Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 12

57:12
يَوۡمَ تَرَى ٱلۡمُؤۡمِنِينَ وَٱلۡمُؤۡمِنَٰتِ يَسۡعَىٰ نُورُهُم بَيۡنَ أَيۡدِيهِمۡ وَبِأَيۡمَٰنِهِمۖ بُشۡرَىٰكُمُ ٱلۡيَوۡمَ جَنَّٰتٞ تَجۡرِي مِن تَحۡتِهَا ٱلۡأَنۡهَٰرُ خَٰلِدِينَ فِيهَاۚ ذَٰلِكَ هُوَ ٱلۡفَوۡزُ ٱلۡعَظِيمُ ١٢
ಸತ್ಯವಿಶ್ವಾಸಿಗಳನ್ನೂ ಸತ್ಯವಿಶ್ವಾಸಿನಿಯರನ್ನೂ ಅವರ ಪ್ರಕಾಶವು ಅವರ ಮುಂದೆಯೂ ಅವರ ಬಲ ಭಾಗದಲ್ಲೂ ಸಾಗುತ್ತಿರುವುದನ್ನು ತಾವು ದರ್ಶಿಸುವ ದಿನ!1 (ಅಂದು ಅವರಲ್ಲಿ ಹೇಳಲಾಗುವುದು;) ಇಂದು ನಿಮಗೆ ಶುಭವಾರ್ತೆ ಎಂದರೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿದ್ದು ಅವುಗಳಲ್ಲಿ ನೀವು ಸ್ಥಿರವಾಸಿಗಳಾಗಿರುವಿರಿ. ಇದುವೇ ಮಹಾ ಯಶಸ್ಸು.
Footnotes
  • [1] ನರಕದ ಮೇಲಿನ ಸಿರಾತ್ ಸೇತುವೆ ದಾಟಿ ಹೋಗಲು ಬೆಳಕಿನ ಅವಶ್ಯಕತೆಯಿದೆ. ಅಲ್ಲಿ ಬೆಳಕಾಗಿ ಬರುವುದು ಇಲ್ಲಿನ ಸುನ್ನತ್‍ಗಳು. ಪ್ರತಿಯೊಬ್ಬರಿಗೂ ಅವರವರ ಸುನ್ನತ್‍ಗಳಿಗೆ ತಕ್ಕ ಅವರವರ ಬೆಳಕಿನಲ್ಲಿ ಪ್ರಖರತೆ, ವಿಸ್ತಾರ ಇರುವುದು. ಇದು ಅನೇಕ ಹದೀಸ್‍ಗಳಿಂದ ಸ್ಪಷ್ಟವಾದ ಆಶಯ. ವುರhೂ ಮಾಡಿದ ಕಾರಣದಿಂದ ವುರhೂವಿನ ಅಂಗಾಂಗಗಳು ಬೆಳಗುತ್ತಿರುವುದು ಎಂದೂ ಹದೀಸ್‍ನಲ್ಲಿದೆ. ಇಲ್ಲಿ ಸದ್ಭಕ್ತರ ಎದುರಲ್ಲೂ ಬಲಬದಿಯಲ್ಲೂ ಬೆಳಕು ಇರುವುದು ಎಂದು ಹೇಳಲಾಗಿದೆ. ಬಲಬದಿಯಲ್ಲಿ ಮಾತ್ರ ಬೆಳಕು ಹೇಗೆ? ಅದರಿಂದ ವಿಶೇಷ ಪ್ರಯೋಜನವೇನು? ಎಡಬದಿಯಲ್ಲಿ ಯಾಕೆ ಇಲ್ಲ ಮುಂತಾದ ಪ್ರಶ್ನೆಗಳಿಗೆ ಉತ್ತರ ತಿಳಿದವನು ಅಲ್ಲಾಹು ಮಾತ್ರ. ಸರ್ವ ಶಕ್ತನೂ ಎಲ್ಲ ಪ್ರವರ್ತಿಗಳಲ್ಲಿ ನಿರ್ಧಿಷ್ಟ ಧ್ಯೇಯ ಹಾಗೂ ತಂತ್ರಜ್ಞಾನ ಇರುವವನೂ ಆದ ಅಲ್ಲಾಹನು ಹೇಳಿದ ವಿಚಾರಗಳ ನಿಜಸ್ಥಿತಿ ನಮಗೆ ತಿಳಿಯಲಿ, ತಿಳಿಯದೆ ಇರಲಿ ಯಥಾವತ್ತಾಗಿ ವಿಶ್ವಾಸವಿರಿಸುವುದು ನಮ್ಮ ಬಾಧ್ಯತೆ.