Kannada Translation

Ayah by Ayah

Tags

Download Links

Kannada Translation translation for Surah At-Talaq — Ayah 2

65:2
فَإِذَا بَلَغۡنَ أَجَلَهُنَّ فَأَمۡسِكُوهُنَّ بِمَعۡرُوفٍ أَوۡ فَارِقُوهُنَّ بِمَعۡرُوفٖ وَأَشۡهِدُواْ ذَوَيۡ عَدۡلٖ مِّنكُمۡ وَأَقِيمُواْ ٱلشَّهَٰدَةَ لِلَّهِۚ ذَٰلِكُمۡ يُوعَظُ بِهِۦ مَن كَانَ يُؤۡمِنُ بِٱللَّهِ وَٱلۡيَوۡمِ ٱلۡأٓخِرِۚ وَمَن يَتَّقِ ٱللَّهَ يَجۡعَل لَّهُۥ مَخۡرَجٗا ٢
ಇನ್ನು ಅವರು ತಮ್ಮ ಕಾಲಾವಧಿಯನ್ನು ತಲು ಪಿದರೆ, (ಇದ್ದಃ ಮುಗಿದರೆ) ಅವರನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳಿರಿ ಅಥವಾ ಉತ್ತಮ ರೀತಿಯಲ್ಲಿ ಬೇರ್ಪಡಿಸಿರಿ. ನಿಮ್ಮ ಪೈಕಿ ನ್ಯಾಯ ಶೀಲರಾದ ಇಬ್ಬರನ್ನು ಸಾಕ್ಷಿ ನಿಲ್ಲಿಸಿರಿ. ಸಾಕ್ಷ್ಯ ವನ್ನು ಅಲ್ಲಾಹನಿಗಾಗಿಯೇ ನೆಲೆಗೊಳಿಸಿರಿ. ಇದು ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸ ವಿರಿಸುವ ಪ್ರತಿಯೊಬ್ಬನಿಗೆ ಉಪದೇಶಿಸಲಾಗುವ ವಿಷಯ. ಯಾವನು ಅಲ್ಲಾಹನನ್ನು ಭಯಪಡುತ್ತ ಧರ್ಮನಿಷ್ಠರಾಗಿ ಬಾಳುತ್ತಾರೋ ಆತನಿಗೆ ಅಲ್ಲಾಹನು (ಸಂಕಷ್ಟಗಳಿಂದ ಪಾರಾಗುವ) ದಾರಿಯನ್ನು ತೆರೆದುಕೊಡುವನು1.
Footnotes
  • [1] ಅಲ್ಲಾಹನು ಉಪದೇಶಿಸಿದ ನಿಮಯ ವಿಧಿಗಳನ್ನು ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆ ಇರುವವರು ಪಾಲಿಸುತ್ತಾರೆ. ಹಾಗಾದರೆ ಅವರ ಸಮಸ್ಯೆ ಗಳಿಗೆ ಅಲ್ಲಾಹನು ಪರಿಹಾರ ಕೊಡುತ್ತಾನೆ ಎಂಬ ಭರವಸೆ ಈ ಆಯತ್‍ನಲ್ಲಿ ಇದೆ. ಅಲ್ಲಾಹನ ನಿಯಮಗಳನ್ನು ಧಿಕ್ಕರಿಸಿ ಸ್ವಾಭಿಪ್ರಾಯ ಅಥವಾ ಮಾನವ ನಿರ್ಮಿತ ವಿಧಿಗಳನ್ನು ಅವಲಂಭಿಸಿದರೆ ತತ್ಕಾಲಕ್ಕೆ ಸುಲಭದ ದಾರಿ ಸಿಗುವ ಸಾಧ್ಯತೆ ಇದ್ದರೂ ಅವರಿಗೆ ಅಲ್ಲಾಹನಿಂದ ಪರಿಹಾರ ದೊರೆಯದೆ ಹೊಸ ಸಮಸ್ಯೆ ಗಳ ಸುಳಿಯಲ್ಲಿ ಸಿಲುಕುತ್ತಾರೆ. ಅಲ್ಲಾಹನು ನೀಡುವ ಪರಿಹಾರವು ನಾವು ನಿರೀಕ್ಷಿಸದ ದಾರಿ ಮೂಲಕ ಉಂಟಾಗಬಲ್ಲುದೆಂದು ಈ ಆಯತ್ ತಿಳಿಸುತ್ತಿದೆ.