Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 15

48:15
سَيَقُولُ ٱلۡمُخَلَّفُونَ إِذَا ٱنطَلَقۡتُمۡ إِلَىٰ مَغَانِمَ لِتَأۡخُذُوهَا ذَرُونَا نَتَّبِعۡكُمۡۖ يُرِيدُونَ أَن يُبَدِّلُواْ كَلَٰمَ ٱللَّهِۚ قُل لَّن تَتَّبِعُونَا كَذَٰلِكُمۡ قَالَ ٱللَّهُ مِن قَبۡلُۖ فَسَيَقُولُونَ بَلۡ تَحۡسُدُونَنَاۚ بَلۡ كَانُواْ لَا يَفۡقَهُونَ إِلَّا قَلِيلٗا ١٥
ನೀವು ಸಮರಾರ್ಜಿತ ಸೊತ್ತನ್ನು ಪಡೆಯಲು ಹೊರಟಾಗ ಹಿಂದುಳಿದ ಈ ಜನರು-ನಮ್ಮನ್ನೂ ನೀವು (ತಡೆಯದೆ) ಬಿಟ್ಟು ಬಿಡಿರಿ. ನಿಮ್ಮ ಜೊತೆ ನಾವು ಹಿಂಬಾಲಿಸುತ್ತೇವೆ ಎಂದು ನಿಮ್ಮೊಡನೆ ಖಂಡಿತ ಹೇಳುವರು. ಇವರು ಅಲ್ಲಾಹನ ಮಾತನ್ನು ಬದಲಿಸಿ ಬಿಡಬೇಕೆಂದು ಇಚ್ಛಿಸುತ್ತಾರೆ1. ಹೇಳಿರಿ; ‘ಖಂಡಿತ ನೀವು ನಮ್ಮ ಜೊತೆ ಬರುವಂತಿಲ್ಲ. ಅಲ್ಲಾಹನು ಈ ಮೊದಲೇ ಇದನ್ನು ಹೇಳಿರುತ್ತಾನೆ’. ಆಗ ಇವರು - ‘ಇಲ್ಲ, ನೀವು ನಮ್ಮ ಬಗ್ಗೆ ಅಸೂಯೆಪಡುತ್ತಿರುವಿರಿ’ ಎಂದು ಹೇಳುವರು. ಆದರೆ ಗ್ರಹಿಸಿಕೊಳ್ಳುವವರು ಇವರಲ್ಲಿ ಅಲ್ಪ ಜನ ಮಾತ್ರವೇ ಹೊರತು ಇನ್ನಾರೂ ಯೋಚಿಸುವುದಿಲ್ಲ.
Footnotes
  • [1] ‘ಅಲ್ಲಾಹನ ಮಾತು’ ಎಂದರೆ ಖೈಬರ್‍ನಲ್ಲಿ ಸಿಗಲಿರುವ ಸಮರಾರ್ಜಿತ ಸೊತ್ತನ್ನು ಹುದೈಬಿಯಾ ಘಟನೆಯಲ್ಲಿ ಭಾಗವಹಿಸಿದವರಿಗೆ ಮಾತ್ರ ಕೊಡಲಾಗುವುದೆಂಬ ಅಲ್ಲಾಹನ ವಾಗ್ದಾನ.