್‍ಆನಿಗೆ ಎಂಬ ಅಭಿಪ್ರಾಯ ದುರ್ಬಲವಾಗಿದೆ. ಏಕೆಂದರೆ 57ನೇ ಆಯತ್‍ನಿಂದ ಇದುವರೆಗೆ ಖುರ್‍ಆನಿನ ಪ್ರಸ್ತಾಪವೇ ಬಂದಿಲ್ಲ.