Kannada Translation

Ayah by Ayah

Tags

Download Links

Kannada Translation translation for Surah Al-Mumtahanah — Ayah 13

60:13
يَٰٓأَيُّهَا ٱلَّذِينَ ءَامَنُواْ لَا تَتَوَلَّوۡاْ قَوۡمًا غَضِبَ ٱللَّهُ عَلَيۡهِمۡ قَدۡ يَئِسُواْ مِنَ ٱلۡأٓخِرَةِ كَمَا يَئِسَ ٱلۡكُفَّارُ مِنۡ أَصۡحَٰبِ ٱلۡقُبُورِ ١٣
ಸತ್ಯವಿಶ್ವಾಸಿಗಳೇ, ಅಲ್ಲಾಹನ ಕ್ರೋಧಕ್ಕೊಳಗಾದ ಒಂದು ಜನತೆಯೊಂದಿಗೆ ನೀವು ಮೈತ್ರಿ ಬೆಳೆಸ ಬೇಡಿರಿ. ಸಮಾಧಿಗಳೊಳಗೆ ಇರುವವರ ಕುರಿತು ಸತ್ಯನಿಷೇಧಿಗಳು ನಿರಾಶರಾಗಿ ಬಿಟ್ಟಂತೆಯೇ ಅವರು ಪರಲೋಕದ ಬಗೆಗೆ ನಿರಾಶರಾಗಿ ಬಿಟ್ಟಿರುತ್ತಾರೆ1.
Footnotes
  • [1] ‘ಸಮಾಧಿಗಳೊಳಗೆ ಇರುವವರ ಕುರಿತು ನಿರಾಶರಾಗುವುದು’ ಎಂದರೆ ಸತ್ತು ಮಣ್ಣಾಗಿ ಹೋದವರು ಇನ್ನು ಮರಳಿ ಬರುವರೆಂದು ಅವರು ನಿರೀಕ್ಷಿ ಸದಂತೆ ಪರಲೋಕದ ಒಳಿತಿನ ಬಗ್ಗೆ ಅವರಿಗೆ ಯಾವುದೇ ನಿರೀಕ್ಷೆಯಿಲ್ಲ ಎಂದಾಗಿದೆ. ‘ಸಮಾಧಿಗಳೊಳಗೆ ಇರುವವರ ಪೈಕಿ ಸತ್ಯನಿಷೇಧಿಗಳು ಎಲ್ಲ ಒಳಿತುಗಳಿಂದ ನಿರಾಶರಾದಂತೆ’ ಎಂಬ ವ್ಯಾಖ್ಯಾನವನ್ನು ಇಮಾಮ್ ಇಬ್ನು ಜರೀರ್ ಪ್ರಬಲಗೊಳಿಸಿದ್ದಾರೆ.