Kannada Translation

Ayah by Ayah

Tags

Download Links

Kannada Translation translation for Surah At-Talaq — Ayah 12

65:12
ٱللَّهُ ٱلَّذِي خَلَقَ سَبۡعَ سَمَٰوَٰتٖ وَمِنَ ٱلۡأَرۡضِ مِثۡلَهُنَّۖ يَتَنَزَّلُ ٱلۡأَمۡرُ بَيۡنَهُنَّ لِتَعۡلَمُوٓاْ أَنَّ ٱللَّهَ عَلَىٰ كُلِّ شَيۡءٖ قَدِيرٞ وَأَنَّ ٱللَّهَ قَدۡ أَحَاطَ بِكُلِّ شَيۡءٍ عِلۡمَۢا ١٢
ಅಲ್ಲಾಹನೇ ಸಪ್ತಗಗನಗಳನ್ನು ಮತ್ತು ಭೂಮಿಯಿಂದ ಅವುಗಳಿಗೆ ಸಮಾನವಾದುದನ್ನು ಸೃಷ್ಟಿಸಿದವನು1. ಅವುಗಳ ನಡುವೆ ಅವನ ಆದೇ ಶಗಳು ಇಳಿಯುತ್ತವೆ. ಅಲ್ಲಾಹನು ಎಲ್ಲದಕ್ಕೂ ಸಾಮಥ್ರ್ಯವುಳ್ಳವನು. ಅಲ್ಲಾಹನ ಜ್ಞಾನವು ಎಲ್ಲ ವಿಷಯಗಳಿಗೂ ವ್ಯಾಪಿಸಿಕೊಂಡಿದೆ ಎಂಬುದನ್ನು ನೀವು ತಿಳಿದುಕೊಳ್ಳುವಂತಾಗಲು.
Footnotes
  • [1] ಏಳಾಕಾಶಗಳಂತೆ ಭೂಮಿಯನ್ನು ಸೃಷ್ಟಿಸಲಾಗಿದೆ ಎಂಬ ಮಾತಿಗೆ ಏಳು ಭೂಮಿ ಎಂದು ಖಚಿತವಾದ ಅರ್ಥವಿಲ್ಲ. ಏಳು ಭೂಮಿ ಎಂದು ಇಲ್ಲಿ ಹೇಳಿಲ್ಲ. ಏಳಾಕಾಶಗಳನ್ನು ಸೃಷ್ಟಿಸಿದಂತೆ ಭೂಮಿಯನ್ನು ಸೃಷ್ಠಿಸಲಾಯಿತು ಎಂದಾಗಿದೆ ಅರ್ಥ. ಏಳು ಹೂವಿನ ಚಿತ್ರಗಳನ್ನೂ ಒಂದು ಮರದ ಚಿತ್ರವನ್ನೂ ಮಾಡಿದ ಒಬ್ಬನು ಈ ಏಳು ಹೂವಿನ ಚಿತ್ರಗಳನ್ನು ಮಾಡಿದಂತೆಯೇ ಈ ಮರದ ಚಿತ್ರವನ್ನೂ ಮಾಡಿದ್ದೇನೆ ಎಂದು ಹೇಳಬಹುದಾಗಿದೆ. ಹೂವುಗಳ ಚಿತ್ರಕ್ಕೆ ಬಳಸಲಾದ ಅದೇ ಬಣ್ಣವನ್ನು ಮರದ ಚಿತ್ರಕ್ಕೂ ಬಳಸಿದ್ದೇನೆ ಅಥವಾ ಹೂವಿನ ಚಿತ್ರಗಳ ವೇಳೆ ಇರಿಸಿದಷ್ಟೇ ಶ್ರದ್ಧೆ, ನಿರೀಕ್ಷೆಗಳನ್ನು ಮರದ ಚಿತ್ರಕ್ಕೂ ಇಟ್ಟಿದ್ದೇನೆ ಮುಂತಾದ ಅರ್ಥಗಳನ್ನು ಕಲ್ಪಿಸಬಹುದಾಗಿದೆ. ಇನ್ನು ಏಳು ಭೂಮಿಗಳು ಎಂದು ಅರ್ಥ ಕಲ್ಪಿಸುವುದಾದರೂ ಅವೈಜ್ಞಾನಿಕತೆ ಇಲ್ಲ. ಬುಖಾರಿ ಮುಸ್ಲಿಮ್ ಹಾಗೂ ಇನ್ನಿತರರು ಉಲ್ಲೇಖಿಸಿದ ಅನೇಕ ಹದೀಸ್‍ಗಳಲ್ಲಿ ಏಳು ಭೂಮಿಯ ಪ್ರಸ್ತಾಪ ಬರುತ್ತದೆ. ಈ ಭೂಮಿಯ ಏಳು ಪದರುಗಳು ಎಂದು ಕಲ್ಪಿಸಬಹುದಾಗಿದೆ. ಏಳು ಭೂಮಿಗಳೇ ಇವೆ ಎಂದು ಕಲ್ಪಿಸಿಕೊಂಡರೂ ವಿರೋಧವಿಲ್ಲ. ಯಾಕೆಂದರೆ ಸೌರವ್ಯೂಹದ ವಿಚಾರ ಮಾತ್ರ ನಮ್ಮ ದೃಷ್ಟಿಗೆ ಬೀಳುತ್ತಿರುವುದು. ಸೌರವ್ಯೂಹವು ಇಡೀ ಪ್ರಪಂಚಕ್ಕೆ ಹೋಲಿಸಿದರೆ ಇಡೀ ಕರ್ನಾಟಕ ರಾಜ್ಯದಲ್ಲಿ ಒಂದಿಂಚು ಜಾಗದಷ್ಟು ಮಾತ್ರ. ಉಳಿದ ಪ್ರಪಂಚದ ವಿಷಯ ಆಧುನಿಕ ವಿಜ್ಞಾನಕ್ಕೆ ಇನ್ನೂ ನಿಗೂಢ. ಬೆಳಕಿನ ವೇಗದಲ್ಲಿ ಸಂಚರಿಸಿದರೂ ಇಡೀ ಪ್ರಪಂಚ ಸುತ್ತಲು ಹತ್ತು ಸಾವಿರ ಕೋಟಿ ವರ್ಷಗಳು ಬೇಕು. ಅಷ್ಟು ವಿಶಾಲವಾದ ಪ್ರಪಂಚದಲ್ಲಿ ಬೇರೆ ಆರು ಭೂಮಿಗಳು ಇಲ್ಲವೆಂದು ಖಚಿತವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಇಷ್ಟು ಅಗಾಧವಾದ ಪ್ರಪಂಚವನ್ನು ಸೃಷ್ಟಿಸಿದ ಅಲ್ಲಾಹು ಹೇಳುವ ಮಾತಲ್ಲಿ ವಿಶ್ವಾಸವಿಡುವುದು ನಮ್ಮ ಧರ್ಮ. ಇಡೀ ಪ್ರಪಂಚದ ಶತಕೋಟಿಯಲ್ಲೊಂದು ಅಂಶವನ್ನು ಮಾತ್ರ ಕಂಡ ಮಾನವ ವಿಜ್ಞಾನಿಯ ಮಾತಿಗಿಂತ ಇಡೀ ಪ್ರಪಂಚವನ್ನು ಸೃಷ್ಟಿಸಿದ ಅಲ್ಲಾಹು ಹೇಳುವ ಮಾತು ನಂಬಲರ್ಹವೂ ಪರಮ ಸತ್ಯವೂ ಆಗಿರುವುದು.