Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 16

57:16
۞ أَلَمۡ يَأۡنِ لِلَّذِينَ ءَامَنُوٓاْ أَن تَخۡشَعَ قُلُوبُهُمۡ لِذِكۡرِ ٱللَّهِ وَمَا نَزَلَ مِنَ ٱلۡحَقِّ وَلَا يَكُونُواْ كَٱلَّذِينَ أُوتُواْ ٱلۡكِتَٰبَ مِن قَبۡلُ فَطَالَ عَلَيۡهِمُ ٱلۡأَمَدُ فَقَسَتۡ قُلُوبُهُمۡۖ وَكَثِيرٞ مِّنۡهُمۡ فَٰسِقُونَ ١٦
ಸತ್ಯವಿಶ್ವಾಸಿಗಳಿಗೆ, ಅವರ ಹೃದಯವು ಅಲ್ಲಾಹನ ಸ್ಮರಣೆಯ ಕಡೆಗೆ ಹಾಗೂ ಅವನಿಂದ ಅವತೀ ರ್ಣಗೊಂಡ ಸತ್ಯದ (ಖುರ್‍ಆನಿನ) ಕಡೆಗೆ ಮಣಿಯಲು ಮತ್ತು ಅವರು ಈ ಹಿಂದೆ ಗ್ರಂಥ ನೀಡಲ್ಪಟ್ಟವರಂತೆ ಆಗದಿರಲು ಕಾಲ ವಿನ್ನೂ ಕೂಡಿ ಬಂದಿಲ್ಲವೇ?1 ಕೊನೆಗೆ ಆ ವೇದದವರಿಗೆ ಒಂದು ದೀರ್ಘಕಾಲ ಕಳೆದು ಹೋಯಿತು. ಹೀಗಾಗಿ ಅವರ ಹೃದಯಗಳು ಕಠಿಣವಾದುವು ಮತ್ತು (ಇಂದು) ಅವರಲ್ಲಿ ಹೆಚ್ಚಿನವರು ಧಿಕ್ಕಾರಿ ಗಳಾಗಿರುವರು.
Footnotes
  • [1] ಮುಸ್ಲಿಮರಾದ ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಒಂದು ವಾಕ್ಯವಾಗಿದೆ; ``ಸತ್ಯವಿಶ್ವಾಸಿಗಳಿಗೆ ಕಾಲವಿನ್ನೂ ಕೂಡಿ ಬಂದಿಲ್ಲವೇ?” ಎಂಬ ತಾಕೀತು. ಇದು ಸರ್ವಸ್ವವನ್ನು ಧರ್ಮಕ್ಕಾಗಿ ಅರ್ಪಿಸಿದ್ದ ಸಹಾಬಿಗಳ ಪೈಕಿ ಕೆಲವರಲ್ಲಿ ಒಂದಿಷ್ಟು ಉದಾಸೀನ ತಲೆದೋರಿದಾಗ ಬಂದ ಎಚ್ಚರಿಕೆ ಎಂಬುದನ್ನು ನಾವು ಗಮನಿಸಬೇಕು. ಮರಣದವರೆಗೂ ಅಲ್ಲಾಹನ ಸ್ಮರಣೆ, ಧರ್ಮ, ಪರಲೋಕ ಮುಂತಾದ ವಿಷಯಗಳಿಂದ ಒಂದು ಕ್ಷಣವೂ ನಿರ್ಲಕ್ಷ ತಾಳದೆ ಸದಾ ಸಮಯ ಜಾಗೃತಪ್ರಜ್ಞೆಯಲ್ಲೇ ಇರಬೇಕು ಎಂದು ಈ ವಾಕ್ಯ ನಮಗೆ ಎಚ್ಚರಿಕೆ ನೀಡುತ್ತಿದೆ.