Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 23

59:23
هُوَ ٱللَّهُ ٱلَّذِي لَآ إِلَٰهَ إِلَّا هُوَ ٱلۡمَلِكُ ٱلۡقُدُّوسُ ٱلسَّلَٰمُ ٱلۡمُؤۡمِنُ ٱلۡمُهَيۡمِنُ ٱلۡعَزِيزُ ٱلۡجَبَّارُ ٱلۡمُتَكَبِّرُۚ سُبۡحَٰنَ ٱللَّهِ عَمَّا يُشۡرِكُونَ ٢٣
ಅವನೇ ಅಲ್ಲಾಹನು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನು ಸಾಮ್ರಾಟನು, ಪರಮ ಪಾವನನು, ಶಾಂತಿದಾತನು, ಸಂರಕ್ಷಕನು, ಮೇಲ್ನೋಟಗಾರನು, ಪ್ರಬಲನು, ಪರಮಾಧಿಕಾರಿ. ಸರ್ವೋನ್ನತನು,1 ಜನರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು.
Footnotes
  • [1] ಸರ್ವ ವಸ್ತುಗಳ ಒಡೆಯನೂ, ನಿಯಂತ್ರಕನೂ ಅವನಾಗಿರುವನು ಎಂದಾಗಿದೆ ಅಲ್-ಮಲಿಕ್ ಎಂಬುದರ ಅರ್ಥ. ಅಲ್-ಖುದ್ದೂಸ್ ಅಂದರೆ ಸರ್ವವಿಧ ಅಶುದ್ಧ, ನ್ಯೂನತೆಗಳಿಂದ ಮುಕ್ತನಾದ ಪರಮ ಪರಿಶುದ್ಧನು ಎಂದರ್ಥ. ಅಸ್ಸಲಾಮ್ ಅಂದರೆ ಸರ್ವವಿಧ ಅಸಂಗತಗಳಿಂದ ಸುರಕ್ಷಿತನು ಎಂದರ್ಥ. ಅಲ್-ಮುಅïಮಿನ್ ಅಂದರೆ ಅರ್ಹರಿಗೆ ಆಶ್ರಯದಾತ ಎಂದರ್ಥ. ಅಲ್-ಜಬ್ಬಾರ್ ಅಂದರೆ ಎಲ್ಲರನ್ನೂ ಎಲ್ಲವನ್ನೂ ತನ್ನ ಅಧಿಕಾರ ಶಕ್ತಿ ಯೊಳಗೆ ಅಧೀನಪಡಿಸುವ ಪರಮಾಧಿಕಾರಿ ಎಂದರ್ಥ. ಅಲ್-ಮುತಕಬ್ಬಿರ್ ಅಂದರೆ ಎಲ್ಲ ಯೋಗ್ಯತೆಗಳೂ ಪೂರ್ಣಸ್ಥಿತಿಯಲ್ಲಿರುವ ಘನವಂತ ಎಂದರ್ಥ.