Kannada Translation

Ayah by Ayah

Tags

Download Links

Kannada Translation translation for Surah Al-Mumtahanah — Ayah 4

60:4
قَدۡ كَانَتۡ لَكُمۡ أُسۡوَةٌ حَسَنَةٞ فِيٓ إِبۡرَٰهِيمَ وَٱلَّذِينَ مَعَهُۥٓ إِذۡ قَالُواْ لِقَوۡمِهِمۡ إِنَّا بُرَءَٰٓؤُاْ مِنكُمۡ وَمِمَّا تَعۡبُدُونَ مِن دُونِ ٱللَّهِ كَفَرۡنَا بِكُمۡ وَبَدَا بَيۡنَنَا وَبَيۡنَكُمُ ٱلۡعَدَٰوَةُ وَٱلۡبَغۡضَآءُ أَبَدًا حَتَّىٰ تُؤۡمِنُواْ بِٱللَّهِ وَحۡدَهُۥٓ إِلَّا قَوۡلَ إِبۡرَٰهِيمَ لِأَبِيهِ لَأَسۡتَغۡفِرَنَّ لَكَ وَمَآ أَمۡلِكُ لَكَ مِنَ ٱللَّهِ مِن شَيۡءٖۖ رَّبَّنَا عَلَيۡكَ تَوَكَّلۡنَا وَإِلَيۡكَ أَنَبۡنَا وَإِلَيۡكَ ٱلۡمَصِيرُ ٤
ಇಬ್‍ರಾಹೀಮ್ ಮತ್ತು ಅವರ ಸಂಗಡಿಗರಲ್ಲಿ ನಿಮಗೆ ಉತ್ತಮ ಆದರ್ಶವಿದೆ. ಅವರು ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭ - ``ನಾವು ನಿಮ್ಮಿಂದ ಹಾಗೂ ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವ ಈ ಆರಾಧ್ಯ ವಸ್ತುಗಳಿಂದ ಸಂಪೂರ್ಣ ದೂರಸರಿದವರಾಗಿದ್ದೇವೆ. ನಾವು ನಿಮ್ಮಲ್ಲಿ ಅವಿಶ್ವಾಸ ತಾಳಿದೆವು. ನೀವು ಏಕೈಕನಾದ ಅಲ್ಲಾಹನ ಮೇಲೆ ವಿಶ್ವಾಸವಿರಿಸುವವರೆಗೆ ನಮ್ಮ ನಿಮ್ಮೊಳಗೆ ಶಾಶ್ವತವಾಗಿ ದ್ವೇಷ ಮತ್ತು ವೈರತ್ವ ಪ್ರಕಟವಾಯಿತು1. ಆದರೆ ಇಬ್‍ರಾಹೀಮರು ತಮ್ಮ ತಂದೆಯೊಡನೆ ‘ನಾನು ಖಂಡಿತ ನಿಮ್ಮ ಕ್ಷಮೆಗಾಗಿ ಪ್ರಾರ್ಥಿಸುವೆನು ಮತ್ತು ಅಲ್ಲಾಹನಿಂದ ನಿಮಗಾಗಿ ನಾನು ಏನನ್ನೂ ಒಡೆತನಗೊಳಿಸುವುದಿಲ್ಲ’ ಎಂದು ಹೇಳಿದ ಮಾತಿನ ಹೊರತು. (ಆ ಮಾತಿನಲ್ಲಿ ನಿಮಗೆ ಮಾದರಿ ಇರುವುದಿಲ್ಲ.) “ನಮ್ಮ ಪ್ರಭೂ, ನಾವು ನಿನ್ನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ನಿನ್ನ ಕಡೆಗೇ ನಾವು ವಿಧೇಯರಾಗಿ ಮರಳಿದ್ದೇವೆ ಮತ್ತು ನಿನ್ನ ಸನ್ನಿಧಿಗೇ ಎಲ್ಲರ ಮರಳಿಕೆ” (ಎಂದು ಇಬ್ರಾಹೀಮರು ಪ್ರಾರ್ಥಿಸಿದರು).
Footnotes
  • [1] ಧರ್ಮದ ಶತ್ರುಗಳೊಂದಿಗೆ ಅಸಹಕಾರ, ಸಂಬಂಧರಾಹಿತ್ಯ ಎಂಬ ಆಶಯವು ಇಬ್ರಾಹೀಮ್ ನಬಿಯವರ ಮಿಲ್ಲತ್‍ನಲ್ಲೇ ಇತ್ತೆಂದು ಇದರಿಂದ ಸ್ಪಷ್ಟ.