Kannada Translation

Ayah by Ayah

Tags

Download Links

Kannada Translation translation for Surah Al-Ahqaf — Ayah 10

46:10
قُلۡ أَرَءَيۡتُمۡ إِن كَانَ مِنۡ عِندِ ٱللَّهِ وَكَفَرۡتُم بِهِۦ وَشَهِدَ شَاهِدٞ مِّنۢ بَنِيٓ إِسۡرَٰٓءِيلَ عَلَىٰ مِثۡلِهِۦ فَـَٔامَنَ وَٱسۡتَكۡبَرۡتُمۡۚ إِنَّ ٱللَّهَ لَا يَهۡدِي ٱلۡقَوۡمَ ٱلظَّٰلِمِينَ ١٠
(ಪ್ರವಾದಿಯವರೇ,) ಹೇಳಿರಿ! ನಿಮ್ಮ ಅವಸ್ಥೆಯೇನೆಂದು ತಿಳಿಸುವಿರಾ? ಈ ಖುರ್‍ಆನ್ ಅಲ್ಲಾಹನ ಕಡೆಯಿಂದಾಗಿದ್ದು ಅದನ್ನು ನೀವು ಧಿಕ್ಕರಿಸಿದ ಸ್ಥಿತಿಯಲ್ಲೇ ಇಸ್ರಾಈಲ್ ವರ್ಗದ ಓರ್ವ ಸಾಕ್ಷಿದಾರನು1. ಅದು ದೈವಿಕವಾಣಿ ಎಂಬುದಕ್ಕೆ ಸಾಕ್ಷಿ ನಿಂತಿರುವುದಲ್ಲದೆ ಖುರ್‍ಆನಿಗೆ ವಿಶ್ವಾಸ ನಿಷ್ಠೆಯನ್ನು ತೋರಿರುತ್ತಾರೆ. ನೀವು ಅಹಂಭಾವ ತೋರಿದ್ದೀರಿ. (ನೀವು ಅಕ್ರಮಿ ಗಳಲ್ಲವೇ?) ಅಕ್ರಮಿ ಜನತೆಗೆ ಅಲ್ಲಾಹನು ಖಂಡಿತವಾಗಿಯೂ ಸತ್ಪಥ ತೋರುವುದಿಲ್ಲ.
Footnotes
  • [1] ಓರ್ವ ಸಾಕ್ಷಿದಾರ ಎಂಬುದರ ಉದ್ದೇಶ ಯಹೂದಿ ವಿದ್ವಾಂಸನಾಗಿದ್ದು ನಂತರ ಇಸ್ಲಾಮಿಗೆ ಸೇರಿದ್ದ ಸಹಾಬಿವರ್ಯರಾದ ಅಬ್ದುಲ್ಲಾಹ್ ಬಿನ್ ಸಲಾಮ್ . ತೌರಾತ್ ಪಾರಂಗತರಾಗಿದ್ದ ಅವರಿಗೆ ಆ ಗ್ರಂಥದಲ್ಲಿ ನಬಿಯವರ ಬಗ್ಗೆ ನೀಡಿದ್ದ ಮಾಹಿತಿಗಳು ಸತ್ಯವೆಂದು ಮನವರಿಕೆಯಾದಾಗ ಮದೀನಾಕ್ಕೆ ಬಂದು ಮುಸ್ಲಿಮರಾಗಿದ್ದರು. ಇವರೊಬ್ಬರೇ ಇಲ್ಲಿ ಉದ್ದೇಶವಲ್ಲ, ತೌರಾತ್‍ನ ಪ್ರವಚನದ ಆಧಾರದಲ್ಲಿ ಇಸ್ಲಾಮಿಗೆ ಸೇರಿದ ಯಹೂದಿಗಳಾಗಿದ್ದ ಎಲ್ಲ ವ್ಯಕ್ತಿಗಳೂ ಇದರಲ್ಲಿ ಒಳಪಡುತ್ತಾರೆ ಎಂಬ ಅಭಿಪ್ರಾಯವೂ ಇದೆ.