Kannada Translation

Ayah by Ayah

Tags

Download Links

Kannada Translation translation for Surah Al-Hujurat — Ayah 13

49:13
يَٰٓأَيُّهَا ٱلنَّاسُ إِنَّا خَلَقۡنَٰكُم مِّن ذَكَرٖ وَأُنثَىٰ وَجَعَلۡنَٰكُمۡ شُعُوبٗا وَقَبَآئِلَ لِتَعَارَفُوٓاْۚ إِنَّ أَكۡرَمَكُمۡ عِندَ ٱللَّهِ أَتۡقَىٰكُمۡۚ إِنَّ ٱللَّهَ عَلِيمٌ خَبِيرٞ ١٣
ಓ ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಸೃಷ್ಟಿಸಿದೆವು. ನೀವು ಪರಸ್ಪರ ಗುರುತಿಸಿಕೊಳ್ಳುವ ಸಲುವಾಗಿ ನಾವು ನಿಮ್ಮನ್ನು ವಿವಿಧ ಜನಾಂಗಗಳಾಗಿಯೂ, ಗೋತ್ರ ಗಳಾಗಿಯೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಟನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷ್ಮಜ್ಞನೂ ಆಗಿರುತ್ತಾನೆ1.
Footnotes
  • [1] ಮನುಷ್ಯನ ಘನತೆಗೆ ಅವನ ಕುಲ ಗೋತ್ರಗಳು ಮಾನದಂಡವಲ್ಲ. ಅವನ ಉದಾತ್ತ ಗುಣಗಳಿಗೆ ಕಾರಣವಾಗುವ ಧರ್ಮಭಕ್ತಿಯೇ ಮಾನದಂಡ ಎಂಬ ಮಹೋನ್ನತ ತತ್ವವನ್ನು ಈ ಆಯತ್ ಕಲಿಸುತ್ತಿದೆ. ಕುಲ, ವರ್ಗ, ಗೋತ್ರಗಳ ವಿಂಗಡನೆಯನ್ನು ಪ್ರತಿಷ್ಠೆ, ಉಚ್ಚ - ನೀಚತ್ವಕ್ಕೆ ದುರ್ಬಳಕೆ ಮಾಡದೆ ಕೇವಲ ಹೆಸರು, ವಿಳಾಸಗಳ ಗುರುತಿಸುವಿಕೆಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಸೂಚನೆಯೂ ಇದೆ. ನಿಮ್ಮನ್ನು ಕುಲ-ಗೋತ್ರಗಳನ್ನಾಗಿ ವಿಂಗಡಿಸಿದ್ದು ನೀವು ಪರಸ್ಪರ ಗುರುತಿಸಿಕೊಳ್ಳುವ ಸಲುವಾಗಿ ಮಾತ್ರ ಎಂದಿಲ್ಲಿ ಹೇಳಲಾಗಿದೆ. ಅಂದರೆ ಕುಲ-ಗೋತ್ರಗಳು ವ್ಯಕ್ತಿಗಳನ್ನು ವ್ಯಕ್ತಿಗಳಿಂದ ಬೇರ್ಪಡಿಸಿ ತಿಳಿಯುವ ಒಂದು ಐಡೆಂಟಿಟಿ ಮಾತ್ರ. ಔನ್ನತ್ವಕ್ಕೆ ಮಾನದಂಡ ಅವರವರ ಧರ್ಮ ಶ್ರದ್ಧೆ ಮಾತ್ರ. ಯಾವನು ಹೆಚ್ಚು ಧರ್ಮ ಶ್ರದ್ಧನೋ ಅವನು ಅಲ್ಲಾಹನ ಬಳಿ ಹೆಚ್ಚು ಮಾನ್ಯನು.