Kannada Translation

Ayah by Ayah

Tags

Download Links

Kannada Translation translation for Surah Al-Mumtahanah — Ayah 11

60:11
وَإِن فَاتَكُمۡ شَيۡءٞ مِّنۡ أَزۡوَٰجِكُمۡ إِلَى ٱلۡكُفَّارِ فَعَاقَبۡتُمۡ فَـَٔاتُواْ ٱلَّذِينَ ذَهَبَتۡ أَزۡوَٰجُهُم مِّثۡلَ مَآ أَنفَقُواْۚ وَٱتَّقُواْ ٱللَّهَ ٱلَّذِيٓ أَنتُم بِهِۦ مُؤۡمِنُونَ ١١
ನಿಮ್ಮ ಪತ್ನಿಯರ ಪೈಕಿ ಯಾರಾದರೂ ಸತ್ಯ ನಿಷೇಧಿಗಳ ಬಳಿಗೆ ಹೋಗಿ ನಿಮಗೆ ನಷ್ಟವಾದರೆ, ಅನಂತರ ನೀವು ಕ್ರಮ ಕೈಗೊಂಡರೆ, ಯಾರ ಪತ್ನಿಯರು ಕಳೆದು ಹೋಗಿರುವರೋ ಅವರಿಗೆ ಅವರು ಖರ್ಚು ಭರಿಸಿದ್ದಕ್ಕೆ ಸರಿದೂಗುವ ಮೊತ್ತ ವನ್ನು (ಮಹ್ರ್) ಕೊಟ್ಟುಬಿಡಿರಿ1 ಮತ್ತು ನೀವು ವಿಶ್ವಾಸವಿರಿಸಿರುವ ಅಲ್ಲಾಹನನ್ನು ಭಯಪಡಿರಿ.
Footnotes
  • [1] ಅರ್ಥಾತ್ ಮುಸ್ಲಿಮರ ಪತ್ನಿಯರ ಪೈಕಿ ಯಾರಾದರೂ ಶತ್ರು ಪಕ್ಷಕ್ಕೆ ಧರ್ಮಭ್ರಷ್ಟರಾಗಿ ಹೋಗಿ ಸೇರಿದರೆ, ಅವರಿಂದ ‘ಮಹ್ರ್’ ಅನ್ನು ವಾಪಾಸು ಪಡೆಯಲು ಯಾವುದೇ ದಾರಿಯಿಲ್ಲದಿರುವಾಗ ಅದರ ಪರಿಹಾರವೇನೆಂದರೆ, ತದನಂತರ ಶತ್ರುಪಕ್ಷದೊಂದಿಗೆ ಯುದ್ಧ ಮಾಡಿ ಗೆದ್ದು ಅವರಿಂದ ಯುದ್ಧಾಸ್ತಿಯನ್ನು ಪಡೆಯುವ ಸಂದರ್ಭ ಒದಗಿ ಬಂದರೆ, ಪತ್ನಿಯರನ್ನು ಕಳೆದುಕೊಂಡ ಜನರಿಗೆ ಅವರ ‘ಮಹ್ರ್’ನ ಮೊತ್ತವನ್ನು ಯುದ್ಧಾಸ್ತಿಯಿಂದ ತೆಗೆದುಕೊಟ್ಟ ನಂತರವೇ ಉಳಿದ ಸೊತ್ತುಗಳನ್ನು ಪಾಲು ಮಾಡಬೇಕು.