Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 6

59:6
وَمَآ أَفَآءَ ٱللَّهُ عَلَىٰ رَسُولِهِۦ مِنۡهُمۡ فَمَآ أَوۡجَفۡتُمۡ عَلَيۡهِ مِنۡ خَيۡلٖ وَلَا رِكَابٖ وَلَٰكِنَّ ٱللَّهَ يُسَلِّطُ رُسُلَهُۥ عَلَىٰ مَن يَشَآءُۚ وَٱللَّهُ عَلَىٰ كُلِّ شَيۡءٖ قَدِيرٞ ٦
ಅಲ್ಲಾಹನು ಅವರಿಂದ (ಯಹೂದರಿಂದ) ಪಡೆದು ತನ್ನ ಸಂದೇಶವಾಹಕರ ಕಡೆಗೆ ಮರಳಿಸಿದ ಸೊತ್ತಿಗಾಗಿ1 ನೀವು ಕುದುರೆಗಳನ್ನು ಮತ್ತು ಒಂಟೆಗಳನ್ನು ಓಡಿಸಿಲ್ಲ. ಆದರೆ ಅಲ್ಲಾಹನು ತನ್ನ ದೂತರುಗಳಿಗೆ ತಾನಿಚ್ಛಿಸಿದವರ ಮೇಲೆ ಅಧಿಕಾರವನ್ನು ನೀಡಿ ಬಿಡುತ್ತಾನೆ. ಅಲ್ಲಾಹನು ಸಕಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.
Footnotes
  • [1] ಯುದ್ಧ ನಡೆಸಿ ಶತ್ರುಗಳು ಸೋತಾಗ ಅವರಿಂದ ವಶವಾಗುವ ಸೊತ್ತುಗಳಿಗೆ ಗನೀಮತ್ (ಸಮರಾರ್ಜಿತ ಸೊತ್ತು) ಎಂದು ಹೆಸರು. ಯುದ್ಧ ನಡೆಸದೆಯೇ ಶತ್ರುಗಳು ಓಡಿ ಹೋಗುವಾಗ ಉಳಿಸಿ ಹೋದ ಸೊತ್ತುಗಳಿಗೆ `ಫೈಅ' ಎಂದು ಹೆಸರು. ಇಲ್ಲಿ ಇದರ ಪ್ರಸ್ತಾಪ ಬಂದಿದೆ. ಗತ್ಯಂತರವಿಲ್ಲದಾದಾಗ ಯಹೂದಿಗಳು ಕೋಟೆಯಿಂದ ಹೊರ ಬಂದು ನಾಡು ಬಿಡಲು ಸಿದ್ಧರಾದರು. ಗೃಹೋಪಯೋಗಿ ವಸ್ತುಗಳನ್ನು ಹೊರತುಪಡಿಸಿ ಬೇರೇನನ್ನೂ ಒಯ್ಯಬಾರದು. ಅಸ್ತ್ರಗಳನ್ನೂ ಕೊಂಡು ಹೋಗಬಾರದು ಎಂದು ಅವರಿಗೆ ತಾಕೀತು ಮಾಡಲಾಯಿತು. ಕೊನೆಗೆ ಯಹೂದಿಗಳು ಸಾಧ್ಯವಿದ್ದಷ್ಟು ಗೃಹೋಪಯೋಗಿ ವಸ್ತುಗಳನ್ನು ಒಯ್ದರು. ಉಳಿದ ಅನೇಕ ವಸ್ತುಗಳನ್ನು ಮುಸ್ಲಿಮರಿಗೆ ಸಿಗದಿರಲಿ ಎಂದು ಅವರೇ ನಾಶ ಮಾಡಿದರು. ಹಾಗೆ ಉಳಿದ ಸೊತ್ತುಗಳು ಮುಸ್ಲಿಮರಿಗೆ `ಫೈಅ' ಸೊತ್ತಾಗಿ ಲಭಿಸಿತ್ತು.