Kannada Translation

Ayah by Ayah

Tags

Download Links

Kannada Translation translation for Surah Al-Mujadila — Ayah 12

58:12
يَٰٓأَيُّهَا ٱلَّذِينَ ءَامَنُوٓاْ إِذَا نَٰجَيۡتُمُ ٱلرَّسُولَ فَقَدِّمُواْ بَيۡنَ يَدَيۡ نَجۡوَىٰكُمۡ صَدَقَةٗۚ ذَٰلِكَ خَيۡرٞ لَّكُمۡ وَأَطۡهَرُۚ فَإِن لَّمۡ تَجِدُواْ فَإِنَّ ٱللَّهَ غَفُورٞ رَّحِيمٌ ١٢
ಸತ್ಯವಿಶ್ವಾಸಿಗಳೇ, ನೀವು ದೂತರೊಡನೆ ಭೇಟಿ ನಡೆಸುವುದಾದರೆ ನಿಮ್ಮ ಭೇಟಿಗೆ ಮೊದಲು ಏನಾ ದರೊಂದು ದಾನವನ್ನು ಮುಂದಿಡಿರಿ1. ಅದು ನಿಮ್ಮ ಪಾಲಿಗೆ ಹೆಚ್ಚು ಉತ್ತಮವೂ ಪರಿಶುದ್ಧವೂ ಆಗಿದೆ. ಇನ್ನು ನಿಮ್ಮ ಬಳಿ (ದಾನಧರ್ಮ ಮಾಡಲು) ಏನೂ ಇಲ್ಲದಿದ್ದರೆ, ಅಲ್ಲಾಹನು ಮಹಾಕ್ಷಮಾಶೀಲ ನೂ ಕೃಪಾನಿಧಿಯೂ ಆಗಿರುತ್ತಾನೆ.
Footnotes
  • [1] ನಬಿಯವರೊಂದಿಗೆ ಖಾಸಗಿ ಮಾತುಕತೆಗೆ ಬರುವವರ ಪೈಕಿ ಕೆಲವರು ಒಳ್ಳೆಯ ಉದ್ದೇಶ ಹೊಂದಿರಲಿಲ್ಲ. ಅವರ ಅಮೂಲ್ಯ ವೇಳೆಯನ್ನು ವ್ಯರ್ಥಗೊಳಿಸುವುದು ಕಪಟಿಗಳ ಉದ್ದೇಶವಾಗಿತ್ತು. ಸದುದ್ದೇಶದವರ ಪೈಕಿಯೂ ಕೆಲವರು ಅತ್ಯಗತ್ಯ ಇಲ್ಲದೆಯೂ ಖಾಸಗಿಯಾಗಿ ಭೇಟಿಗೆ ಬರುತ್ತಿದ್ದರು. ಇದಕ್ಕೆಲ್ಲ ಒಂದು ನಿಯಂತ್ರಣ ಹೇರುವುದಾಗಿತ್ತು ಪ್ರಸ್ತುತ ಕಾಣಿಕೆಯ ಉದ್ದೇಶ. ಇದರಿಂದ ಅಲ್ಲಿ ಹಾಜರಿರುವ ಕಡು ಬಡವರ ಆಹಾರ ಸಮಸ್ಯೆಗೆ ಪರಿಹಾ ರವೂ ಇತ್ತು. ಅಲ್ಲದೆ ಇದೊಂದು ತಾತ್ಕಾಲಿಕ ನಿಯಮವೂ ಆಗಿತ್ತು. ಮುಂದಿನ ಆಯತ್‍ನಲ್ಲಿ ಈ ನಿಯಮವನ್ನು ಕ್ರಮೇಣ ರದ್ದುಪಡಿಸಿದ ಪ್ರಸ್ತಾಪವಿದೆ.