Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 7

59:7
مَّآ أَفَآءَ ٱللَّهُ عَلَىٰ رَسُولِهِۦ مِنۡ أَهۡلِ ٱلۡقُرَىٰ فَلِلَّهِ وَلِلرَّسُولِ وَلِذِي ٱلۡقُرۡبَىٰ وَٱلۡيَتَٰمَىٰ وَٱلۡمَسَٰكِينِ وَٱبۡنِ ٱلسَّبِيلِ كَيۡ لَا يَكُونَ دُولَةَۢ بَيۡنَ ٱلۡأَغۡنِيَآءِ مِنكُمۡۚ وَمَآ ءَاتَىٰكُمُ ٱلرَّسُولُ فَخُذُوهُ وَمَا نَهَىٰكُمۡ عَنۡهُ فَٱنتَهُواْۚ وَٱتَّقُواْ ٱللَّهَۖ إِنَّ ٱللَّهَ شَدِيدُ ٱلۡعِقَابِ ٧
ಅಲ್ಲಾಹನು ಅವನ ರಸೂಲರಿಗೆ ವಿವಿಧ ನಾಡುಗಳ ಜನರಿಂದ ಗಳಿಸಿಕೊಟ್ಟದ್ದೆಲ್ಲವೂ ಅಲ್ಲಾಹು ಮತ್ತು ರಸೂಲರಿಗೂ ಹಾಗೂ ರಸೂಲರ ಹತ್ತಿರದ ಸಂಬಂಧಿಕರು, ಅನಾಥರು, ಬಡವರು ಮತ್ತು ಯಾತ್ರಿಕರಿಗಾಗಿದೆ. ಆ ಸೊತ್ತು ನಿಮ್ಮ ಶ್ರೀಮಂತರ ನಡುವೆ ಮಾತ್ರ ಹಸ್ತಾಂತರಗೊಳ್ಳದಿರಲಿಕ್ಕಾಗಿ ಈ ನಿಯಮ. ರಸೂಲರು ನಿಮಗೆ ಏನು ಕೊಡುವರೋ ಅದನ್ನು ಸ್ವೀಕರಿಸಿಕೊಳ್ಳಿರಿ. ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುವರೋ ಅದರಿಂದ ದೂರವಿರಿ1. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿರುತ್ತಾನೆ.
Footnotes
  • [1] ‘ಫೈಅï’ ಅಲ್ಲಾಹು ಮತ್ತು ರಸೂಲರಿಗೆ ಸೇರಿದ ಸೊತ್ತಾಗಿದ್ದು ಅದನ್ನು ಯಾರಿಗೆ ಹಂಚಬೇಕು ಎಂಬ ವಿವರಣೆಯನ್ನು ಇಲ್ಲಿ ನೀಡಲಾಗದೆ. ರಸೂಲರು ಕೊಟ್ಟಿದ್ದನ್ನು ಪಡೆಯಲು, ನಿಷೇಧಿಸಿದ್ದನ್ನು ದೂರವಿಡಲು ಕೊಡಲಾದ ಆದೇಶವು ಫೈಅ ಸೊತ್ತಿಗೆ ಮಾತ್ರ ಸೀಮಿತವಲ್ಲ. ವಿಶ್ವಾಸ, ಆಚಾರ, ಜೀವನ ಕ್ರಮ, ಸ್ವಭಾವ, ನಡವಳಿಕೆ, ಆರಾಧನೆ ಮುಂತಾದ ಸರ್ವ ವಿಷಯಗಳಿಗೂ ಈ ಆದೇಶವು ಅನ್ವಯವಾಗುತ್ತದೆ.