Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 5

59:5
مَا قَطَعۡتُم مِّن لِّينَةٍ أَوۡ تَرَكۡتُمُوهَا قَآئِمَةً عَلَىٰٓ أُصُولِهَا فَبِإِذۡنِ ٱللَّهِ وَلِيُخۡزِيَ ٱلۡفَٰسِقِينَ ٥
(ಸತ್ಯವಿಶ್ವಾಸಿಗಳೇ,) ನೀವು ಖರ್ಜೂರದ ಮರಗಳನ್ನು ಕಡಿದರೆ ಅಥವಾ ಅವುಗಳ ಕಾಂಡಗಳಲ್ಲಿ ನಿಲ್ಲಲು ಬಿಟ್ಟರೆ ಅದು, ಅಲ್ಲಾಹನ ಅನುಮತಿ ಪ್ರಕಾರವಾಗಿದೆ. ಮತ್ತು ಅಧರ್ಮಿಗಳನ್ನು ಅಪಮಾನಿಸಲಿಕ್ಕಾಗಿಯೂ ಆಗಿದೆ1.
Footnotes
  • [1] ಯಹೂದಿಗಳ ಕೋಟೆಗೆ ಮುತ್ತಿಗೆ ಹಾಕಿದಾಗ ಬಾಗಿಲು ಭದ್ರಪಡಿಸಿಕೊಂಡು ಯಹೂದಿಗಳು ಒಳಗಡೆ ಅವಿತುಕೊಂಡರು. ಆ ಸಂದರ್ಭದಲ್ಲಿ ನಬಿಯವರ ಆದೇಶದಂತೆ ಹೊರಗಿರುವ ಯಹೂದಿಗಳ ಕೆಲವು ಖರ್ಜೂರದ ವೃಕ್ಷಗಳನ್ನು ಸಹಾಬಿಗಳು ಕಡಿದುರುಳಿಸಿದರು. ಯಹೂದಿಗಳನ್ನು ಕೋಟೆ ತೆರೆದು ಹೊರಬರಲು ಅನುಸರಿಸಿದ ಒಂದು ಕ್ರಮವಾಗಿತ್ತು ಇದು. ಆದರೆ ಫಲವೃಕ್ಷವನ್ನು ಕಡಿದುದು ಒಳ್ಳೆಯ ಕ್ರಮವಲ್ಲ ಎಂಬ ಆಕ್ಷೇಪವು ಶತ್ರುಗಳಿಂದ ಬಂದಿತು. ನಾಡು ನಮ್ಮ ಕೈವಶವಾದರೆ ನಮಗೇ ಸಿಗಲಿರುವ ಮರಗಳನ್ನು ಕಡಿದುದು ನಮಗೇ ನಷ್ಟವಲ್ಲವೇ ಎಂಬ ಒಂದು ಯೋಚನೆ ಕೆಲವು ಸಹಾಬಿಗಳ ಮನದಲ್ಲೂ ಹುಟ್ಟಿಕೊಂಡಿತ್ತು. ಇದನ್ನೆಲ್ಲ ನಿವಾರಿಸುವುದಾಗಿತ್ತು ಈ ಆಯತ್‍ನ ಉದ್ದೇಶ. ಯುದ್ಧದಲ್ಲಿ ಪ್ರಸಕ್ತ ಸಮಯ, ಸಂದರ್ಭಗಳಲ್ಲಿ ಸೂಕ್ತವೆನಿಸುವ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಉಳಿದ ಸಂದರ್ಭಗಳ ಕೆಲವು ಸಾರ್ವಜನಿಕ ನಿಯಮಗಳನ್ನು ಆ ಸಂದರ್ಭಗಳಲ್ಲಿ ಮುರಿಯಬೇಕಾಗುತ್ತದೆ ಎಂದು ಸಾರ. ಖರ್ಜೂರ ವೃಕ್ಷಗಳನ್ನು ಆ ಪರಿಸ್ಥಿತಿಯಲ್ಲಿ ಕಡಿದುದು ಶತ್ರುಗಳಲ್ಲಿ ಅವಮಾನ ಮತ್ತು ಭಯ ಹುಟ್ಟಿಸುವ ಸಲುವಾಗಿ ಆಗಿತ್ತು. ಇದು ನಬಿಯವರ ಸ್ವಂತಾಭಿಪ್ರಾಯವಾಗಿರಲಿಲ್ಲ. ಅಲ್ಲಾಹನ ಆದೇಶದ ಮೇರೆಗಾಗಿತ್ತು ಎನ್ನುವ ಮೂಲಕ ಅಲ್ಲಾಹನು ವಿವಾದಕ್ಕೆ ತೆರೆ ಎಳೆದನು.