Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 4

57:4
هُوَ ٱلَّذِي خَلَقَ ٱلسَّمَٰوَٰتِ وَٱلۡأَرۡضَ فِي سِتَّةِ أَيَّامٖ ثُمَّ ٱسۡتَوَىٰ عَلَى ٱلۡعَرۡشِۖ يَعۡلَمُ مَا يَلِجُ فِي ٱلۡأَرۡضِ وَمَا يَخۡرُجُ مِنۡهَا وَمَا يَنزِلُ مِنَ ٱلسَّمَآءِ وَمَا يَعۡرُجُ فِيهَاۖ وَهُوَ مَعَكُمۡ أَيۡنَ مَا كُنتُمۡۚ وَٱللَّهُ بِمَا تَعۡمَلُونَ بَصِيرٞ ٤
ಅವನೇ ಭೂಮಿ-ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ಅನಂತರ ಅವನು ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನು. ಭೂಮಿಯೊಳಗೆ ಪ್ರವೇಶಿಸುವ ಹಾಗೂ ಅದರಿಂದ ಹೊರಬರುವ ಮತ್ತು ಆಕಾಶದಿಂದ ಇಳಿಯುವ ಮತ್ತು ಅದಕ್ಕೆ ಏರಿಹೋಗುವ ಎಲ್ಲವನ್ನೂ ಅವನು ತಿಳಿಯುವನು. ನೀವೆಲ್ಲಿದ್ದರೂ ಅವನು ನಿಮ್ಮ ಜೊತೆಗಿದ್ದಾನೆ1. ನೀವು ಮಾಡುವುದೆಲ್ಲವನ್ನೂ ಅಲ್ಲಾಹು ನೋಡುವವನಾಗಿದ್ದಾನೆ.
Footnotes
  • [1] ‘ಅವನು ನಿಮ್ಮ ಜೊತೆಗಿದ್ದಾನೆ’ ಎಂಬ ವಾಕ್ಯಾಂಶವು ವ್ಯಾಖ್ಯಾನ ವಿಧೇಯವೆಂಬ ವಿಷಯದಲ್ಲಿ ಸಮುದಾಯವು ಒಮ್ಮತ ತಾಳಿದೆ. ಆದ್ದರಿಂದ `ಸತ್ತೆಯ ಜೊತೆಗೆ' ಎಂಬ ಅದರ ಬಾಹ್ಯಾರ್ಥದ ಮೇಲೆ ಹೊರಿಸುವಂತಿಲ್ಲ. ಅಂದ ಮೇಲೆ ಅದರ ಅರ್ಥವು ಜ್ಞಾನ ಹಾಗೂ ಶಕ್ತಿ - ಸಾಮಥ್ರ್ಯ ಎಂದಾಗಿದೆ. ಖುರ್ತುಬಿ ಇದೇ ಅರ್ಥವನ್ನು ಕೊಟ್ಟಿದ್ದಾರೆ. ಬೈಳಾವಿಯವರು, ಅಲ್ಲಾಹನ ಅರಿವು, ಆತನ ಶಕ್ತಿಯು ನಿಮ್ಮಿಂದ ಬಿಟ್ಟಗಲಿ ಹೋಗದು ಎಂದು ಅರ್ಥೈಸಿದ್ದಾರೆ. ಆಲೂಸಿ ಹೇಳುತ್ತಾರೆ; ಈ ಸೂಕ್ತವು ಅಲ್ಲಾಹನ ಅರಿವು ಅವರನ್ನು ಸುತ್ತುವರಿದಿದೆ ಎಂಬುದರ ಉದಾಹರಣೆಯಾಗಿಯೂ ಅವರೆಲ್ಲಿದ್ದರೂ ಆತನ ಆಧಿಪತ್ಯದಿಂದ ಹೊರಬರಲು ಅಸಾಧ್ಯವೆಂಬುದರ ಆಲಂಕಾರಿಕ ಪ್ರಯೋಗವಾಗಿಯೂ ಬಂದಿದೆ. ಒಟ್ಟಿನಲ್ಲಿ ಸಲಫ್ ಹಾಗೂ ಖಲಫ್‍ನಿಂದ ಉದೃತವಾದ ಈ ಅಭಿಪ್ರಾಯಗಳು ಅಲ್ಲಾಹನ ಗ್ರಂಥದಲ್ಲಿ ವ್ಯಾಖ್ಯಾನ ನಿರೂಪಣೆ ಸಲ್ಲದೆಂಬ ವಾದವನ್ನು ಖಂಡಿಸುತ್ತದೆ. ಇಲ್ಲದಿದ್ದರೆ ಪ್ರವಾದಿ ನೂಹರ ನಾವೆಯ ಬಗ್ಗೆ ಪ್ರಸ್ತಾಪಗೊಂಡ `ನಮ್ಮ ಕಣ್ಗಾವಲಿನಲ್ಲಿ (ಬಿಅಅïಯುನಿನಾ) ನಾವೆಯು ನಡೆಯುವುದು' ಎಂಬ ವಾಕ್ಯವನ್ನಾಗಲಿ ಮೂಸಾರನ್ನುದ್ದೇಶಿಸಿ ಹೇಳಲಾದ `ನನ್ನ ಮೇಲ್ನೋಟದಲ್ಲಿ (ಅಲಾ ಐನೀ) ನೀವು ಪೋಷಿಸಲ್ಪಡಲಿಕ್ಕಾಗಿ (20-39) ಎಂಬ ಮಾತನ್ನಾಗಲಿ ಮತ್ತು ನಾವು ಅವನೆಡೆಗೆ ಮೆಟ್ಟಿನ ಅಟ್ಟೆಗಿಂತಲೂ ನಿಕಟವಿದ್ದೇವೆ' ಎಂಬ ನುಡಿಯನ್ನಾಗಲಿ `ಕಪ್ಪು ಶಿಲೆ (ಹಜರುಲ್ ಅಸ್ವದ್) ಭೂಮಿಯಲ್ಲಿ ಅಲ್ಲಾಹನ ಬಲಗೈ (ಯಮೀನ್) ಆಗಿದೆ' ಮುಂತಾದ ಪ್ರವಾದಿ ನುಡಿಯನ್ನಾಗಲಿ ಗ್ರಹಿಸುವುದು ಸಾಧ್ಯವಿರುತ್ತಿರಲಿಲ್ಲ. ಸಮಗ್ರ ವಿವರಣೆಗೆ ಫತ್ಹುಲ್ ಬಾರಿ 13/417, ಉಮ್ದತುಲ್ ಖಾರಿ 25/181, ರಾಝಿ 2/194 ಅವಲೋಕಿಸಬಹುದು.