Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 10

48:10
إِنَّ ٱلَّذِينَ يُبَايِعُونَكَ إِنَّمَا يُبَايِعُونَ ٱللَّهَ يَدُ ٱللَّهِ فَوۡقَ أَيۡدِيهِمۡۚ فَمَن نَّكَثَ فَإِنَّمَا يَنكُثُ عَلَىٰ نَفۡسِهِۦۖ وَمَنۡ أَوۡفَىٰ بِمَا عَٰهَدَ عَلَيۡهُ ٱللَّهَ فَسَيُؤۡتِيهِ أَجۡرًا عَظِيمٗا ١٠
(ಸಂದೇಶವಾಹಕರೇ,) ತಮ್ಮೊಂದಿಗೆ (ಹುದೈಬಿ ಯಾದಲ್ಲಿ) ಒಪ್ಪಂದ ಮಾಡಿಕೊಂಡವರು ವಾಸ್ತವದಲ್ಲಿ ಅಲ್ಲಾಹನೊಂದಿಗೆ ಒಪ್ಪಂದ ಮಾಡಿಕೊಂಡರು. ಅವರ ಹಸ್ತಗಳ ಮೇಲೆ ಅಲ್ಲಾಹನ ಜ್ಞಾನ ಹಸ್ತವಿದೆ1. ಹೀಗಾಗಿ ಯಾರು ಈ ಒಪ್ಪಂದವನ್ನು ಉಲ್ಲಂಘಿಸುತ್ತಾರೆ ಅವನು ತನ್ನ ವಿರುದ್ಧವೇ ಆ ಉಲ್ಲಂಘನೆ ನಡೆಸುತ್ತಾನೆ. ಯಾರು ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಪಾಲಿಸುವನೋ ಅವನಿಗೆ ಅಲ್ಲಾಹನು ಶೀಘ್ರವೇ ಘನವೆತ್ತ ಪ್ರತಿಫಲವನ್ನು ದಯಪಾಲಿಸುವನು.
Footnotes
  • [1] ಅರ್ಥಾತ್ ಅವರ ಒಪ್ಪಂದಗಳ ಬಗ್ಗೆ ಅಲ್ಲಾಹನಿಗೆ ಅರಿವು ಇದೆ. ಅದರ ಪ್ರತಿಫಲವೂ ಇದೆ. ಇಲ್ಲಿ ‘ಯದುಲ್ಲಾಹ್’ ಎಂಬ ಅಲಂಕಾರಿಕ ಪ್ರಯೋಗವು ಅಲ್ಲಾಹನ ಪ್ರಚಂಡ ಅರಿವಿಗೆ ಸಂಕೇತ. ಅಲ್ಲಾಹನ ರಸೂಲರ ಪವಿತ್ರ ಹಸ್ತವನ್ನು ಮುಟ್ಟಿ ಸಹಾಬಿಗಳು ಪ್ರತಿಜ್ಞೆ ಮಾಡಿದಾಗ ನಿಜದಲ್ಲಿ ಅದು ಅಲ್ಲಾಹನ ಮುಂದೆ ಪ್ರತಿಜ್ಞೆ ಮಾಡಿದುದಕ್ಕೆ ಸಮಾನವಾಗಿದೆ ಎಂಬ ತಾತ್ಪರ್ಯವನ್ನು ಹುಟ್ಟಿಸುವುದೇ ಇದರ ಉದ್ದೇಶ. ಇಲ್ಲಿ ಅಲ್ಲಾಹನ ರಸೂಲರು ಕೇವಲ ಅಲ್ಲಾಹನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಿಜದಲ್ಲಿ ಒಪ್ಪಂದ ಮಾಡಲ್ಪಟ್ಟವರು ಅಲ್ಲಾಹನಾಗಿರುವನು. ಯಾರು ರಸೂಲರನ್ನು ಅನುಸರಿಸುತ್ತಾರೆ ಅವನು ಅಲ್ಲಾಹನನ್ನು ಅನುಸರಿಸಿದನು (4/80) ಎಂಬ ಮಾತು ಇದಕ್ಕೆ ಪೂರಕವಾಗಿದೆ. ಪ್ರವಾದಿವರ್ಯ ರು ಕುರೈಶರ ಬಳಿಗೆ ದೂತರಾಗಿ ಕಳುಹಿಸಿದ ಉಸ್ಮಾನ್ ರವರನ್ನು ಹತ್ಯೆ ಮಾಡಲಾಯಿತೆಂಬ ಸುದ್ದಿ ಹರಡಿದಾಗ ಮಕ್ಕಾದ ಹುದೈಬಿಯಾ ಎಂಬಲ್ಲಿ ಮುಸ್ಲಿಮರು ಒಂದು ಬೊಗರಿ ಮರದ ಕೆಳಗೆ ಪ್ರವಾದಿವರ್ಯ ರ ಕೈ ಹಿಡಿದು ಒಪ್ಪಂದ ಮಾಡಿದ್ದರು. (ಕಶ್ಶಾಫ್ 4/265)