Kannada Translation

Ayah by Ayah

Tags

Download Links

Kannada Translation translation for Surah Al-Munafiqun — Ayah 5

63:5
وَإِذَا قِيلَ لَهُمۡ تَعَالَوۡاْ يَسۡتَغۡفِرۡ لَكُمۡ رَسُولُ ٱللَّهِ لَوَّوۡاْ رُءُوسَهُمۡ وَرَأَيۡتَهُمۡ يَصُدُّونَ وَهُم مُّسۡتَكۡبِرُونَ ٥
‘ಬನ್ನಿರಿ! ಅಲ್ಲಾಹನ ಸಂದೇಶವಾಹಕರು ನಿಮ ಗಾಗಿ ಕ್ಷಮಾಯಾಚನೆ ಮಾಡುತ್ತಾರೆ’ ಎಂದು ಅವರೊಡನೆ ಹೇಳಲಾದಾಗ ಅವರು ತಮ್ಮ ತಲೆಗಳನ್ನು ತಿರುವಿ ಬಿಡುತ್ತಾರೆ. ಅವರು ಬಹಳ ದರ್ಪತೊರುತ್ತಾ ವಿಮುಖರಾಗುತ್ತಿರುವು ದನ್ನು ತಾವು ಕಾಣುವಿರಿ1.
Footnotes
  • [1] ತಮ್ಮ ಪಾಪಗಳ ಪರಿಹಾರವಾಗಬೇಕೆಂದೋ ಅದಕ್ಕಾಗಿ ನಬಿಯವರ ಮುಖಾಂತರ ಪ್ರಾರ್ಥನೆ ಮಾಡಬೇಕೆಂದೋ ಅವರಿಗೆ ಆಸೆ ಇಲ್ಲ. ಅದೆಲ್ಲ ಅವರಿಗೆ ನಗಣ್ಯ. ಸಹಾಬಿಗಳಲ್ಲಿ ಕೆಲವರು ಕಪಟಿಗಳ ನಾಯಕ ಇಬ್ನು ಸಲೂಲ್‍ನೊಂದಿಗೆ ಹೀಗೆ ಹೇಳಿದರು. ನೀನು ಅಲ್ಲಾಹನ ರಸೂಲರ ಬಳಿ ಹೋಗಿ ತಪ್ಪೊಪ್ಪಿಕೊಳ್ಳು. ಅವರು ನಿನಗಾಗಿ ಕ್ಷಮಾಯಾಚನೆ ಮಾಡುತ್ತಾರೆ. ಆಗ ಅವನು ಈ ಅಭಿಪ್ರಾಯವನ್ನು ತಳ್ಳಿಹಾಕುತ್ತ ತಲೆಯನ್ನು ತಿರುವಿಕೊಂಡನು. ಮತ್ತು ಹೀಗೆ ಹೇಳಿದನು. ನೀವು ನಂಬಲು ಹೇಳಿದಾಗ ನಾನು ನಂಬಿದೆ. ನನ್ನ ಸ್ವತ್ತಿನ ಝಕಾತ್ ಕೊಡಬೇಕೆಂದು ಹೇಳಿದಾಗ ಅದನ್ನೂ ಮಾಡಿದೆ. ಇನ್ನು ನಿಮಗೆ ಹೇಳಲು ಬಾಕಿಯಿರುವುದು. ಮಹಮ್ಮದರಿಗೆ ಸುಜೂದ್ ಮಾಡಲು ಮಾತ್ರ. ಪ್ರವಾದಿವರ್ಯರ ಬಳಿ ತೆರಳಿ ತಪ್ಪೊಪ್ಪಿಗೆ ನಡೆಸುವುದನ್ನು ಪ್ರವಾದಿಗೆ ಸುಜೂದ್ ಮಾಡುವುದಾಗಿ ಚಿತ್ರೀಕರಿಸಿದ್ದನ್ನು ಈ ಘಟನೆಯಿಂದ ತಿಳಿದುಕೊಳ್ಳಬಹುದು. (ಅಲ್‍ಬಹ್ರುಲ್ ಮುಹೀತ್ 10/278)