Kannada Translation

Ayah by Ayah

Tags

Download Links

Kannada Translation translation for Surah Al-Ahqaf — Ayah 6

46:6
وَإِذَا حُشِرَ ٱلنَّاسُ كَانُواْ لَهُمۡ أَعۡدَآءٗ وَكَانُواْ بِعِبَادَتِهِمۡ كَٰفِرِينَ ٦
ಜನರನ್ನು ಒಟ್ಟುಗೂಡಿಸಲ್ಪಡುವಾಗ ಅವರು ಇವರ ಶತ್ರುಗಳಾಗಿ ಬಿಡುವರು. ಇವರು ತಮ್ಮ ಆರಾಧನೆಯನ್ನೇ ನಿರಾಕರಿಸಿ ಬಿಡುವರು1.
Footnotes
  • [1] ಇಮಾಮ್ ಇಬ್ನುಜರೀರುತ್ತಿಬ್‍ರಿ ಹೇಳುತ್ತಾರೆ; ``ನಿಶ್ಚಯವಾಗಿಯೂ ಅವರ ಕೆಟ್ಟ ಅಭಿಪ್ರಾಯ ಹಾಗೂ ಚಿಂತಿಸಲಾಗದ, ಗ್ರಹಿಸಲಾಗದ ವಸ್ತುಗಳನ್ನು ಆರಾಧನೆಗಾಗಿ ಆಯ್ಕೆ ಮಾಡಿಟ್ಟ ಬಗೆ ಹಾಗೂ ಅವರಿಗೆ ಸರ್ವ ಅನುಗ್ರಹಗಳನ್ನೂ ಕೊಟ್ಟ ಹಾಗೂ ಸಂಕಷ್ಟಗಳಲ್ಲಿ ಮತ್ತು ಅಗತ್ಯ ಸಂದರ್ಭ ಗಳಲ್ಲಿ ಸಹಾಯವನ್ನು ಬೇಡಬೇಕಾದ ಅಲ್ಲಾಹನನ್ನು ಆರಾಧಿಸುವುದರಿಂದ ಅವರು ವಿಮುಕ್ತರಾದ ಕುರಿತು ಇಲ್ಲಿ ಎಚ್ಚರಿಸಲಾಗಿದೆ. ಅಲ್ಲಾಹನ ಹೊರತು ಬಹುದೇವಾರಾಧಕರು ಆರಾಧಿಸುವ ಮಲಕ್‍ಗಳು, ಈಸಾ, ಉಝೈರ್, ವಿಗ್ರಹಗಳು, ಜಿನ್ನ್ ಇವೇ ಮುಂತಾದ ಆರಾಧ್ಯರನ್ನೂ ಇಲ್ಲಿ ಉದ್ದೇಶಿಸಬಹುದು. ಆದರೆ ಇಲ್ಲಿ ವಿಗ್ರಹವಲ್ಲದ ವಸ್ತುಗಳಿಗೆ ವಿಗ್ರಹಗಳಿಗಿಂತ ಪ್ರಾಮುಖ್ಯತೆ ಕೊಟ್ಟು ಅವುಗಳಿಗೆ ಪ್ರಯೋಗಿಸುವ ಪದಗಳನ್ನು ಪ್ರಯೋಗಿಸಲಾಗಿದೆ. (ಅಬೂಸ್ಸುಊದ್ 8/78, ಬಹ್‍ರುಲ್ ಮುಹೀತ್ 8/55, ರಾಝೀ 27/6)