Kannada Translation

Ayah by Ayah

Tags

Download Links

Kannada Translation translation for Surah Muhammad — Ayah 15

47:15
مَّثَلُ ٱلۡجَنَّةِ ٱلَّتِي وُعِدَ ٱلۡمُتَّقُونَۖ فِيهَآ أَنۡهَٰرٞ مِّن مَّآءٍ غَيۡرِ ءَاسِنٖ وَأَنۡهَٰرٞ مِّن لَّبَنٖ لَّمۡ يَتَغَيَّرۡ طَعۡمُهُۥ وَأَنۡهَٰرٞ مِّنۡ خَمۡرٖ لَّذَّةٖ لِّلشَّٰرِبِينَ وَأَنۡهَٰرٞ مِّنۡ عَسَلٖ مُّصَفّٗىۖ وَلَهُمۡ فِيهَا مِن كُلِّ ٱلثَّمَرَٰتِ وَمَغۡفِرَةٞ مِّن رَّبِّهِمۡۖ كَمَنۡ هُوَ خَٰلِدٞ فِي ٱلنَّارِ وَسُقُواْ مَآءً حَمِيمٗا فَقَطَّعَ أَمۡعَآءَهُمۡ ١٥
ಧರ್ಮನಿಷ್ಟರಿಗೆ ವಾಗ್ಧಾನ ಮಾಡಲಾಗಿರುವ ಸ್ವರ್ಗದ ಉಪಮೆಯೇನೆಂದರೆ ಅದರಲ್ಲಿ ಕಳಂಕ ವಿಲ್ಲದ ತಿಳಿನೀರಿನ ಕಾಲುವೆಗಳಿವೆ. ಸ್ವಲ್ಪವೂ ರುಚಿ ಬದಲಾಗಿರದಂತಹ ಹಾಲಿನ ಕಾಲುವೆ ಗಳೂ ಕುಡಿಯುವವರಿಗೆ ಅತ್ಯಂತ ರುಚಿಕರವಾಗಿರುವ ಮದಿರೆಯ ಕಾಲುವೆಗಳೂ, ಸಂಸ್ಕರಿತ ಶುದ್ಧ ಜೇನಿನ ಕಾಲುವೆಗಳೂ ಇವೆ. ಅದರಲ್ಲಿ ಅವರಿಗಾಗಿ ಎಲ್ಲ ಬಗೆಯ ಫಲ ಮೂಲಗಳಿವೆ ಮತ್ತು ತಮ್ಮ ಪ್ರಭುವಿನ ಕಡೆಯಿಂದ ಅವರಿಗೆ ಕ್ಷಮೆಯೂ ಇದೆ. (ಇವರು) ಸದಾಕಾಲ ನರಕದಲ್ಲೇ ವಾಸಿಸಲಿರುವ ಜನರಿಗೆ ಸಮಾನರಾಗ ಬಲ್ಲರೇ? ಅವರಿಗೆ ಕರುಳುಗಳನ್ನು ಕತ್ತರಿಸಿ ಬಿಡುವಂತಹ ಕುದಿಯುವ ನೀರನ್ನು ಕುಡಿಸಲಾ ಗುವುದು1.
Footnotes
  • [1] ಹಾಲು, ಜೇನು, ಮದಿರೆ, ತಿಳಿಜಲ ಮುಂತಾದ ಸ್ವರ್ಗೀಯ ಪೇಯಗಳು ಇಹಲೋಕದ ಪ್ರಸ್ತುತ ಪೇಯಗಳಿಗಿಂತ ಸ್ವಾದ, ಗುಣಮಟ್ಟಗಳಲ್ಲಿ ಪರಮ ಮಟ್ಟದ್ದೂ ವಿಭಿನ್ನವೂ ಆಗಿರುತ್ತವೆ. ನಮ್ಮ ಸುಲಭ ಗ್ರಾಹ್ಯತೆಗಾಗಿ ಮಾತ್ರ ಅವುಗಳಿಗೆ ನಮಗೆ ಪರಿಚಿತವಾದ ಹೆರುಗಳನ್ನು ಹಾಕಲಾಗಿದೆ. ಸ್ವರ್ಗದಲ್ಲಿ ನಮ್ಮ ಯೋಚನೆಗೂ ನಿಲುಕದಂತಹ ಸುಖಾನುಕೂಲಗಳೂ, ರಸಾನುಭೂತಿಗಳೂ ಇವೆಯೆಂದು ಖುರ್‍ಆನ್ - ಹದೀಸ್‍ಗಳಿಂದ ಸ್ಪಷ್ಟವಾಗಿದೆ.