Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 10

57:10
وَمَا لَكُمۡ أَلَّا تُنفِقُواْ فِي سَبِيلِ ٱللَّهِ وَلِلَّهِ مِيرَٰثُ ٱلسَّمَٰوَٰتِ وَٱلۡأَرۡضِۚ لَا يَسۡتَوِي مِنكُم مَّنۡ أَنفَقَ مِن قَبۡلِ ٱلۡفَتۡحِ وَقَٰتَلَۚ أُوْلَٰٓئِكَ أَعۡظَمُ دَرَجَةٗ مِّنَ ٱلَّذِينَ أَنفَقُواْ مِنۢ بَعۡدُ وَقَٰتَلُواْۚ وَكُلّٗا وَعَدَ ٱللَّهُ ٱلۡحُسۡنَىٰۚ وَٱللَّهُ بِمَا تَعۡمَلُونَ خَبِيرٞ ١٠
ಆಕಾಶಗಳ ಹಾಗೂ ಭೂಮಿಯ ಉತ್ತರಾಧಿಕಾರವು ಅಲ್ಲಾಹನದ್ದಾಗಿರುವಾಗ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡದಿರಲು ನಿಮಗೇನು ನ್ಯಾಯವಿದೆ?1 ನಿಮ್ಮ ಪೈಕಿ (ಮಕ್ಕಾ) ವಿಜಯಪ್ರಾಪ್ತಿಯ ಮೊದಲಿನಿಂದ ಖರ್ಚು ಮಾಡಿದ ಮತ್ತು ಹೋರಾಟ ನಡೆಸಿದ ಜನರು (ಹಾಗೆ ಮಾಡದವರಿಗೆ) ಸಮಾನರಲ್ಲ. ಅವರು ಅನಂತರ ಖರ್ಚು ಮಾಡಿದ ಹಾಗೂ ಹೋರಾಟ ನಡೆಸಿದವರಿಗಿಂತ ಮಹತ್ತಾದ ಪದವಿ ಉಳ್ಳವರಾಗಿದ್ದಾರೆ. ಅದಾಗ್ಯೂ ಅಲ್ಲಾಹನು ಉಭಯತ್ರರಿಗೂ ಅತ್ಯಂತ ಉತ್ತಮ ಪ್ರತಿಫಲದ ವಾಗ್ದಾನ ಮಾಡಿರುವನು. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲವನಾಗಿದ್ದಾನೆ.
Footnotes
  • [1] ನೀವೇಕೆ ಧರ್ಮಕಾರ್ಯದಲ್ಲಿ ವೆಚ್ಚ ಮಾಡುವುದಿಲ್ಲ? ಎಂಬ ಪ್ರಶ್ನೆಯ ಜೊತೆಗೆ ಭೂಮ್ಯಾಕಾಶಗಳ ಒಡೆತನ ಅಲ್ಲಾಹನದ್ದು ಎಂದು ಹೇಳಿರುವುದರ ಮರ್ಮವೇನೆಂದರೆ ಸೊತ್ತುಗಳೆಲ್ಲವೂ ಅಲ್ಲಾಹನದ್ದಾಗಿದ್ದು ಅದನ್ನು ವೆಚ್ಚ ಮಾಡಲು ನೀವೇಕೆ ಲೋಭ ತೋರುತ್ತೀರಿ? ಎಂಬುದಾಗಿದೆ. ಅಷ್ಟೇ ಅಲ್ಲ; ಸೊತ್ತು ಅಲ್ಲಾಹನದ್ದಾಗಿದ್ದೂ ಕೂಡಾ ಅದನ್ನು ವೆಚ್ಚ ಮಾಡಿದಾಗ ನಿಮಗೆ ಅವನು ಪುಣ್ಯ ಕೊಡುವುದು ಅವನ ಬಲು ದೊಡ್ಡ ಔದಾರ್ಯ ಎಂಬ ಸೂಚನೆಯೂ ಇದೆ.