Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 9

59:9
وَٱلَّذِينَ تَبَوَّءُو ٱلدَّارَ وَٱلۡإِيمَٰنَ مِن قَبۡلِهِمۡ يُحِبُّونَ مَنۡ هَاجَرَ إِلَيۡهِمۡ وَلَا يَجِدُونَ فِي صُدُورِهِمۡ حَاجَةٗ مِّمَّآ أُوتُواْ وَيُؤۡثِرُونَ عَلَىٰٓ أَنفُسِهِمۡ وَلَوۡ كَانَ بِهِمۡ خَصَاصَةٞۚ وَمَن يُوقَ شُحَّ نَفۡسِهِۦ فَأُوْلَٰٓئِكَ هُمُ ٱلۡمُفۡلِحُونَ ٩
ಅವರ (ಮುಹಾಜಿರರ) ಆಗಮನಕ್ಕೆ ಮುಂಚೆಯೇ ವಾಸಸ್ಥಳವನ್ನೂ, ಸತ್ಯವಿಶ್ವಾಸವನ್ನೂ ಸ್ವೀಕಾರ ಮಾಡಿದ್ದ (ಅನ್ಸಾರ್‍ಗಳ) ಸೇವೆಯು ಪ್ರಸ್ತಾಪಾರ್ಹ1. ತಮ್ಮ ಬಳಿಗೆ ದೇಶತ್ಯಾಗ ಮಾಡಿ ಬಂದವರನ್ನು ಅವರು ಪ್ರೀತಿಸುತ್ತಾರೆ. ಅವರಿಗೆ (ಮುಹಾಜಿರರಿಗೆ) ನೀಡಲ್ಪಟ್ಟ ಧನದ ಕುರಿತು ಇವರು ಯಾವುದೇ ದುರಾಗ್ರಹವನ್ನು ತಮ್ಮ ಮನಸ್ಸಿನಲ್ಲಿ ಕಾಣುವುದಿಲ್ಲ. ಸ್ವತಃ ತಮಗೆ ದಾರಿದ್ರ್ಯವಿದ್ದರೂ ಇತರರಿಗೆ ಸ್ವದೇ ಹಕ್ಕಿಂತ ಪ್ರಾಶಸ್ತ್ಯನೀಡುತ್ತಾರೆ. ಯಾರು ತಮ್ಮ ಮನಸ್ಸಿನ ಲೋಭತನದಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು.
Footnotes
  • [1] ಇದು ಮದೀನಾ ನಿವಾಸಿಗಳಾದ ಬಡವರ ಪ್ರಸ್ತಾಪ. ‘ಫೈಅï’ನಲ್ಲಿ ಅವರಿಗೂ ಒಂದು ಹಕ್ಕು ಇದೆ ಎಂಬ ಆದೇಶ. ಮಕ್ಕಾದಿಂದ ನಬಿ ಸಹಾಬಿಗಳು ಮದೀನಾಕ್ಕೆ ಬರುವ ಮೊದಲೇ ಇಸ್ಲಾಮ್ ಸ್ವೀಕರಿಸಿದ ಸಹೃದಯರಾಗಿದ್ದರು ಮದೀನಾದವರು. ಅಲ್ಲದೆ ಹಿಜ್‍ರಾ ಬರಲಿರುವ ಮುಸ್ಲಿಮರಿಗೆ ತಮ್ಮ ನಾಡನ್ನು ವಾಸ್ತವ್ಯಕ್ಕೆ ಸಿದ್ಧಗೊಳಿಸಿದ್ದ ವಿಶಾಲ ಮನಸ್ಕರು. ಆದ್ದರಿಂದ ಇವರಿಗೆ ಅನ್ಸಾರ್ (ಸಹಾಯಿಗಳು) ಎಂಬ ಹೆಸರು ಬಂತು. ಅವರ ಪೈಕಿ ಬಡವರಿಗೆ ಹಕ್ಕು ಇದೆ ಎಂದು ಹೇಳುವ ಜೊತೆಗೆ ಅಲ್ಲಾಹನು ಅವರ ಸೇವೆಯನ್ನು ಇಲ್ಲಿ ಪ್ರಶಂಶಿಸಿದ್ದಾನೆ.