Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 27

48:27
لَّقَدۡ صَدَقَ ٱللَّهُ رَسُولَهُ ٱلرُّءۡيَا بِٱلۡحَقِّۖ لَتَدۡخُلُنَّ ٱلۡمَسۡجِدَ ٱلۡحَرَامَ إِن شَآءَ ٱللَّهُ ءَامِنِينَ مُحَلِّقِينَ رُءُوسَكُمۡ وَمُقَصِّرِينَ لَا تَخَافُونَۖ فَعَلِمَ مَا لَمۡ تَعۡلَمُواْ فَجَعَلَ مِن دُونِ ذَٰلِكَ فَتۡحٗا قَرِيبًا ٢٧
ನಿಜಕ್ಕೂ ಅಲ್ಲಾಹನು ತನ್ನ ದೂತರಿಗೆ ಸ್ವಪ್ನವನ್ನು ಸಂಪೂರ್ಣ ಸತ್ಯವಾಗಿ ನಿಜಗೊಳಿಸಿದನು. ಅಂದರೆ ಅಲ್ಲಾಹನಿಚ್ಛಿಸಿದರೆ, ನೀವು ಸಮಾಧಾನ ಚಿತ್ತರಾಗಿ ಕೇಶ ಮುಂಡನ ಮಾಡಿದವರೂ, ಕೂದಲು ಕತ್ತರಿಸಿಕೊಂಡವರೂ ಆಗಿ ಯಾವುದೇ ಭಯವಿಲ್ಲದೆ ಮಸ್ಜಿದುಲ್ ಹರಾಮನ್ನು ಖಂಡಿತ ಪ್ರವೇಶಿಸುವಿರಿ ಎಂಬ ಸ್ವಪ್ನವನ್ನು. ಆದರೆ ನೀವು ಅರಿಯದಿದ್ದುದನ್ನು ಅವನು ಅರಿತಿದ್ದನು1. ಆದುದರಿಂದ ಅದಕ್ಕೆ (ಮಕ್ಕಾ ಪ್ರವೇಶಕ್ಕೆ) ಹೊರತಾಗಿ ಅವನು ಸನ್ನಿಹಿತವಾದ ಒಂದು ವಿಜಯವನ್ನು (ಖೈಬರ್ ವಿಜಯವನ್ನು) ನಿಮಗೆ ದಯಪಾಲಿಸಿದನು.
Footnotes
  • [1] ಈ ಸೂಕ್ತವು ಅವತೀರ್ಣಗೊಂಡಾಗಿನ ಪರಿಸ್ಥಿತಿ ಗಮನಾರ್ಹ. ಪ್ರವಾದಿವರ್ಯ ರು ಹೊರಡುವ ಮುನ್ನ ಸಹಾಬಿಗಳೊಂದಿಗೆ ತಾನು ಶಾಂತಿಪೂರ್ವಕವಾಗಿ ಉಮ್ರಾ ನಿರ್ವಹಿಸುತ್ತಿರುವುದಾಗಿ ಸ್ವಪ್ನ ಕಂಡಿದ್ದರು. ಸಹಾಬಿಗಳಿಗೆ ಇದನ್ನು ತಿಳಿಸಿದಾಗ ಅವರು ಸಂತೋಷಪಟ್ಟಿದ್ದರು. ಹಿ. ಶ. 6ರಲ್ಲಿ ಪ್ರವಾದಿಯವರು ತಮ್ಮ ಅನುಯಾಯಿಗಳೊಂದಿಗೆ ಕಅಬಾ ಸಂದರ್ಶಿಸಲು ಮದೀನಾದಿಂದ ಮಕ್ಕಾದೆಡೆಗೆ ಹೊರಟಾಗ ಸತ್ಯನಿಷೇಧಿಗಳು ಅವರನ್ನು ನಡುದಾರಿಯಲ್ಲೇ ತಡೆದರು. ಮತ್ತು ಮೇಲ್ನೋಟಕ್ಕೆ ಅತ್ಯಂತ ಅಪಮಾನಕಾರಿಯೆಂದು ತೋರುವಂತಹ ಒಂದು ಒಪ್ಪಂದ ಮಾಡಿಕೊಳ್ಳುವಂತೆ ಪ್ರವಾದಿಯವರನ್ನು ಬಲವಂತಪಡಿಸಿದರು. ಪ್ರವಾದಿ ಮತ್ತವರ ಅನುಯಾಯಿಗಳು ತೀರಾ ದುಃಖತಪ್ತರಾಗಿ ಅಲ್ಲಿಂದಲೇ ಮರಳಿ ಬರಬೇಕಾಯಿತು. ಮುಂದೆಂದಾದರೂ ವಿಶ್ವಾಸಿಗಳಿಗೆ ಮಕ್ಕಾ ಪಟ್ಟಣವನ್ನು ಗೆದ್ದು ಪ್ರವೇಶಿಸಲು ಸಾಧ್ಯವಾದೀತೆಂದು ಊಹಿಸಲೂ ಕೂಡಾ ಸಾಧ್ಯವಿರಲಿಲ್ಲ. ಪರಿಸ್ಥಿತಿ ಅಷ್ಟು ಪ್ರತಿಕೂಲವಾಗಿತ್ತು. ಪ್ರವಾದಿಯ ಸ್ವಪ್ನ ನಿಜವಾಗಲಿಲ್ಲವೆಂದು ಹೇಳಿ ಕಪಟಿಗಳು ಗೇಲಿ ಮಾಡತೊಡಗಿದರು. ಅವರಿಗೆ ನೀಡಲಾದ ಉತ್ತರವಿದು. ಪ್ರವಾದಿಯ ಸ್ವಪ್ನ ಸತ್ಯಸಂಧವಾಗಿದ್ದು ಅದೆಂದೂ ಸುಳ್ಳಾಗದು. ಸ್ವಪ್ನದಲ್ಲಿ ಕಂಡದ್ದು ಕೇವಲ ಮಕ್ಕಾ ಪ್ರವೇಶದ ರೂಪ. ಇದೇ ವರ್ಷದಲ್ಲಿ ಎಂದಲ್ಲ. ಖುರ್‍ಆನಿನ ಈ ಸುವಾರ್ತೆಯ ಪ್ರಕಾರ ಪ್ರವಾದಿವರ್ಯ ರ ಸ್ವಪ್ನವು ಮುಂದಿನ ವರ್ಷದಲ್ಲೇ ಸಾಕ್ಷಾತ್ಕಾರಗೊಂಡಿತು. ಹಿ. ಶ. 8ರಲ್ಲಿ ಪ್ರವಾದಿವರ್ಯ ರು ಮತ್ತು ಅವರ ಸಂಗಾತಿಗಳು ವಿಜಯಿಗಳಾಗಿ ಮಕ್ಕಾ ಪಟ್ಟಣವನ್ನು ಪ್ರವೇಶಿಸಿದರು.