Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 3

48:3
وَيَنصُرَكَ ٱللَّهُ نَصۡرًا عَزِيزًا ٣
ಅಲ್ಲಾಹನು ತಮ್ಮ ಹಿಂದಿನ ಹಾಗೂ ಮುಂದಿನ ಎಲ್ಲ ಎಡವುಗಳನ್ನು ತಮಗೆ ಕ್ಷಮಿಸಲಿಕ್ಕಾಗಿ,1 ತಮ್ಮ ಮೇಲೆ ತನ್ನ ಅನುಗ್ರಹವನ್ನು ಪರಿಪೂರ್ಣಗೊಳಿಸಲಿಕ್ಕಾಗಿ, ತಮಗೆ ಸನ್ಮಾರ್ಗವನ್ನು ನೆಲೆಗೊಳಿಸಲಿಕ್ಕಾಗಿ ಮತ್ತು ತಮಗೆ ಘನವೆತ್ತ ಸಹಾಯವನ್ನು ನೀಡಲಿಕ್ಕಾಗಿ.
Footnotes
  • [1] ಇಲ್ಲಿ ಪ್ರವಾದಿವರ್ಯರ ಪಾಲಿಗೆ ‘ದ್ಸನ್ಬ್’ ಎಂದರೆ ಯಾವುದೇ ಆರಾಧನೆಯನ್ನು ಅಥವಾ ಅನುವದನೀಯವಾದ ಯಾವುದೇ ಕಾರ್ಯವನ್ನು ಮಾಡಲಿಚ್ಛಿಸಿದ ನಂತರ ಅತ್ಯಂತ ಶ್ರೇಷ್ಠವಾದುದನ್ನು ತೊರೆಯಲು ಕಾರಣವಾಗುವ ಸ್ಥಿತಿ. ಇದು ಯಥಾರ್ಥದಲ್ಲಿ ತಪ್ಪಾಗಿರುವುದಿಲ್ಲ. ಆದರೆ ಪ್ರವಾದಿವರ್ಯರ ದೃಷ್ಟಿಯಲ್ಲಿರುವ ಪರಿಪೂರ್ಣತೆಯ ಉನ್ನತ ಮಾನದಂಡದ ಆಧಾರದಲ್ಲಿ ಆ ಧರ್ಮಸಮ್ಮತ ಕಾರ್ಯ ಕೂಡಾ ಅತಿ ಗಂಭೀರ ಪಾಪವೆಂದು ಅವರು ಪರಿಗಣಿಸಿದ್ದರು. ಇಲ್ಲಿನ ‘ಲಕ’ ಎಂಬ ಉಪಸರ್ಗಕ್ಕೆ ‘ನಿಮ್ಮ ಕಾರಣದಿಂದ’ ಎಂದೂ ಅರ್ಥೈಸಬಹುದು. ಆದ್ದರಿಂದ ಈ ವಾಕ್ಯಾಂಶಕ್ಕೆ ‘ಅಲ್ಲಾಹನು ನಿಮ್ಮ ಪೂರ್ವಜರ ಹಾಗೂ ನಿಮ್ಮ ಅನುಯಾಯಿಗಳ ತಪ್ಪುಗಳನ್ನು ನಿಮ್ಮ ಕಾರಣದಿಂದ ಕ್ಷಮಿಸಲಿಕ್ಕಾಗಿ ಎಂಬ ವ್ಯಾಖ್ಯಾನವೂ ಇದೆ. (ಖಾಝಿನ್, ರೂಹುಲ್ ಬಯಾನ್) ಇಮಾ ಮ್ ಸುಬ್‍ಕಿ ಹಾಗೂ ಇಬ್ನುಅತಿಯ್ಯ ವ್ಯಾಖ್ಯಾನಿಸಿದ ಪ್ರಕಾರ ಈ ಸೂಕ್ತದ ಉದ್ದೇಶ ಪ್ರವಾದಿಗಳಿಂದ ಪಾಪ ಸಂಭವಿಸಿತೆಂಬುದನ್ನು ಸಾಬೀತುಪಡಿಸುವುದಾಗಲಿ, ತನ್ನಿಮಿತ್ತ ಕ್ಷಮೆಗಾಗಿ ಬೇಡಿಕೊಳ್ಳುವುದಾಗಲಿ ಅಲ್ಲ. ಪರಂತು ಪ್ರವಾದಿಗಳ ಸ್ಥಾನವನ್ನು ಎತ್ತರಗೊಳಿಸುವುದು ಹಾಗೂ ಗೌರವವನ್ನು ಹೆಚ್ಚಿಸುವುದು ಎಂದಾಗಿದೆ. ಏಕೆಂದರೆ ಪ್ರಸ್ತುತ ಸೂಕ್ತದ ಆದಿಯಲ್ಲಿ ಪ್ರವಾದಿಗಳ ಮಹತ್ವ ಹಾಗೂ ಒಳಿತುಗಳ ಪ್ರಕಾಶನವನ್ನು ಅಲ್ಲಾಹನು ಸಾದರಪಡಿಸಿರುವನು. ಪ್ರಥಮ ವಾಗಿ ಉಂಟಾದ ದೇವ ಸುವಾರ್ತೆಯೆಂದರೆ ಐಹಿಕ ಪಾರತ್ರಿಕವಾದ ಸಕಲ ಶ್ರೇಯಸ್ಸುಗಳು ತಮಗೆ ಸಾಧ್ಯಗೊಳಿಸಲಾಗಿದೆ ಎಂದಾಗಿದೆ. ನಂತರ ಈ ಶ್ರೇಯಸ್ಸಿನ ಪರಿಪೂರ್ಣತೆ ಹಾಗೂ ಪಾರಮ್ಯವನ್ನು ಪ್ರಕಟಗೊಳಿಸಲಾಗಿದೆ. ಇಮಾಮ್ ರಾಝಿ ವಿವರಿಸಿದ ಪ್ರಕಾರ, ಪ್ರವಾದಿವರ್ಯ ರಿಗೆ ಮೂರು ಅವಸ್ಥೆಗಳುಂಟು. ಅಲ್ಲಾಹನೊಂದಿಗಿನ ಅವಸ್ಥೆ, ಸ್ವತಾವಸ್ಥೆ, ಅಪರ ಸಹವಾಸಾವಸ್ಥೆ. ಒಂದನೆಯದರಲ್ಲಿ ಅಲ್ಲಾಹನನ್ನು ಏಕನಾಗಿಸುವುದು. ಎರಡನೆಯದರಲ್ಲಿ ತಾವು ಅಲ್ಲಾಹನಲ್ಲಿ ಕ್ಷಮೆ ಕೇಳುವುದು. ಪಾಪ ಸುರಕ್ಷಿತತೆಯನ್ನು ಸ್ವತಕ್ಕಾಗಿ ಆರಾಧನಾ ಕ್ರಮವೆಂಬಂತೆ ಕೇಳುವುದು. ಮೂರನೆಯದರಲ್ಲಿ ಅಲ್ಲಾಹನೊಡನೆ ವಿಶ್ವಾಸಿ ಗಳಿಗಾಗಿ ತಾವು ಪ್ರಾರ್ಥಿಸಿರಿ. ಅವರಿಗಾಗಿ ಪಾಪ ಮುಕ್ತಿ ಬೇಡಿರಿ ಎಂದಾಗಿದೆ. (ರಾಝಿ)