Kannada Translation

Ayah by Ayah

Tags

Download Links

Kannada Translation translation for Surah At-Talaq — Ayah 1

65:1
يَٰٓأَيُّهَا ٱلنَّبِيُّ إِذَا طَلَّقۡتُمُ ٱلنِّسَآءَ فَطَلِّقُوهُنَّ لِعِدَّتِهِنَّ وَأَحۡصُواْ ٱلۡعِدَّةَۖ وَٱتَّقُواْ ٱللَّهَ رَبَّكُمۡۖ لَا تُخۡرِجُوهُنَّ مِنۢ بُيُوتِهِنَّ وَلَا يَخۡرُجۡنَ إِلَّآ أَن يَأۡتِينَ بِفَٰحِشَةٖ مُّبَيِّنَةٖۚ وَتِلۡكَ حُدُودُ ٱللَّهِۚ وَمَن يَتَعَدَّ حُدُودَ ٱللَّهِ فَقَدۡ ظَلَمَ نَفۡسَهُۥۚ لَا تَدۡرِي لَعَلَّ ٱللَّهَ يُحۡدِثُ بَعۡدَ ذَٰلِكَ أَمۡرٗا ١
ಓ ಪ್ರವಾದಿವರ್ಯರೇ, ನೀವು (ವಿಶ್ವಾಸಿಗಳು) ಸ್ತ್ರೀಯರನ್ನು (ಪತ್ನಿಯರನ್ನು) ವಿಚ್ಛೇದಿಸುವುದಾದರೆ ಅವರಿಗೆ ಅವರ ಇದ್ದಃ ಕಾಲದಲ್ಲಿ ತಲಾಖ್ ಕೊಡಿರಿ. ಇದ್ದಃದ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ1. ನಿಮ್ಮ ಪ್ರಭು ವಾದ ಅಲ್ಲಾಹನನ್ನು ನೀವು ಭಯಪಡಿರಿ. ಅವರು ಸ್ಪಷ್ಟವಾದ ನೀಚ ವೃತ್ತಿಯನ್ನು (ವ್ಯಭಿಚಾರವನ್ನು) ಮಾಡದ ಹೊರತು ನೀವು ಅವರನ್ನು ಅವರ ಮನೆಗಳಿಂದ ಹೊರಹಾಕ ಬೇಡಿರಿ ಮತ್ತು (ಇದ್ದಃ ಮುಗಿಯುವವರೆಗೆ) ಅವರು ಸ್ವತಃ ಹೊರಟು ಹೋಗದಿರಲಿ2. ಇವು ಅಲ್ಲಾಹನ ಮೇರೆಗಳು. ಯಾರಾದರೂ ಅಲ್ಲಾಹನ ಮೇರೆಗಳನ್ನು ಮೀರಿದರೆ ಅವನು ತನ್ನನ್ನೇ ಅಕ್ರಮಿಸಿಕೊಂಡನು. ಪ್ರಾಯಶಃ ಇದರ (ತಲಾಖಿನ) ಬಳಿಕ ಅಲ್ಲಾಹನು ಯಾವುದಾದರೂ ಹೊಸ ಕಾರ್ಯವನ್ನು ಉಂಟು ಮಾಡಲೂಬಹುದೆಂದು ತಮಗರಿಯದು.
Footnotes
  • [1] ತ್ವಲಾಕ್ವ್‍ಗೆ ಸಂಬಂಧಪಟ್ಟ ವಿಷಯಗಳನ್ನು ಇಲ್ಲಿ ನಬಿಯವರನ್ನು ಕರೆದು ಹೇಳಿದ್ದರೂ ವಿಷಯ ಎಲ್ಲರಿಗೂ ಅನ್ವಯ. ವಿವಾಹದಿಂದ ಬೇರ್ಪಟ್ಟ ಹೆಣ್ಣು ಇನ್ನೊಂದು ಮದುವೆ ಸಮ್ಮತವಾಗಲು ನಿಗದಿಪಡಿಸಲಾದ ಒಂದು ಅವಧಿಗೆ ಇದ್ದತ್ ಎಂದು ಹೆಸರು. ``ಅವರ ಇದ್ದತ್ ಕಾಲದಲ್ಲಿ ತಲಾಖ್ ಹೇಳಿರಿ” ಅಂದರೆ ಮುಟ್ಟು ನಿಂತು ಶುದ್ಧಿಯಾಗುವ ಅವಧಿಯಲ್ಲಿ ಮೈಥುನ ನಡೆಸುವ ಮುಂಚೆಯೇ ತಲಾಖ್ ಹೇಳಬೇಕು ಎಂದಾಗಿದೆ. ಅಲ್ಲವಾದಲ್ಲಿ ಅವಳ ಇದ್ದತ್ ಅವಧಿ ದೀರ್ಘವಾಗುತ್ತದೆ. 