Kannada Translation

Ayah by Ayah

Tags

Download Links

Kannada Translation translation for Surah Al-Mumtahanah — Ayah 12

60:12
يَٰٓأَيُّهَا ٱلنَّبِيُّ إِذَا جَآءَكَ ٱلۡمُؤۡمِنَٰتُ يُبَايِعۡنَكَ عَلَىٰٓ أَن لَّا يُشۡرِكۡنَ بِٱللَّهِ شَيۡـٔٗا وَلَا يَسۡرِقۡنَ وَلَا يَزۡنِينَ وَلَا يَقۡتُلۡنَ أَوۡلَٰدَهُنَّ وَلَا يَأۡتِينَ بِبُهۡتَٰنٖ يَفۡتَرِينَهُۥ بَيۡنَ أَيۡدِيهِنَّ وَأَرۡجُلِهِنَّ وَلَا يَعۡصِينَكَ فِي مَعۡرُوفٖ فَبَايِعۡهُنَّ وَٱسۡتَغۡفِرۡ لَهُنَّ ٱللَّهَۚ إِنَّ ٱللَّهَ غَفُورٞ رَّحِيمٞ ١٢
ಓ ಪ್ರವಾದಿಯರೇ, ಸತ್ಯವಿಶ್ವಾಸಿನಿಯರು, ತಮ್ಮ ಬಳಿಗೆ ಬಂದು `ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡಲಾರೆವು, ಕಳ್ಳತನ ಮಾಡಲಾರೆವು, ವ್ಯಭಿಚಾರವೆಸಗಲಾರೆವು, ತಮ್ಮ ಮಕ್ಕಳನ್ನು ವಧಿಸಲಾರೆವು, ತಮ್ಮ ಕೈಕಾಲುಗಳ ಮಧ್ಯೆ1 ಯಾವುದೇ ಸುಳ್ಳಾರೋಪವನ್ನು ಸೃಷ್ಟಿಸಿ ತರಲಾರೆವು ಮತ್ತು ಯಾವುದೇ ಸತ್ಕಾರ್ಯದ ವಿಷಯದಲ್ಲಿ ತಮಗೆ ಅವಿಧೇಯತೆ ತೋರಲಾರೆವು’ ಎಂದು ಪ್ರತಿಜ್ಞೆ ಮಾಡಿದರೆ, ಅವರಿಂದ ಪ್ರತಿಜ್ಞೆಯನ್ನು ಸ್ವೀಕರಿಸಿಕೊಳ್ಳಿರಿ ಮತ್ತು ಅವರಿಗಾಗಿ ಅಲ್ಲಾಹನಲ್ಲಿ ಕ್ಷಮೆ ಯಾಚಿಸಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.
Footnotes
  • [1] ತಾಯಿಯು ಮಗುವನ್ನು ಹೆತ್ತರೆ ಅದು ಆಕೆಯ ಕೈಕಾಲುಗಳ ಮಧ್ಯೆ ಬೀಳುವುದರಿಂದ ‘ತಮ್ಮ ಕೈಕಾಲುಗಳ ಮಧ್ಯೆ’ ಎಂದು ಸೂಚ್ಯವಾಗಿ ಹೇಳಲಾಗಿದೆ. ಅರ್ಥಾತ್ ತನ್ನದಲ್ಲದ ಮಗುವನ್ನು ಪತ್ನಿಯಾದವಳು ‘ಇದು ನಿನ್ನ ಮಗುವೇ ಆಗಿದೆ’ ಎಂದು ಪತಿಗೆ ಸೇರಿಸಿ ಹೇಳಬಾರದು. ಈ ಸೂಕ್ತದ ಉದ್ದೇಶ ಅನಾಥ ಮಗುವಿನ ಕುರಿತಾಗಿದೆ. ಪರಂತು ವ್ಯಭಿಚಾರದ ಕುರಿತಲ್ಲ. ಏಕೆಂದರೆ ಈ ಕುರಿತಾದ ವಿರೋಧವನ್ನು ಸುಸ್ಪಷ್ಟವಾಗಿ ಈ ಹಿಂದೆ ಹೇಳಲಾಗಿದೆ. (ರಾಝಿ 29/308)