Kannada Translation

Ayah by Ayah

Tags

Download Links

Kannada Translation translation for Surah Al-Ahqaf — Ayah 11

46:11
وَقَالَ ٱلَّذِينَ كَفَرُواْ لِلَّذِينَ ءَامَنُواْ لَوۡ كَانَ خَيۡرٗا مَّا سَبَقُونَآ إِلَيۡهِۚ وَإِذۡ لَمۡ يَهۡتَدُواْ بِهِۦ فَسَيَقُولُونَ هَٰذَآ إِفۡكٞ قَدِيمٞ ١١
ಇದು (ಖುರ್‍ಆನ್) ಒಳಿತಾಗಿರುತ್ತಿದ್ದರೆ ಇದರ ಸ್ವೀಕೃತಿಯಲ್ಲಿ ಇವರು ನಮಗಿಂತ ಮೊದಲಿಗರಾಗುತ್ತಿರಲಿಲ್ಲ ಎಂದು ವಿಶ್ವಾಸಿಗಳನ್ನುದ್ದೇಶಿಸಿ ನಿಷೇಧಿಗಳು ಹೇಳಿದರು1. ವಾಸ್ತವದಲ್ಲಿ ಇವರು ಖುರ್‍ಆನ್‍ನಿಂದ ಸತ್ಯದರ್ಶನ ಹೊಂದದಿರುವುದರಿಂದ ‘ಇದು ಹಳೇ ಸುಳ್ಳು’ ಎನ್ನಲಿರುವರು.
Footnotes
  • [1] ತಾವು ಎಲ್ಲದರಲ್ಲಿಯೂ ಮುಂದು ಎಂಬ ಅಹಂಭಾವ ಖುರೈಶಿಗಳಿಗಿತ್ತು. ಸತ್ಯವನ್ನು ಸ್ವೀಕರಿಸುವ ಪ್ರಜ್ಞಾವಂತಿಕೆ ಉಳಿದವರಿಗಿಂತ ನಮಗೇ ಹೆಚ್ಚು. ಆದ್ದರಿಂದ ಇಸ್ಲಾಮ್ ಧರ್ಮವು ಸತ್ಯವಾಗಿದ್ದರೆ ಉಳಿದವರಿಗಿಂತ ಮೊದಲು ನಾವೇ ಸ್ವೀಕರಿಸಬೇಕಿತ್ತು. ಬಡವರು, ಹಿಂದುಳಿದವರು ಸ್ವೀಕರಿಸುತ್ತಿರಲಿಲ್ಲ’ ಎಂದು ಅವರು ಹೇಳುತ್ತಿದ್ದರು. ಅವರಿಗೆ ಗುಣಾವಗುಣಗಳು ಭೌತಿಕಾನುಕೂಲ ಹಾಗೂ ಅದರ ಅಭಾವವನ್ನು ಅವಲಂಭಿಸಿದೆ ಎಂಬ ಮೌಡ್ಯದ ನಂಬಿಕೆಯಿಂದ ಈ ವಾದ ಹುಟ್ಟಿಕೊಂಡಿತ್ತು. ಖುರ್‍ಆನ್‍ನಿಂದ ಸತ್ಯದರ್ಶನ ಪಡಕೊಳ್ಳುವ ಭಾಗ್ಯ ಅವರಿಗಿಲ್ಲವಾದುದೇ ಅವರ ಈ ಬಡಬಡಿಕೆಗೆ ಕಾರಣ.