2:228ರಲ್ಲಿ ಇದರ ವಿಸ್ತøತ ವಿವರಣೆ ಬಂದಿದೆ. ಈ ಆಯತ್ ಹಾಗೂ ಹದೀಸ್‍ಗಳ ಆಧಾರದಲ್ಲಿ ವಿದ್ವಾಂಸರು ತಲಾಖ್‍ನ್ನು ಮೂರು ವಿಧದಲ್ಲಿ ವಿಂಗಡಿಸಿದ್ದಾರೆ. (1). ತಲಾಖ್ ಸುನ್ನೀ. ಮೈಥುನ ನಡೆಸದ ಶುದ್ಧಾವಧಿಯಲ್ಲಿರುವ ಅಥವಾ ಪ್ರತ್ಯಕ್ಷ ಬಸುರಿಯಾದವಳ ತಲಾಖ್ ಇದು. (2). ಪ್ರತ್ಯಕ್ಷದಲ್ಲಿ ಬಸುರಿಯಲ್ಲದವಳನ್ನು ಅವಳ ಮುಟ್ಟಿನ ಸಮಯದಲ್ಲಿ ಅಥವಾ ಮೈಥುನ ನಡೆಸಿದ ಶುದ್ಧಾವಧಿಯಲ್ಲಿ ತಲಾಖ್ ಹೇಳುವುದು. ಇದಕ್ಕೆ ತಲಾಖ್ ಬಿದಈ ಎಂದು ಹೆಸರು. ಈ ತಲಾಖ್ ಹರಾಮ್. (3). ಇವೆರಡೂ ಅಲ್ಲ್ಲದ್ದು. ಮೈಥುನ ನಡೆಯದ ಋತುಮತಿಯಾದ ಹೆಣ್ಣು ಮತ್ತು ಋತುಮತಿಯಾಗದ ಎಳೆಯ ವಯಸ್ಸಿನವಳ ತಲಾಖ್ ಮುಂತಾದ ಹಲವು ವಿಧಾನಗಳು ಇದರಲ್ಲಿ ಬರುತ್ತವೆ. (ಕರ್ಮಶಾಸ್ತ್ರ ಗ್ರಂಥಗಳಲ್ಲಿ ಇದರ ಸಮಗ್ರ ವಿವರಣೆಯಿದೆ.)
  • [2] ವಿಚ್ಛೇಧಿತರನ್ನು ಅವರ ಮನೆಯಿಂದ ಹೊರಗಿಳಿಸಬಾರದು ಎಂದು ಆಯತ್‍ನಲ್ಲಿದೆ. ಅವರ ಮನೆ ಅಂದರೆ ಪತಿಯು ಅವಳಿಗೆ ಒದಗಿಸಿ ಕೊಟ್ಟ ಮನೆ. ಮನೆ ಅವನ ಹೆಸರಲ್ಲೇ ಇದ್ದರೂ ಕೂಡಾ ವಿಚ್ಛೇಧಿತಳು ಇದ್ದತ್ ಅವಧಿಯನ್ನು ಆ ಮನೆಯಲ್ಲೇ ಪೂರ್ತಿ ಮಾಡಬೇಕು. ಇದ್ದತ್ ಅವಧಿಯಲ್ಲಿ ಅವಳು ಅವನ ಮನೆಯಲ್ಲೇ ಇದ್ದರೆ ಅವನ ಮನಪರಿವರ್ತನೆಯಾಗಿ ಮರುಸೇರ್ಪಡೆಗೆ ಸಾಧ್ಯತೆಯು ಇರುವುದರಿಂದ ದಂಪತಿಗಳ ಪಾಲಿಗೆ ಈ ವಾಸ್ತವ್ಯ ಉಪಕಾರವಾಗುತ್ತದೆ. ಪರಸ್ಪರ ಸಂಪರ್ಕ ನಿಷಿದ್ಧವಾದುದರಿಂದ ಬೇರೆ ಬೇರೆಯಾಗಿಯೇ ಇದ್ದುಕೊಂಡು ಒಂದೇ ಮನೆಯಲ್ಲಿ ವಾಸಿಸುವಾಗ ಕೆಲವು ದಿನಗಳ ನಂತರ ಮನಸ್ತಾಪ ಕರಗಿ ಮತ್ತೆ ಒಂದಾಗುವ ಮನಸ್ಸು ಬರುವ ಸಾಧ್ಯತೆ ಹೆಚ್ಚು. ಹಾಗಾದರೆ ವಿಧಿಬದ್ಧವಾಗಿ ಮರುಸೇರ್ಪಡೆಗೆ ಸುಲಭವಾಗುತ್ತದೆ. `ಸ್ಪಷ್ಟ ನೀಚ ವೃತ್ತಿ' ಅಂದರೆ ಒಂದು ಅಭಿಪ್ರಾಯ ಹಾದರ. ದಿನಾಲೂ ಜಗಳದಂತಹ ದುಸ್ವಭಾವ ಕೂಡಾ ಇದರಲ್ಲಿ ಒಳಪಡುತ್ತದೆ ಎಂದು ಹಲವು ಉಲಮಾ ಗಳು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಅಸಹನೀಯ ಕೆಡುಕು ಅವಳಲ್ಲಿ ಇಲ್ಲದಿದ್ದರೆ ಇದ್ದತ್ ಮುಗಿಯುವವರೆಗೂ ಗಂಡನ ಮನೆಯಲ್ಲೇ ಉಳಿಸಬೇಕು ಹಾಗೂ ವೆಚ್ಚ ಕೊಡಬೇಕು. (ಅತ್ತಸ್‍ಹೀಲ್ 4/126)