Kannada Translation

Ayah by Ayah

Tags

Download Links

Kannada Translation translation for Surah Al-Hujurat — Ayah 6

49:6
يَٰٓأَيُّهَا ٱلَّذِينَ ءَامَنُوٓاْ إِن جَآءَكُمۡ فَاسِقُۢ بِنَبَإٖ فَتَبَيَّنُوٓاْ أَن تُصِيبُواْ قَوۡمَۢا بِجَهَٰلَةٖ فَتُصۡبِحُواْ عَلَىٰ مَا فَعَلۡتُمۡ نَٰدِمِينَ ٦
ಸತ್ಯವಿಶ್ವಾಸಿಗಳೇ, ಅಶ್ರದ್ಧನೊಬ್ಬನು ನಿಮ್ಮ ಬಳಿ ಗೇನಾದರೂ ಸುದ್ದಿ ತಂದರೆ ಅದರ ಬಗ್ಗೆ ಸ್ಪಷ್ಟವಾಗಿ (ಸತ್ಯಾಸತ್ಯತೆಯನ್ನು) ತಿಳಿದುಕೊಳ್ಳಿರಿ. ನೀವು ತಿಳಿಯದೆ ಯಾವುದೇ ಒಂದು ಸಮೂಹಕ್ಕೆ ಹಾನಿ ಮಾಡಿ, ಆ ಬಳಿಕ ನಿಮ್ಮ ಕೃತ್ಯದ ಬಗ್ಗೆ ಪಶ್ಚಾ ತ್ತಾ ಪಪಡುವಂತಾಗದಿರಲು (ಈ ಆದೇಶ)1
Footnotes
  • [1] ಬನೂ ಮುಸ್ತಲಕ್ ಗೋತ್ರದಿಂದ ಝಕಾತ್ ಸೊತ್ತುಗಳನ್ನು ಸಂಗ್ರಹಿಸಿಕೊಂಡು ತರುವಂತೆ ವಲೀದ್ ಬಿನ್ ಉಖ್‍ಬಾರವರನ್ನು ಪ್ರವಾದಿವರ್ಯ ರು ಕಳುಹಿಸಿದರು. ಆದರೆ ಆ ಕಡೆಗೆ ಹೊರಟ ವಲೀದರಿಗೆ ಭಯ ಆವರಿಸಿ ಅರ್ಧದಾರಿಯಿಂದಲೇ ವಾಪಾಸು ಬಂದರು. ‘ಆ ಗೋತ್ರದವರು ಧರ್ಮಭ್ರಷ್ಟರಾಗಿದ್ದು ಝಕಾತ್ ಕೊಡಲು ನಿರಾಕರಿಸಿದ್ದಾರೆ’ ಎನ್ನುವ ತಪ್ಪು ಮಾಹಿತಿಯನ್ನು ಪ್ರವಾದಿವರ್ಯ ರಿಗೆ ತಿಳಿಸಿದರು. ಆಗ ಕೆಲವು ಸಹಾಬಿಗಳು ಆ ಗೋತ್ರದವರ ವಿರುದ್ಧ ಸೈನಿಕ ಕಾರ್ಯಾಚರಣೆಗಿಳಿಯುವ ಬಗ್ಗೆ ಯೋಚಿಸಿದರು. ಆಗ ಈ ಆಯತ್ ಅವತೀರ್ಣಗೊಂಡಿತು. ಒಂದು ವಿಭಾಗದ ನಿಜಸ್ಥಿತಿ ಗ್ರಹಿಸಿಕೊಳ್ಳದೆ ಅವಸರಪಟ್ಟು ಕಾರ್ಯಾಚರಣೆಗಿಳಿದರೆ ಮುಂದೆ ಖೇದಪಡಬೇಕಾದೀತು ಎಂಬ ಸಾರ್ವತ್ರಿಕ ಸಾರ್ವಕಾಲೀಕ ಆದೇಶವನ್ನಿಲ್ಲಿ ಕಾಣಬಹುದು. ವಲೀದ್‍ರವರ ಮಾತನ್ನು ನಂಬಿ ಏಕಾಏಕಿ ಸೈನಿಕ ಕಾರ್ಯಾಚರಣೆ ನಡೆಸಿದರೆ ನಿರಪರಾಧಿಗಳಾದ ಬನೂ ಮುಸ್ತಲಖ್ ಗೋತ್ರದವರು ವೃಥಾ ದಂಡನೆಗೊಳಗಾಗುತ್ತಿದ್ದರು. ಆದರೆ ಪ್ರವಾದಿವರ್ಯ ರು ಸಂಯಮನ ಪಾಲಿಸಿದ್ದರಿಂದ ಅಪಾಯ ತಪ್ಪಿತು. ಇದೇ ರೀತಿ ನೀವು ಕೂಡಾ ಎಲ್ಲ ವಿಷಯಗಳಲ್ಲಿ ಸಂಯಮನ ಪಾಲಿಸಬೇಕು ಎಂದು ಸೂಚಿಸಲಾಗಿದೆ.