Kannada Translation

Ayah by Ayah

Tags

Download Links

Kannada Translation translation for Surah Al-Hujurat — Ayah 5

49:5
وَلَوۡ أَنَّهُمۡ صَبَرُواْ حَتَّىٰ تَخۡرُجَ إِلَيۡهِمۡ لَكَانَ خَيۡرٗا لَّهُمۡۚ وَٱللَّهُ غَفُورٞ رَّحِيمٞ ٥
ತಾವು ಅವರ ಬಳಿಗೆ ಹೊರಟು ಬರುವ ತನಕ ಅವರು ತಾಳ್ಮೆ ವಹಿಸುತ್ತಿದ್ದರೆ ಅದು ಅವರಿಗೆ ಬಹಳ ಒಳ್ಳೆಯದಿತ್ತು. ಅಲ್ಲಾಹನು ಅತಿ ಕ್ಷಮಾಶೀಲನೂ ಕರುಣಾವಾರಿಧಿಯೂ ಆಗಿರುತ್ತಾನೆ1.
Footnotes
  • [1] ಎಪ್ಪತ್ತು ಮಂದಿ ಇದ್ದ ತಂಡವೊಂದು ಬನೂ ತÀಮೀಮ್ ಬುಡಕಟ್ಟು ವರ್ಗದಿಂದ ಮದೀನಾಕ್ಕೆ ಪ್ರವಾದಿವರ್ಯ ರ ಭೇಟಿಗೆ ಬಂದಿತ್ತು. ಆಗ ಮಧ್ಯಾಹ್ನ ಸಮಯ. ಮಸೀದಿ ಪಕ್ಕದ ತನ್ನ ನಿವಾಸದಲ್ಲಿ ಪ್ರವಾದಿವರ್ಯ ರು ಮಧ್ಯಾಹ್ನದ ಲಘು ನಿದ್ದೆಯಲ್ಲಿದ್ದರು. ಬಂದ ತಂಡದವರು ನಬಿಯವರನ್ನು ಮಸೀದಿ ಯಲ್ಲಿ ಕಾಣದಾದಾಗ ಜೋರಾಗಿ ಕರೆದರು. ಸ್ವಭಾವತಃ ಒರಟು ಸ್ವಭಾವದವರಾಗಿದ್ದ ಆ ಗುಡ್ಡಗಾಡು ವರ್ಗದವರಿಗೆ ಮಾನ್ಯ ವ್ಯಕ್ತಿಗಳನ್ನು ಹಾಗೆ ಕೂಗಿ ಕರೆಯ ಬಾರದು ಎಂಬ ಪ್ರಜ್ಞೆ ಕೂಡಾ ಇರಲಿಲ್ಲ. ಆ ಘಟನೆಯನ್ನು ವಿರೋಧಿಸುತ್ತಾ ಈ ಆಯತ್ ಅವತೀರ್ಣವಾಗಿದ್ದರೂ, ಇದರ ನಿಯಮವು ಎಲ್ಲರಿಗೂ ಅನ್ವಯ.