Kannada Translation

Ayah by Ayah

Tags

Download Links

Kannada Translation translation for Surah Muhammad — Ayah 16

47:16
وَمِنۡهُم مَّن يَسۡتَمِعُ إِلَيۡكَ حَتَّىٰٓ إِذَا خَرَجُواْ مِنۡ عِندِكَ قَالُواْ لِلَّذِينَ أُوتُواْ ٱلۡعِلۡمَ مَاذَا قَالَ ءَانِفًاۚ أُوْلَٰٓئِكَ ٱلَّذِينَ طَبَعَ ٱللَّهُ عَلَىٰ قُلُوبِهِمۡ وَٱتَّبَعُوٓاْ أَهۡوَآءَهُمۡ ١٦
ಅವರ ಪೈಕಿ ಕೆಲವರು ತಮ್ಮ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಾರೆ. ಆ ಬಳಿಕ ನಿಮ್ಮಲ್ಲಿಂದ ಹೊರಟು ಹೋದಾಗ, ವೇದಜ್ಞಾನದ ಅನುಗ್ರಹ ನೀಡಲ್ಪಟ್ಟವರೊಡನೆ, ಅವರು (ಪರಿಹಾಸಪೂರ್ವ) ಈಗ ಅವರು ಹೇಳಿದ್ದೇನು?’ ಎಂದು ಕೇಳುತ್ತಾರೆ. ಅಂಥವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರುವನು. ಮತ್ತು ಅವರು ತಮ್ಮ ಸ್ವೇಚ್ಛೆಗಳ ಬೆನ್ನು ಹತ್ತಿರುವರು1.
Footnotes
  • [1] ಮದೀನಾದಲ್ಲಿದ್ದ ಕೆಲವು ಕಪಟ ವಿಶ್ವಾಸಿಗಳ ದುಷ್ಟತನವನ್ನು ಇಲ್ಲಿ ಬಯಲುಗೊಳಿಸಲಾಗಿದೆ. ನಬಿಯವರ ಪ್ರವಚನ ಕೇಳಿ ಹೊರಬಂದಾಗ ಅವರು ಸಹಾಬಿಗಳೊಂದಿಗೆ; “ಈಗ ನಬಿಯವರು ಹೇಳಿದ ಮಾತಿನಲ್ಲಿ ಏನೂ ತಿರುಳು ಇಲ್ಲವಲ್ಲ. ಅವರ ಆ ಮಾತಿನಲ್ಲಿ ಏನು ವಿಶೇಷತೆಯಿದೆ ಮುಂತಾದ ಮಾತುಗಳನ್ನು ಆಡುತ್ತಿದ್ದರು. ಸಹಾಬಿಗಳ ವಿಶ್ವಾಸದಲ್ಲಿ ಚಂಚಲತೆ ಮೂಡಿಸುವುದು ಅವರ ಉದ್ದೇಶವಾಗಿತ್ತು. ಇವರು ಸ್ವೇಚ್ಛೆಯನ್ನು ಅನುಸರಿಸಿದ ನೀಚರು. ಸತ್ಯದ ಬೆಳಕು ಪ್ರವೇಶಿಸದಂತೆ ಅವರ ಹೃದಯಗಳಿಗೆ ಅಲ್ಲಾಹನು ಮುದ್ರೆಯೊತ್ತಿದ್ದಾನೆ ಎಂದಿಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಥಾತ್ ನಬಿಯವರ ಸನ್ನಿಧಾನದಲ್ಲಿ ಸಹಾಬಿಯಾಗಿ ಬಹಳ ಸುಲಭದಲ್ಲಿ ಪರಮೋನ್ನತ ಸ್ಥಾನ ಹಾಗೂ ಸ್ವರ್ಗ ಪಡೆಯುವ ಅಭೂತ ಪೂರ್ವ ಅವಕಾಶವನ್ನು ಕಳಕೊಂಡು ಶಾಶ್ವತ ನರಕವಾಸಿಗಳಾದ ಹತಭಾಗ್ಯರಿವರು.