Kannada Translation

Ayah by Ayah

Tags

Download Links

Kannada Translation translation for Surah Al-Qamar — Ayah 1

54:1
ٱقۡتَرَبَتِ ٱلسَّاعَةُ وَٱنشَقَّ ٱلۡقَمَرُ ١
ಅಂತ್ಯ ಸಮಯ ಸನ್ನಿಹಿತವಾಯಿತು ಮತ್ತು ಚಂದ್ರನು ಹೋಳಾದನು1.
Footnotes
  • [1] *ಅಂತ್ಯದಿನದ ಕುರುಹಾಗಿ ಚಂದ್ರನು ಹೋಳಾದ ಘಟನೆಯನ್ನು ಈ ಅಧ್ಯಾಯದ ಪ್ರಥಮ ಸೂಕ್ತದಲ್ಲೇ ಹೇಳಿರುವುದರಿಂದ ಕ್ವಮರ್ (ಚಂದ್ರ) ಎಂಬ ಹೆಸರು ಬಂದಿದೆ. ವಿಶ್ವದ ಅಂತ್ಯ ಸನ್ನಿಹಿತವಾದುದರ ಒಂದು ಪ್ರಧಾನ ಪುರಾವೆಯಾಗಿತ್ತು ಚಂದ್ರ ಸೀಳಾದುದು. ಅದು ನಬಿವರ್ಯ ರ ಒಂದು ಅದ್ಭುತ ಪವಾಡ ಕೂಡಾ ಆಗಿತ್ತು. ಹಿಜ್‍ರಾಕ್ಕೆ ಐದು ವರ್ಷಗಳ ಮುನ್ನ ನಬಿಯವರು ಮಕ್ಕಾದಲ್ಲಿದ್ದಾಗ ನಡೆದ ಘಟನೆಯಿದು. ಇದು ಬುಖಾರಿ, ಮುಸ್ಲಿಮ್ ಸಮೇತ ಅನೇಕ ಹದೀಸ್‍ಗಳಲ್ಲೂ ಖುರ್‍ಆನ್ ವ್ಯಾಖ್ಯಾನ ಗ್ರಂಥಗಳಲ್ಲಿ ಯಾವುದೇ ಅಭಿಪ್ರಾಯ ಬೇಧವಿಲ್ಲದೆ ಸಾಬೀತಾದ ವಿಚಾರ. ಮುಶ್ರಿಕರು ದೃಷ್ಟಾಂತ ಕೇಳಿದಾಗ ನಬಿಯವರ ಇಶಾರೆ ಮೇರೆಗೆ ಚಂದ್ರನು ಎರಡು ಹೋಳಾಗಿ ಪರ್ವತದ ಎರಡು ದಿಕ್ಕುಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಮುಶ್ರಿಕರು; `ಇದು ಜಾಲ ವಿದ್ಯೆ’ ಎನ್ನುತ್ತಾ ವಚನ ಭಂಗ ಮಾಡಿಬಿಟ್ಟರು. (ನೋಡಿರಿ ಬುಖಾರಿ, ಬಾಬು ಸುಆಲಿಲ್ ಮುಶ್ರಿಕೀನ್, ನಂಬ್ರ: 3437. ಮುಸ್ಲಿಂ, ನಂಬ್ರ 2800, ತುರ್ಮುದಿ, ನಂಬ್ರ: 32,8, ಮುಸ್ತದ್‍ರಕ್ 2/471)