Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 11

59:11
۞ أَلَمۡ تَرَ إِلَى ٱلَّذِينَ نَافَقُواْ يَقُولُونَ لِإِخۡوَٰنِهِمُ ٱلَّذِينَ كَفَرُواْ مِنۡ أَهۡلِ ٱلۡكِتَٰبِ لَئِنۡ أُخۡرِجۡتُمۡ لَنَخۡرُجَنَّ مَعَكُمۡ وَلَا نُطِيعُ فِيكُمۡ أَحَدًا أَبَدٗا وَإِن قُوتِلۡتُمۡ لَنَنصُرَنَّكُمۡ وَٱللَّهُ يَشۡهَدُ إِنَّهُمۡ لَكَٰذِبُونَ ١١
ಆ ಕಾಪಟ್ಯ ತೋರಿದವರನ್ನು ನೀವು ನೋಡಿಲ್ಲವೇ? ಇವರು ಗ್ರಂಥದವರಾದ ತಮ್ಮ ಸತ್ಯ ನಿಷೇಧಿ ಸಹೋದರರೊಡನೆ, ನಿಮ್ಮನ್ನು ಹೊರ ಹಾಕಲಾದರೆ ನಿಮ್ಮ ಜೊತೆ ನಾವೂ ಹೊರಡುವೆವು ಮತ್ತು ನಿಮ್ಮ ವಿಷಯದಲ್ಲಿ ನಾವು ಖಂಡಿತ ಯಾರನ್ನೂ ಅನುಸರಿಸಲಾರೆವು ಮತ್ತು ನಿಮ್ಮ ವಿರುದ್ಧ ಯುದ್ದ ಮಾಡಲಾದರೆ ನಾವು ನಿಮಗೆ ಸಹಾಯ ಮಾಡುವೆವು ಎನ್ನುತ್ತಾರೆ. ಆದರೆ ಇವರು ಸುಳ್ಳುಗಾರರೆಂಬುದಕ್ಕೆ ಅಲ್ಲಾಹನು ಸಾಕ್ಷ್ಯವಹಿಸುವನು1.
Footnotes
  • [1] ಕಪಟಿಗಳ ಬಗ್ಗೆ ಪರಾಮರ್ಶೆ. ಮದೀನಾದ ಕಪಟಿಗಳ ಮುಖಂಡ ಅಬ್ದುಲ್ಲಾಹ್ ಬಿನ್ ಉಬೈ ಎಂಬಾತ ಬನುನ್ನಳೀರ್ ಗೋತ್ರದ ಯಹೂದಿಗಳಿಗೆ ನೀಡಿದ ವಾಗ್ದಾನಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಸತ್ಯನಿಷೇಧದಲ್ಲಿ ಈ ಕಪಟಿಗಳೂ, ಯಹೂದಿಗಳೂ ಸಮಾನರು ಎಂದಿರುವುದಲ್ಲದೆ ಕಪಟಿಗಳು ಯಹೂದಿಗಳಿಗೆ ನೀಡಿದ ವಚನವನ್ನು ಪೂರೈಸಲಾರರು ಎಂದು ಕೂಡಾ ಹೇಳಲಾಗಿದೆ. ಹಾಗೇ ಸಂಭವಿಸಿತು. ಮುಂದೆ ಯಹೂದಿಗಳು ಬಹಿಷ್ಕøತರಾಗಿ ನಾಡು ಬಿಟ್ಟಾಗ ಈ ಕಪಟಿಗಳು ಅವರ ಜೊತೆ ಹೋಗಲೇ ಇಲ್ಲ. ಅವರಿಗೆ ಯಾವುದೇ ನೆರವನ್ನು ನೀಡಲೂ ಇಲ್ಲ.