Kannada Translation

Ayah by Ayah

Tags

Download Links

Kannada Translation translation for Surah Muhammad — Ayah 18

47:18
فَهَلۡ يَنظُرُونَ إِلَّا ٱلسَّاعَةَ أَن تَأۡتِيَهُم بَغۡتَةٗۖ فَقَدۡ جَآءَ أَشۡرَاطُهَاۚ فَأَنَّىٰ لَهُمۡ إِذَا جَآءَتۡهُمۡ ذِكۡرَىٰهُمۡ ١٨
ಇನ್ನು ಲೋಕಾಂತ್ಯವು ಹಠಾತ್ತನೆ ಅವರಿಗೆ ಬಂದೆರಗುವುದನ್ನೇ ಹೊರತು ಬೇರೇನನ್ನಾದರೂ ಅವರು ಕಾಯುತ್ತಿರುವರೇ? ಆದರೆ ಅದರ ಕುರುಹುಗಳು ಬಂದೇ ಬಿಟ್ಟಿವೆ1. ಇನ್ನು ಅದುವೇ ಅವರಿಗೆ ಬಂದುಬಿಟ್ಟಾಗ, ಅವರ ನೆನಪು ಅವರಿಗೆ ಪ್ರಯೋಜನವಾಗುವುದೆಂತು?
Footnotes
  • [1] ಪ್ರವಾದಿವರ್ಯ ರ ನಿಯೋಗವೇ ಅದರ ಸಂಕೇತ. ಅವರು ಅಂತ್ಯ ಪ್ರವಾದಿ ತಾನೇ? ಪ್ರವಾದಿವರ್ಯ ರು ತಮ್ಮ ಸ್ವಂತ ತೋರು ಬೆರಳು ಹಾಗೂ ನಡು ಬೆರಳನ್ನು ತೋರಿಸುತ್ತಾ ಹೀಗೆ ಹೇಳಿದರು; ನಾನು ಮತ್ತು ಅಂತಿಮ ಘಳಿಗೆ ಈ ಎರಡು ಬೆರಳುಗಳಂತೆ ನಿಕಟವಾಗಿ ನನ್ನನ್ನು ನಿಯೋಗಿಸಲಾಗಿದೆ. (ಬುಖಾರಿ ಮುಸ್ಲಿಂ) ಇದಲ್ಲದೆ ಇನ್ನೂ ಅನೇಕ ಸಂಕೇತಗಳು ಪ್ರವಾದಿ ವಚನಗಳಲ್ಲಿ ಪ್ರಸ್ತಾವಿಸಲ್ಪಟ್ಟಿವೆ.