Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 17

57:17
ٱعۡلَمُوٓاْ أَنَّ ٱللَّهَ يُحۡيِ ٱلۡأَرۡضَ بَعۡدَ مَوۡتِهَاۚ قَدۡ بَيَّنَّا لَكُمُ ٱلۡأٓيَٰتِ لَعَلَّكُمۡ تَعۡقِلُونَ ١٧
ಚೆನ್ನಾಗಿ ತಿಳಿದುಕೊಳ್ಳಿರಿ. ಅಲ್ಲಾಹನು ಭೂಮಿಯನ್ನು, ಅದು ಸತ್ತ ಬಳಿಕ ಜೀವಂತಗೊಳಿಸುತ್ತಾನೆ1. ನೀವು ವಿವೇಚಿಸುವಂತಾಗಲು ನಾವು ನಿಮಗೆ ನಿದರ್ಶನಗಳನ್ನು ವಿವರಿಸಿ ಕೊಟ್ಟಿದ್ದೇವೆ.
Footnotes
  • [1] ``ನಿರ್ಜೀವ ಭೂಮಿಯನ್ನು ಸಜೀವಗೊಳಿಸುತ್ತಾನೆ'' ಎಂಬ ಇಲ್ಲಿನ ಮಾತನ್ನು ಅದÀರ ಹಿಂದಿನ ಆಯತ್‍ಗೆ ತಾಳೆ ಹಾಕಿದಾಗ ಸಿಗುವ ತಾತ್ಪರ್ಯವು ಬಹಳ ಮಾರ್ಮಿಕವಾಗಿದೆ. ಮಳೆ ಸುರಿದಾಗ ಒಣಗಿ ಭಣಗುಡುತ್ತಿದ್ದ ನೆಲ ಅದ್ಹೇಗೆ ಹಚ್ಚ ಹಸಿರಿನಿಂದ ಕಂಗೊಳಿಸಿ ಚೈತನ್ಯ ಪೂರ್ಣವಾಗುವುದೋ ಹಾಗೇಯೇ ಅಧರ್ಮ, ಅಶ್ರದ್ಧೆ, ಐಹಿಕ ಗುಂಗು, ಪಾಪಕರ್ಮ ಮುಂತಾದವುಗಳ ದೆಸೆಯಿಂದ ಬರಡಾದ ಹೃದಯಗಳಿಗೆ ದೇವಸ್ಮರಣೆಯು ಆಧ್ಯಾತ್ಮಿಕ ಹರಿದ್ವರ್ಣವನ್ನು ನೀಡಿ ಚೇತನ್ಯಪೂರ್ಣಗೊಳಿಸುತ್ತದೆ ಎಂದರ್ಥ.