Kannada Translation

Ayah by Ayah

Tags

Download Links

Kannada Translation translation for Surah Al-Mujadila — Ayah 11

58:11
يَٰٓأَيُّهَا ٱلَّذِينَ ءَامَنُوٓاْ إِذَا قِيلَ لَكُمۡ تَفَسَّحُواْ فِي ٱلۡمَجَٰلِسِ فَٱفۡسَحُواْ يَفۡسَحِ ٱللَّهُ لَكُمۡۖ وَإِذَا قِيلَ ٱنشُزُواْ فَٱنشُزُواْ يَرۡفَعِ ٱللَّهُ ٱلَّذِينَ ءَامَنُواْ مِنكُمۡ وَٱلَّذِينَ أُوتُواْ ٱلۡعِلۡمَ دَرَجَٰتٖۚ وَٱللَّهُ بِمَا تَعۡمَلُونَ خَبِيرٞ ١١
ಸತ್ಯವಿಶ್ವಾಸಿಗಳೇ, ನಿಮ್ಮ ಸಭೆಗಳಲ್ಲಿ ಸ್ಥಳವಕಾಶ ಮಾಡಿಕೊಡಿರೆಂದು ನಿಮ್ಮೊಡನೆ ಹೇಳಲ್ಪಟ್ಟಾಗ ನೀವು ಸ್ಥಳವಕಾಶ ಮಾಡಿಕೊಡಿರಿ. ಅಲ್ಲಾಹನು ನಿಮಗೆ ವಿಶಾಲತೆಯನ್ನು ದಯಪಾಲಿಸುವನು, ನಿಮ್ಮೊಡನೆ ಎದ್ದು ಹೋಗಿರಿ ಎಂದು ಹೇಳಲ್ಪಟ್ಟಾಗ ನೀವು ಎದ್ದು ಹೋಗಿರಿ. ನಿಮ್ಮ ಪೈಕಿ ಸತ್ಯವಿಶ್ವಾಸವುಳ್ಳವರಿಗೆ ಮತ್ತು ಜ್ಞಾನವು ನೀಡಲ್ಪಟ್ಟಿರುವವರಿಗೆ ಅಲ್ಲಾಹನು ಉನ್ನತ ಪದವಿಗಳನ್ನು ದಯಪಾಲಿಸುವನು1. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞಾನಿಯು.
Footnotes
  • [1] ನಬಿಯವರ ಬಳಿ ಕೆಲವು ಪ್ರಮುಖ ವ್ಯಕ್ತಿಗಳು ಬಂದಾಗ ಪಕ್ಕದಲ್ಲಿ ಮೊದಲೇ ಹಾಜರಿದ್ದ ಕೆಲವರಲ್ಲಿ ಸ್ಥಳಾವಕಾಶ ಮಾಡಿಕೊಡುವಂತೆ ನಬಿಯವರು ಹೇಳಿದರು. ಇದರಿಂದ ಮುಖ್ಯ ವ್ಯಕ್ತಿಗಳು ಅವರ ಪಕ್ಕದಲ್ಲಿ ಕುಳಿತುಕೊಳ್ಳುವ ಅವಕಾಶವುಂಟಾಯಿತು. ಆಗ ಮೊದಲೇ ಕೂತಿದ್ದ ಕೆಲವರು ದೂರಕ್ಕೆ ಸ್ಥಳಾಂತರಗೊಳ್ಳುವುದು ಸಹಜ ತಾನೆ? ಇದು ಅನೀತಿ ಎಂದು ಕಪಟಿಗಳು ಪ್ರಚಾರ ಮಾಡತೊಡಗಿದರು. ನಬಿಯವರ ಕ್ರಮ ಅನೀತಿಯಾಗಿಲ್ಲ. ನೀವು ಮಜ್ಲಿಸ್‍ನಲ್ಲಿ ವಿಶಾಲ ಮನಸ್ಕತೆ ತೋರಿ ಸ್ಥಳಾವಕಾಶ ಮಾಡಿ ಕೊಡಬೇಕು ಎಂದು ಅಲ್ಲಾಹನು ಇಲ್ಲಿ ಹೇಳುತ್ತಿದ್ದಾನೆ. ಸಾವಿರ ಜನರಿಂದ ಸಾಧ್ಯವಾಗದ ಕೆಲಸ ಓರ್ವ ವ್ಯಕ್ತಿಯಿಂದ ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿಗಳಿಗೆ ಕೆಲವು ಸಭೆಗಳಲ್ಲಿ ಆದ್ಯತೆ ಕೊಡಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕೆಲವು ಪ್ರಮುಖರ ನಿಕಟ ಹಾಜರಾತಿಯಲ್ಲಿ ಅನೇಕ ಮಹತ್ವದ ಕೆಲಸಗಳಾಗುವ ಸಂಭವ ಇರುತ್ತದೆ. ಅದೇ ಪ್ರಕಾರ ಸಾಲಿನ ಕೊನೆಯಲ್ಲಿ ಉಲಮಾ ಸಾದಾತ್‍ಗಳನ್ನು ಕೂರಿಸಿ ಮುಖ್ಯ ಭಾಗದಲ್ಲಿ ಸಾಮಾನ್ಯರನ್ನು ಕೂರಿಸುವುದು ವಿದ್ವತ್ತು ಹಾಗೂ ಶ್ರೇಷ್ಠತೆಗೆ ಮಾಡುವ ಅವಮಾನವಾಗುತ್ತದೆ. ಆದ್ದರಿಂದ ಒಂದು ಸಭೆಯಲ್ಲಿ ಯಾರ್ಯಾರು ಎಲ್ಲೆಲ್ಲಿ ಕೂರಬೇಕೋ ಅದುವೇ ಚಂದ. ಕೂತುಕೊಳ್ಳುವುದರಲ್ಲಿ ಎಲ್ಲರೂ ಸಮಾನರು, ಎಲ್ಲರಿಗೆ ಒಂದೇ ಸ್ಥಾನ ಎಂಬ ನೀತಿ ಪ್ರಾಯೋಗಿಕವಲ್ಲ, ಸಮಂಜಸವಲ್ಲ, ಮನೆಯಲ್ಲಿ ಕುಟುಂಬದವರು ಒಂದುಗೂಡಿ ಮಾತುಕತೆ ನಡೆಸುವಾಗ ಮುಖ್ಯ ಭಾಗದಲ್ಲಿರುವ ಆರಾಮ ಕುರ್ಚಿಯಲ್ಲಿ ಮಗನೂ ಅಮುಖ್ಯ ಜಾಗದಲ್ಲಿರುವ ಸ್ಟೂಲ್‍ನಲ್ಲಿ ಅಪ್ಪನೂ ಕೂತುಕೊಂಡರೆ ಹೇಗಾದೀತು? ಎಲ್ಲರಿಗೂ ಒಂದೇ ಸ್ಥಾನ ಎಂಬ ನೀತಿ ಇಲ್ಲಿ ಅನ್ವಯವಲ್ಲ. ಅದೇ ರೀತಿ ಗುರುಗಳು, ಶೈಖ್‍ಗಳು, ಸಾದಾತ್‍ಗಳು ಮುಂತಾದವರಿಗೆ ಮಜ್ಲಿಸ್‍ನಲ್ಲಿ ಅವರದೇ ಆದ ಸ್ಥಾನ ಕಲ್ಪಿಸಬೇಕು ಎಂದು ಈ ಆಯತ್‍ನಲ್ಲಿ ನಿದರ್ಶನವಿದೆ. ಅಷ್ಟೇ ಅಲ್ಲ, ಮುಂದಿನ ವಾಕ್ಯಗಳು ಇದಕ್ಕೆ ಸ್ಪಷ್ಟ ಸೂಚನೆಯಾಗಿವೆ. ``ಎದ್ದೇಳಿರಿ'' ಎಂದು ನಿಮಗೆ ಹೇಳಲಾದರೆ ನೀವು ಎದ್ದೇಳುವುದು ನಿಮಗೆ ನಿಂದ್ಯತೆಯಲ್ಲ, ಸ್ಥಾನದ ಏರಿಕೆಯೆಂದು ಹೇಳಲಾಗಿದೆ. ಜ್ಞಾನಿಗಳಿಗೆ ದರ್ಜೆಗಳನ್ನು ಅಲ್ಲಾಹನು ಏರಿಸುತ್ತಿರುತ್ತಾನೆ ಎಂಬ ಮಾತು ಸುಜ್ಞಾನಿಗಳಿಗೂ, ಅಜ್ಞಾನಿಗಳಿಗೂ ಒಂದೇ ಸ್ಥಾನವಲ್ಲ, ಈ ಸ್ಥಾನ ವ್ಯತ್ಯಾಸ ಮಜ್ಲಿಸ್‍ನಲ್ಲಿ ಕಂಡುಬರುವುದು ಸಮಾನತೆಗೆ ವಿರೋಧವಲ್ಲ ಎಂಬುದನ್ನು ಗಮನಿಸಬಹುದಾಗಿದೆ.