Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 24

44:24
وَٱتۡرُكِ ٱلۡبَحۡرَ رَهۡوًاۖ إِنَّهُمۡ جُندٞ مُّغۡرَقُونَ ٢٤
ಸಮುದ್ರವನ್ನು ಶಾಂತವಾಗಿ ಇರಲು ಬಿಡಿರಿ. ಅವರು ಮುಳುಗಿ ನಾಶವಾಗುವ ಒಂದು ಸೈನ್ಯವೇ ಆಗಿದ್ದಾರೆ1.
Footnotes
  • [1] ಮೂಸಾ ನಬಿಯವರು ಸಂಗಡಿಗರನ್ನು ಕೂಡಿಕೊಂಡು ಸಮುದ್ರ ಸೀಳಿ ಈಚೆ ದಡ ಮುಟ್ಟಿದಾಗ ಅದೇ ಮಾರ್ಗವಾಗಿ ಫಿರ್‍ಔನ್ ಮತ್ತು ಅವನ ಸೈನ್ಯ ತಮ್ಮನ್ನು ಬೆನ್ನಟ್ಟಿ ಬರುವ ಭೀತಿಯಿಂದ ಸೀಳಿದ ಸಮುದ್ರವನ್ನು ಮತ್ತೆ ಒಂದುಗೂಡಿಸಿ ಮಾರ್ಗವನ್ನೇ ನಿರ್ನಾಮ ಮಾಡಿಬಿಡಲು ಮುಂದಾದರು. ಆಗ ಅಲ್ಲಾಹನು ಅವರಿಗೆ “ಕೂಡಿಸಬೇಡಿ, ತೆರೆದ ಸ್ಥಿತಿಯಲ್ಲೇ ಇರಲಿ” ಎಂದು ಸೂಚನೆ ಕೊಡುತ್ತಾನೆ. ಇದು ಇಮಾಮ್ ಖತಾದ ಅವರು ವ್ಯಕ್ತಪಡಿಸಿದ ಅಭಿಪ್ರಾಯ. ಅದೇ ಮಾರ್ಗಕ್ಕೆ ಫಿರ್‍ಔನ್ ಮತ್ತು ಸೈನ್ಯ ಇಳಿದಾಗ ಏಕಾಏಕಿ ಸಮುದ್ರ ಒಂದಾಗಿ ಕೂಡಿಕೊಂಡು ಅವರೆಲ್ಲರೂ ಮುಳುಗಿ ಸತ್ತ ಘಟನೆ ಪ್ರಸಿದ್ಧ.