Kannada Translation

Ayah by Ayah

Tags

Download Links

Kannada Translation translation for Surah Al-Mumtahanah — Ayah 1

60:1
يَٰٓأَيُّهَا ٱلَّذِينَ ءَامَنُواْ لَا تَتَّخِذُواْ عَدُوِّي وَعَدُوَّكُمۡ أَوۡلِيَآءَ تُلۡقُونَ إِلَيۡهِم بِٱلۡمَوَدَّةِ وَقَدۡ كَفَرُواْ بِمَا جَآءَكُم مِّنَ ٱلۡحَقِّ يُخۡرِجُونَ ٱلرَّسُولَ وَإِيَّاكُمۡ أَن تُؤۡمِنُواْ بِٱللَّهِ رَبِّكُمۡ إِن كُنتُمۡ خَرَجۡتُمۡ جِهَٰدٗا فِي سَبِيلِي وَٱبۡتِغَآءَ مَرۡضَاتِيۚ تُسِرُّونَ إِلَيۡهِم بِٱلۡمَوَدَّةِ وَأَنَا۠ أَعۡلَمُ بِمَآ أَخۡفَيۡتُمۡ وَمَآ أَعۡلَنتُمۡۚ وَمَن يَفۡعَلۡهُ مِنكُمۡ فَقَدۡ ضَلَّ سَوَآءَ ٱلسَّبِيلِ ١
ಸತ್ಯವಿಶ್ವಾಸಿಗಳೇ, ನನ್ನ ಮತ್ತು ನಿಮ್ಮ ಶತ್ರುಗಳೊಂದಿಗೆ ಸ್ನೇಹಬಂಧ ಬೆಳೆಸಿಕೊಂಡು ನೀವು ಅವರನ್ನು ಮಿತ್ರರಾಗಿ ಮಾಡಿಕೊಳ್ಳಬೇಡಿರಿ. ನಿಮ್ಮ ಬಳಿಗೆ ಬಂದಿರುವ ಸತ್ಯವನ್ನು ಅವರು ತಿರಸ್ಕರಿಸಿಯೇ ಬಿಟ್ಟಿರುವರು. ನೀವು ನಿಮ್ಮ ಪ್ರಭುವಾಗಿರುವ ಅಲ್ಲಾಹನ ಮೇಲೆ ವಿಶ್ವಾಸವಿರಿಸಿದ್ದೀರೆಂಬ ಕಾರಣಕ್ಕಾಗಿ ಮಾತ್ರ ಸಂದೇಶವಾಹಕರನ್ನೂ ನಿಮ್ಮನ್ನೂ ಅವರು ನಾಡಿನಿಂದ ಹೊರಹಾಕುತ್ತಾರೆ. ನನ್ನ ಮಾರ್ಗದಲ್ಲಿ ಹೋರಾಡಲಿಕ್ಕಾಗಿ ಮತ್ತು ನನ್ನ ಒಲವಿನಗಳಿಕೆಗಾಗಿ ನೀವು ಹೊರಟಿರುವಿರಾದರೆ, (ನೀವು ಆ ರೀತಿ ಮೈತ್ತಿಯನ್ನು ಸ್ಥಾಪಿಸಬೇಡಿರಿ). ನೀವು ಅವರೊಂದಿಗೆ ಗುಪ್ತವಾಗಿ ಸ್ನೇಹ ಸಂಪರ್ಕ ಬೆಳೆಸುತ್ತೀರಿ! ನೀವು ಗುಪ್ತವಾಗಿಸುವ ಮತ್ತು ಬಹಿರಂಗಗೊಳಿಸುವ ಸಕಲವನ್ನೂ ನಾನು ಚೆನ್ನಾಗಿ ಬಲ್ಲೆನು. ನಿಮ್ಮ ಪೈಕಿ ಹೀಗೆ ಯಾರೇ ಮಾಡಿದರೂ ಅವನು ಖಂಡಿತ ಸನ್ಮಾರ್ಗದಿಂದ ದೂರಸರಿದನು1.
Footnotes
  • [1] * ಅಲ್-ಮುಮ್ತಹನಃ ಅಂದರೆ ಪರೀಕ್ಷೆಗೊಳಗಾಗುವವಳು ಎಂದರ್ಥ. ವಿಶ್ವಾಸ ತಾಳಿದ್ದೇನೆಂದು ಹೇಳಿಕೊಂಡು ಊರು ಬಿಟ್ಟು ನಿಮ್ಮ ಬಳಿಗೆ ಬರುವ ಸ್ತ್ರೀಯರನ್ನು ಪರೀಕ್ಷೆಗೊಳಪಡಿಸಬೇಕು ಎಂದು 10ನೇ ಆಯತ್‍ನಲ್ಲಿ ಬಂದಿದ್ದು ಅದರಿಂದ ಹೆಸರನ್ನು ಆಯ್ಕೆ ಮಾಡಲಾಗಿದೆ. 1ರಿಂದ 3ರ ವರೆಗಿನ ಆಯತ್‍ಗಳ ಅವತೀರ್ಣ ಸಂದರ್ಭವು ಬುಖಾರಿ, ಮುಸ್ಲಿಮ್ ಉಲ್ಲೇಖಿತ ಹದೀಸ್‍ನಿಂದ ಸ್ಪಷ್ಟವಾಗುತ್ತದೆ. ಅದರ ಸಂಕ್ಷಿಪ್ತ ವಿವರಣೆ ಹೀಗಿದೆ. ಮದೀನಾದಲ್ಲಿ ನಬಿಯವರು ಮಕ್ಕಾಕ್ಕೆ ಸೈನ್ಯ ಸಮೇತ ಹೋಗುವ ಸಿದ್ಧತೆಯನ್ನು ಬಹಳ ರಹಸ್ಯವಾಗಿ ಮಾಡತೊಡಗಿದ ಸಂದರ್ಭದಲ್ಲಿ ಹಾತಬ್ ಬಿನ್ ಅಬೀ ಬಲತಅತ್ ಎಂಬ ಸಹಾಬಿಯೊಬ್ಬರು ಮಕ್ಕಾದ ಖುರೈಶಿಗಳಿಗೆ ಒಂದು ಪತ್ರ ಬರೆದು ಓರ್ವ ಸ್ತ್ರೀಯ ಕೈಯ್ಯಲ್ಲಿ ಕೊಟ್ಟು ಮಕ್ಕಾಕ್ಕೆ ಗುಪ್ತವಾಗಿ ಕಳುಹಿಸಿದರು. ``ನಬಿಯವರು ಬರಲಿದ್ದಾರೆ ಜಾಗ್ರತೆ ವಹಿಸಿ'' ಎಂದಾಗಿತ್ತು ಪತ್ರದ ಸಾರಾಂಶ. ನಬಿಯವರಿಗೆ ಇದು ವಹೀ ಮುಖಾಂತರ ತಿಳಿದು ಆ ಸ್ತ್ರೀಯಿಂದ ಪತ್ರವನ್ನು ತರುವಂತೆ ಅಲಿ ಮತ್ತು ಇನ್ನೊಬ್ಬರು ಸಹಾಬಿಯನ್ನು ಕಳುಹಿಸಿದರು. ಆ ಸ್ತ್ರೀ `ರೌಳತ್‍ಖಾಖ್' ಎಂಬ ಜಾಗದಲ್ಲಿ ನಿಮಗೆ ಸಿಗುತ್ತಾಳೆ ಎಂದು ಕೂಡ ಹೇಳಿದರು. ಕೂಡಲೇ ಅಲಿ ಮತ್ತು ಸಂಗಡಿಗರು ಮಕ್ಕಾದ ದಿಕ್ಕಿಗೆ ಹೊರಟರು. ನಬಿಯವರು ಹೇಳಿದ ಪ್ರಕಾರವೇ ಆ ಸ್ತ್ರೀ ರೌಳತ್‍ಖಾಖ್ ಎಂಬಲ್ಲಿ ಸಿಕ್ಕಿದಳು. ಅವಳನ್ನು ತಡೆದು ವಿಚಾರಿಸಿದಾಗ ಆಕೆ ನಿರಾಕರಿಸಿದಳು. ಆದರೆ ಅಲಿಯವರು ಗಂಭೀರ ಬೆದರಿಕೆ ಹಾಕಿದಾಗ ಮಣಿದ ಅವಳು ತನ್ನ ತಲೆಗೂದಲ ಒಳಗೆ ಅವಿತಿರಿಸಿದ್ದ ಪತ್ರವನ್ನು ತೆಗದುಕೊಟ್ಟಳು. ಅಲಿಯವರು ಅದನ್ನು ಮದೀನಾಕ್ಕೆ ತಂದೊಪ್ಪಿಸಿದಾಗ ನಬಿಯವರು ಹಾತಬ್‍ರನ್ನು ಕರೆಸಿ ವಿಚಾರಿಸಿದರು. ಹಾತಬ್ ತಪ್ಪೊಪ್ಪಿಕೊಂಡರು. ಇಂತಹ ಅಪರಾಧ ಯಾಕೆ ಮಾಡಿದಿರಿ ಎಂದು ಕೇಳಿದಾಗ ಹಾತಬ್ ಹೇಳಿದರು; ``ನಾನು ಇಸ್ಲಾಮಿಗೆ ನಿಷ್ಟನಾಗಿದ್ದೇನೆ. ಖುರೈಶಿಗಳಲ್ಲಿ ನನಗೆ ಪ್ರೀತಿಯೂ ಇಲ್ಲ. ಮಕ್ಕಾದಿಂದ ನಾಡು ತೊರೆದು ಬಂದ ಇತರ ಮುಹಾಜಿರ್‍ಗಳಿಗೆ ಖುರೈ ಶಿಗಳೊಂದಿಗೆ ಕುಟುಂಬ ಬಂಧವಿದೆ. ಗೋತ್ರ ಬಂಧವೂ ಇದೆ. ಆದ್ದರಿಂದ ಅವರೆಲ್ಲ ನಾಡು ಬಿಟ್ಟು ಬರುವಾಗ ಅಲ್ಲಿ ತೊರೆದು ಬಂದಿದ್ದ ತಮ್ಮ ಮನೆ ಮತ್ತು ಆಸ್ತಿಗಳನ್ನು ಕುರೈಶಿಗಳು ಆ ಕುಟುಂಬ ಸಂಬಂಧದ ಆಧಾರದಲ್ಲಿ ಸಂರಕ್ಷಿಸುತ್ತಾರೆ. ಆದರೆ ನನಗೆ ಖುರೈಶಿಗಳೊಂದಿಗೆ ಕುಟುಂಬ ಸಂಬಂಧವೋ ಗೋತ್ರ ಸಂಬಂಧವೋ ಇಲ್ಲ. ನಾನು ಖುರೈಶಿ ವರ್ಗದವನೂ ಅಲ್ಲ. ಆದ್ದರಿಂದ ಅಲ್ಲಿರುವ ನನ್ನ ಸೊತ್ತುಗಳಿಗೆ ಸಂರಕ್ಷಣೆಯ ವಿಷಯದಲ್ಲಿ ಅವರು ಆಸಕ್ತಿ ತೋರುವುದಿಲ್ಲ. ಈ ಪತ್ರ ಕೊಟ್ಟರೆ ಈ ಉಪಕಾರಕ್ಕಾಗಿ ಅವರು ನನ್ನ ಸೊತ್ತುಗಳ ರಕ್ಷಣೆ ಮಾಡಿಯಾರು ಎಂಬ ಆಸೆಯಿಂದ ಪತ್ರ ಕೊಟ್ಟು ಬಿಟ್ಟೆ''. ಹಾತಬ್‍ರವರು ದುರುದ್ದೇಶ ಹೊಂದಿರಲಿಲ್ಲ. ಇಸ್ಲಾಮಿನ ವಿರುದ್ಧ ಪಿತೂರಿಯೋ, ಕಾಪಟ್ಯವೋ ಅವರಲ್ಲಿ ಇದ್ದಿಲ್ಲ. ಆದ್ದರಿಂದ ಇದೊಂದು ವೈಯಕ್ತಿಕ ಪ್ರಮಾದವಾಗಿತ್ತು. ಆದ್ದರಿಂದ ನಬಿಯವರು ಅವರಿಗೆ ಕ್ಷಮಾದಾನ ನೀಡಿದರು. ಅವರನ್ನು ಮರಣ ದಂಡನೆಗೆ ಗುರಿಪಡಿಸಬೇಕೆಂದು ಕೆಲವರು ಹೇಳಿದಾಗ ``ಹಾತಬ್ ಬದ್‍ರ್ ಮಹಾತ್ಮರಲ್ಲಿ ಒಬ್ಬರಾದುದರಿಂದ ನಾವು ಏನೂ ಮಾಡುವಂತಿಲ್ಲ'' ಎಂದರು ನಬಿಯವರು.