Kannada Translation

Ayah by Ayah

Tags

Download Links

Kannada Translation translation for Surah Al-Mumtahanah — Ayah 10

60:10
يَٰٓأَيُّهَا ٱلَّذِينَ ءَامَنُوٓاْ إِذَا جَآءَكُمُ ٱلۡمُؤۡمِنَٰتُ مُهَٰجِرَٰتٖ فَٱمۡتَحِنُوهُنَّۖ ٱللَّهُ أَعۡلَمُ بِإِيمَٰنِهِنَّۖ فَإِنۡ عَلِمۡتُمُوهُنَّ مُؤۡمِنَٰتٖ فَلَا تَرۡجِعُوهُنَّ إِلَى ٱلۡكُفَّارِۖ لَا هُنَّ حِلّٞ لَّهُمۡ وَلَا هُمۡ يَحِلُّونَ لَهُنَّۖ وَءَاتُوهُم مَّآ أَنفَقُواْۚ وَلَا جُنَاحَ عَلَيۡكُمۡ أَن تَنكِحُوهُنَّ إِذَآ ءَاتَيۡتُمُوهُنَّ أُجُورَهُنَّۚ وَلَا تُمۡسِكُواْ بِعِصَمِ ٱلۡكَوَافِرِ وَسۡـَٔلُواْ مَآ أَنفَقۡتُمۡ وَلۡيَسۡـَٔلُواْ مَآ أَنفَقُواْۚ ذَٰلِكُمۡ حُكۡمُ ٱللَّهِ يَحۡكُمُ بَيۡنَكُمۡۖ وَٱللَّهُ عَلِيمٌ حَكِيمٞ ١٠
ಸತ್ಯವಿಶ್ವಾಸಿಗಳೇ, ಸತ್ಯವಿಶ್ವಾಸಿನಿಯರು ಸ್ವದೇಶ ತೊರೆದು ಅಭಯಾರ್ಥಿನಿಗಳಾಗಿ ನಿಮ್ಮ ಬಳಿಗೆ ಬಂದರೆ ಅವರನ್ನು ಪರೀಕ್ಷಿಸಿ ನೋಡಿ. ಅವರ ಸತ್ಯವಿಶ್ವಾಸದ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. ಇನ್ನು ಅವರು ಸತ್ಯವಿಶ್ವಾಸಿ ನಿಯರೆಂದು ನಿಮಗೆ ತಿಳಿದು ಬಂದರೆ, ಅವರ ನ್ನು ಸತ್ಯನಿಷೇಧಿಗಳ ಬಳಿಗೆ ಹಿಂದಿರುಗಿಸದಿರಿ1. ಆ ಸ್ತ್ರೀಯರು ಅವರಿಗೆ (ಸತ್ಯನಿಷೇಧಿಗಳಾದ ಪುರುಷರಿಗೆ) ಅನುವದನೀಯರಲ್ಲ. ಅವರು ಆ ಸ್ತ್ರೀಯರಿಗೂ ಅನುವದನೀಯರಲ್ಲ. ಅವರ (ಸತ್ಯನಿಷೇಧಿ) ಗಂಡಂದಿರು ಅವರಿಗೆ ಖರ್ಚು ಭರಿಸಿದ್ದನ್ನು ಅವರಿಗೆ ಮರಳಿಸಿರಿ. ನೀವು ಆ ಸ್ತ್ರೀಯರಿಗೆ ಅವರ ಪ್ರತಿಫಲವನ್ನು ಪಾವತಿ ಮಾಡಿದರೆ ನಿಮಗೆ ಅವರನ್ನು ಮದುವೆ ಮಾಡಿ ಕೊಳ್ಳುವುದಕ್ಕೆ ವಿರೋಧವಿಲ್ಲ2. ನೀವು ಸತ್ಯ ನಿಷೇಧಿ ಸ್ತ್ರೀಯರ ವಿವಾಹ ಬಂಧನದಲ್ಲಿ ಹಿಡಿದು ನಿಲ್ಲದಿರಿ. ಖರ್ಚು ಭರಿಸಿದ್ದನ್ನು ನೀವು ಕೇಳಿಪಡೆದುಕೊಳ್ಳಿರಿ. ಅವರು ಖರ್ಚು ಭರಿಸಿದ್ದನ್ನು ಅವರೂ ಕೇಳಿಪಡಕೊಳ್ಳಲಿ. ಇದು ಅಲ್ಲಾಹನ ನಿಯಮವಾಗಿದೆ. ಅವನು ನಿಮ್ಮ ನಡುವೆ ತೀರ್ಮಾನ ಮಾಡುತ್ತಾನೆ. ಅಲ್ಲಾಹನು ಸರ್ವ ಜ್ಞನೂ ಯುಕ್ತಿವಂತನೂ ಆಗಿರುತ್ತಾನೆ.
Footnotes
  • [1] ಮುಶ್ರಿಕರಿಂದ ಯಾರಾದರೂ ಮುಸ್ಲಿಮರಾಗಿ ಮದೀನಾಕ್ಕೆ ಬಂದರೆ ಮಕ್ಕಾಕ್ಕೆ ವಾಪಾಸು ಕಳುಹಿಸಬೇಕು ಎಂಬುದು ಹುದೈಬಿಯಾ ಒಪ್ಪಂದದ ಒಂದು ನಿರ್ಣಯವಾಗಿತ್ತು. ಆದರೆ ಸ್ತ್ರೀಯರನ್ನು ಇದರಿಂದ ಹೊರತುಪಡಿಸಲಾಗಿದ್ದು, ಅವರನ್ನು ವಾಪಾಸು ಕಳಿಸಬಾರದೆಂದೂ ಅವರು ನಿಜವಾದ ಈಮಾನ್ ಧಾರಿಣಿಗಳು ಹೌದೋ ಅಲ್ಲವೋ ಎಂದು ಪರೀಕ್ಷಿಸಿ ತಮ್ಮ ಜತೆಗೆ ಸೇರಿಸಿಕೊಳ್ಳಬೇಕೆಂದೂ ಇಲ್ಲಿ ಆದೇಶಿಸಲಾಗಿದೆ.
  • [2] ‘ಅವರಿಗೆ ಖರ್ಚು ಭರಿಸಿದ್ದನ್ನು’ ಎಂದರೆ ಸತ್ಯನಿಷೇಧಿಗಳು ತಮ್ಮ ಪತ್ನಿಯರಿಗೆ ಕೊಟ್ಟಿದ್ದ ವಧುದಕ್ಷಿಣೆ (ಮಹರ್)ಯನ್ನು ಎಂದರ್ಥ. ಆಕೆ ಮುಸ್ಲಿಮಳಾದರೆ ಆಕೆಯ ಸತ್ಯನಿಷೇಧಿ ಪತಿಯಂದಿರಿಗೆ ಮಹ್‍ರನ್ನು ಹಿಂತಿರುಗಿಸುವಂತೆ ಆದೇಶಿಸಲಾಗಿದೆ. ಪತ್ನಿ ಹಾಗೂ ಸ್ವತ್ತಿನ ಎರಡು ನಷ್ಟವು ಅವಿಶ್ವಾಸಿ ಗಂಡನ ಮೇಲೆ ಒಂದುಗೂಡಬಾರದು. ಯುದ್ಧ ಭೂಮಿಯಿಂದ ಇಸ್ಲಾವಿೂ ಸಾಮ್ರಾಜ್ಯಕ್ಕೆ ವಲಸೆ ಬಂದಿರುವ ಸ್ತ್ರೀಯರನ್ನು ಅವರಿಗೆ ಸತ್ಯನಿಷೇಧಿ ಗಂಡಂದಿರಿದ್ದರೂ ಮುಸ್ಲಿಮರಿಗೆ ವರಿಸುವುದು ಅನುವದನೀಯ. ಏಕೆಂದರೆ ಅವರ ಹಾಗೂ ಅವರ ಅವಿಶ್ವಾಸಿ ಗಂಡಂದಿರ ನಡುವೆ ಈ ಮೂಲಕ ಸಂಬಂಧವನ್ನು ವಿಚ್ಛೇಧಿಸಲಾಗುತ್ತದೆ. ಆಕೆಯ ದೀಕ್ಷಾಕಾಲ (ಇದ್ದಃ) ಮುಗಿಯುವ ಮೂಲಕ ವಿಚ್ಛೇಧನವು ಸಂಭವಿಸುವುದು.