Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 10

59:10
وَٱلَّذِينَ جَآءُو مِنۢ بَعۡدِهِمۡ يَقُولُونَ رَبَّنَا ٱغۡفِرۡ لَنَا وَلِإِخۡوَٰنِنَا ٱلَّذِينَ سَبَقُونَا بِٱلۡإِيمَٰنِ وَلَا تَجۡعَلۡ فِي قُلُوبِنَا غِلّٗا لِّلَّذِينَ ءَامَنُواْ رَبَّنَآ إِنَّكَ رَءُوفٞ رَّحِيمٌ ١٠
ಅವರ ನಂತರ ಬಂದವರ ಅವಸ್ಥೆಯು ಪ್ರಶಂಸಾರ್ಹ. ಅವರು ಹೀಗೆ ಪ್ರಾರ್ಥಿಸುತ್ತಾರೆ. ನಮ್ಮ ಪ್ರಭೂ, ನಮ್ಮನ್ನೂ ನಮಗಿಂತ ಮುಂಚೆ ಸತ್ಯವಿಶ್ವಾಸ ಸ್ವೀಕಾರ ಮಾಡಿದವರನ್ನೂ-ನಿಮ್ಮ ನಮ್ಮೆಲ್ಲ ಸಹೋದರರನ್ನೂ ಕ್ಷಮಿಸಿ ಬಿಡು ಮತ್ತು ನಮ್ಮ ಮನಸ್ಸುಗಳಲ್ಲಿ ಸತ್ಯವಿಶ್ವಾಸಿಗಳ ಬಗ್ಗೆ ಯಾವುದೇ ಹಗೆತನವನ್ನಿರಿಸದಿರು. ನಮ್ಮ ಪ್ರಭೂ, ನೀನು ಮಹಾ ವಾತ್ಸಲ್ಯಪೂರ್ಣನೂ ಕೃಪಾನಿಧಿಯೂ ಆಗಿರುವೆ1.
Footnotes
  • [1] ಅವರ ನಂತರ ಬಂದವರು ಎಂಬುದರಲ್ಲಿ ಮುಂದಿನ ತಲೆಮಾರು ಹಾಗೂ ವಿಶ್ವಾಂತ್ಯದ ವರೆಗಿನ ನೈಜ ಮುಸ್ಲಿಮರು ಒಳಪಡುತ್ತಾರೆ. ತಾಬಿಅïಗಳು, ತಾಬಿಉತ್ತಾಬಿಅïಗಳು ಹಾಗೂ ಕೊನೆ ಕಾಲದ ವರೆಗೂ ಅವರನ್ನು ಅನುಸರಿಸಿ ಜೀವಿಸುವವರ ಪೈಕಿ ಬಡವರಿಗೆ ಆಯಾ ಕಾಲದಲ್ಲಿ ಲಭ್ಯವಾಗುವ ಫೈಅನಲ್ಲಿ ಹಕ್ಕು ಇದೆ ಎಂದರ್ಥ. ಪೂರ್ವಿಕರು ತಲುಪಿಸಿದ ಆದರ್ಶಗಳಿಂದ ನಾವು ಈಮಾನ್ ಹೊಂದಿರುವುದರಿಂದ ಪೂರ್ವಿಕರ ಪರವಾಗಿ ದುಆ ಮಾಡಬೇಕೆಂದೂ ಅವರ ಮೇಲೆ ಯಾವುದೇ ವಿಧದ ಹಗೆ, ವಿದ್ವೇಷಗಳು ಇರಬಾರದೆಂದೂ ಈ ಆಯತ್ ಕಲಿಸುತ್ತಿದೆ. ಪೂರ್ವಿಕರಾದ ಇಮಾಮ್‍ಗಳನ್ನು ತಿರಸ್ಕರಿಸುವವರಿಗೆ ಫೈಅ ಸೊತ್ತಿನಲ್ಲಿ ಹಕ್ಕು ಇಲ್ಲ ಎಂದೂ ಇದರಿಂದ ವ್ಯಕ್ತ. ಸಹಾಬಿಗಳನ್ನು ಆಕ್ಷೇಪಿಸುತ್ತಿದ್ದ `ರಾಫಿಳತ್' ವಿಭಾಗಕ್ಕೆ ಫೈಅ ಸೊತ್ತು ನೀಡಬಾರದು ಎಂದು ಇಮಾಮ್ ಮಾಲಿಕ್‍ರವರು ಈ ಆಯತ್‍ನ ತಳಹದಿಯಲ್ಲಿ ಹೇಳಿರುವುದು ಪ್ರಸ್ತಾವ್ಯ.