Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 11

48:11
سَيَقُولُ لَكَ ٱلۡمُخَلَّفُونَ مِنَ ٱلۡأَعۡرَابِ شَغَلَتۡنَآ أَمۡوَٰلُنَا وَأَهۡلُونَا فَٱسۡتَغۡفِرۡ لَنَاۚ يَقُولُونَ بِأَلۡسِنَتِهِم مَّا لَيۡسَ فِي قُلُوبِهِمۡۚ قُلۡ فَمَن يَمۡلِكُ لَكُم مِّنَ ٱللَّهِ شَيۡـًٔا إِنۡ أَرَادَ بِكُمۡ ضَرًّا أَوۡ أَرَادَ بِكُمۡ نَفۡعَۢاۚ بَلۡ كَانَ ٱللَّهُ بِمَا تَعۡمَلُونَ خَبِيرَۢا ١١
(ಸಂದೇಶವಾಹಕರೇ,) ನಿಮ್ಮ ಜತೆ ಬಾರದೆ ಉಳಿದ ಗುಡ್ಡಗಾಡು ಜನಾಂಗದವರು1 ಖಂಡಿತ ನಿಮ್ಮ ಬಳಿ ಬಂದು; “ನಮ್ಮ ಸೊತ್ತು ಮತ್ತು ಮನೆ ಮಂದಿಯ ಚಿಂತೆಯು ನಮಗೆ ತಡೆಯಾದುವು. ನಮ್ಮ ಕ್ಷಮೆಗಾಗಿ ತಾವು ಪ್ರಾರ್ಥಿಸಿರಿ” ಎಂದು ಹೇಳುವರು. ಇವರು ತಮ್ಮ ಹೃದಯಗಳಲ್ಲಿಲ್ಲದ ಮಾತುಗಳನ್ನು ನಾಲಗೆಗಳಿಂದ ಆಡುತ್ತಾರೆ. ಹೇಳಿರಿ; “ಹಾಗಾದರೆ ಅಲ್ಲಾಹನು ನಿಮಗೆ ಯಾವುದೇ ದೋಷವನ್ನು ಮಾಡಲು ಇಚ್ಛಿಸಿದರೆ, ಅಥವಾ ನಿಮಗೆ ಯಾವುದೇ ಗುಣ ವನ್ನು ಅವನು ಇಚ್ಛಿಸಿದರೆ ಅಲ್ಲಾಹನಿಂದ ಯಾವುದೇ ವಸ್ತುವನ್ನು ಅಧೀನಗೊಳಿಸಬಲ್ಲವರು ಯಾರಿದ್ದಾರೆ? ಆದರೆ ನೀವು ಮಾಡುವ ಕರ್ಮದ ಬಗ್ಗೆ ಅಲ್ಲಾಹನು ಸೂಕ್ಷ್ಮಜ್ಞಾನಿಯಾಗಿದ್ದಾನೆ.
Footnotes
  • [1] ಪ್ರವಾದಿವರ್ಯ ರು ಉಮ್ರಾ ನಿರ್ವಹಣೆಗಾಗಿ ಮಕ್ಕಾಕೆ ಹೊರಡುವ ಸಂದರ್ಭದಲ್ಲಿ ಕೆಲವು ಅರಬಿ ಗೋತ್ರಗಳನ್ನು ತಮ್ಮೊಂದಿಗೆ ಹೊರಡುವಂತೆ ಕರೆ ನೀಡಿದ್ದರು. ಆದರೆ ಜುಹೈನ, ಮುಝೈನ, ಅಶ್‍ಜಅï, ಗಿಫಾರ್ ಗೋತ್ರಗಳು ಕರೆಯನ್ನು ಸ್ವೀಕರಿಸಲಿಲ್ಲ. ಸತ್ಯವಿಶ್ವಾಸವು ಹೃದಯಗಳಲ್ಲಿ ಇನ್ನೂ ರೂಢಮೂಲವಾಗದಿದ್ದ ಗ್ರಾಮೀಣರು ಒಂದು ವೇಳೆ ಖುರೈಶರನ್ನು ಎದುರು ಹಾಕಿಕೊಳ್ಳುವ ಪ್ರಸಂಗ ಬಂದರೆ ಮುಸ್ಲಿಮರಿಗೆ ಭಾರೀ ನಾಶ - ನಷ್ಟವುಂಟಾದೀತೆಂದು ಲೆಕ್ಕ ಹಾಕಿದ್ದರು. ಹೀಗೆ ಕುರೈಶರಿಗೆ ಹೆದರಿ ಹೋಗದೆ ಹಿಂಜರಿದ ಹಳ್ಳಿಗರ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆ.