Kannada Translation

Ayah by Ayah

Tags

Download Links

Kannada Translation translation for Surah An-Najm — Ayah 20

53:20
وَمَنَوٰةَ ٱلثَّالِثَةَ ٱلۡأُخۡرَىٰٓ ٢٠
(ಹೇಳಿರಿ) ನೀವು `ಲಾತ್’, `ಉಝ್ಝಾ’ ಮತ್ತು ಮೂರನೆಯ `ಮನಾತ್’ನ ಕುರಿತು ವಿವೇ ಚಿಸಿ ನೋಡಿದ್ದೀರಾ? (ಅವುಗಳು ಆರಾಧಿಸಲ್ಪಡಲು ಅರ್ಹವೇ?)1
Footnotes
  • [1] ಲಾತ್ ಅಂದರೆ ತಾಇಫ್‍ನವರು ಆರಾಧಿಸುತ್ತಿದ್ದ ವಿಗ್ರಹ. ಉಝ್ಝಾ ಅಂದರೆ ಮಕ್ಕಾ ಮತ್ತು ತಾಇಫ್‍ನ ಮಧ್ಯೆ ಇದ್ದ ಒಂದು ವೃಕ್ಷ. ಇದು ಅವರದೊಂದು ಕ್ಷೇತ್ರದಲ್ಲಿದ್ದು ಖುರೈಶಿಗಳು ಅದನ್ನು ಪೂಜಿಸುತ್ತಿದ್ದರು. ಮಕ್ಕಾ - ಮದೀನಾಗಳ ನಡುವಣ ಮುಶಲ್ಲಲ್ ಎಂಬಲ್ಲಿ ನಿಲ್ಲಿಸಲಾಗಿದ್ದ ಒಂದು ವಿಗ್ರಹವಾಗಿತ್ತು ಮನಾತ್. ಖುಸಾಅï, ಹುದೈಲ್. ಔಸ್ ಹಾಗೂ ಖಝ್ರಜ್ ಗೋತ್ರದವರು ಅದಕ್ಕೆ ಆರಾಧಿಸುತ್ತಿದ್ದರು. ಅರಬರು ಅನೇಕ ವಿಗ್ರಹಗಳಿಗೆ ಪೂಜಿಸುತ್ತಿದ್ದರೂ ಆ ಪೈಕಿ ಈ ಮೂರು ವಸ್ತುಗಳು ಅತ್ಯಂತ ಪ್ರಸಿದ್ಧವಾಗಿದ್ದವು.