Kannada Translation

Ayah by Ayah

Tags

Download Links

Kannada Translation translation for Surah Al-Munafiqun — Ayah 4

63:4
۞ وَإِذَا رَأَيۡتَهُمۡ تُعۡجِبُكَ أَجۡسَامُهُمۡۖ وَإِن يَقُولُواْ تَسۡمَعۡ لِقَوۡلِهِمۡۖ كَأَنَّهُمۡ خُشُبٞ مُّسَنَّدَةٞۖ يَحۡسَبُونَ كُلَّ صَيۡحَةٍ عَلَيۡهِمۡۚ هُمُ ٱلۡعَدُوُّ فَٱحۡذَرۡهُمۡۚ قَٰتَلَهُمُ ٱللَّهُۖ أَنَّىٰ يُؤۡفَكُونَ ٤
ಅವರನ್ನು ತಾವು ನೋಡಿದರೆ ಅವರ ಶರೀರಗಳು ತಮ್ಮನ್ನು ಅದ್ಭುತಗೊಳಿಸಬಹುದು. ಅವರಿನ್ನು ಮಾತನಾಡಿದರೆ ತಾವು ಅವರ ಮಾತನ್ನು ಕೇಳುತ್ತಲೇ ಇದ್ದು ಬಿಡುವಿರಿ. ಆದರೆ ವಾಸ್ತವದಲ್ಲಿ ಅವರು ಒರಗಿಸಿಡಲ್ಪಟ್ಟಿರುವ ಮರದ ಕೊರಡುಗಳಂತಿದ್ದಾರೆ. ಪ್ರತಿಯೊಂದು ಉಚ್ಛ ಸ್ವರವನ್ನು ತಮ್ಮ ವಿರುದ್ಧವೆಂದು ಅವರು ಭಾವಿಸುತ್ತಾರೆ1. ಅವರು ಅಪ್ಪಟ ಶತ್ರುಗಳು. ಅವರ ಬಗ್ಗೆ ಎಚ್ಚರವಾಗಿರಿ. ಅವರನ್ನು ಅಲ್ಲಾಹನು ಶಪಿಸಿರುವನು. ಅವರು ಅದ್ಹೇಗೆ ಸತ್ಯದಿಂದ ವಿಮುಖರಾಗುತ್ತಿರುವರೋ!
Footnotes
  • [1] ಬಾಯಲ್ಲಿ ವಿಶ್ವಾಸದ ಮಾತು ಹೇಳುತ್ತಾ ಮನದಲ್ಲಿ ನಿಷೇಧ ಹೊಂದಿದ್ದ ಅವರ ಹೃದಯಗಳು ಎಷ್ಟು ಗಡುಸಾಗಿವೆಯೆಂದರೆ ಸತ್ಯವು ದಾಟಲಾಗದ ಸ್ಥಿತಿಯಲ್ಲಿ ಮುದ್ರೆಯೊತ್ತಿದಂತಾಗಿದೆ. ಒರಗಿಸಿ ನಿಲ್ಲಿಸಲಾದ ಮರದ ದಿಮ್ಮಿಗಳಂತೆ ಉಪಕಾರವಿಲ್ಲದೆ, ಧೀರತೆಯಿಲ್ಲದೆ ಇದ್ದಾರೆ. ಏನಾದರೊಂದು ಧ್ವನಿ ಕೇಳಿ ಬಂದರೆ ಭಯಭೀತರಾಗುತ್ತಾರೆ. ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಯಾವಾಗಲೂ ಅವರಿಗೆ ತಮ್ಮ ಕಾಪಟ್ಯ ಬಯಲಾಗುವುದೋ ಎಂಬ ಭೀತಿಯ ನೆರಳಲ್ಲೇ ಇರುವುದರಿಂದ ಕೇಳಿ ಬಂದ ಧ್ವನಿ ನಮಗೆ ವಿರುದ್ಧವಾದುದೇನೋ ಎಂದು ಕಳವಳಗೊಳ್ಳುತ್ತಿದ್ದರು.