Kannada Translation

Ayah by Ayah

Tags

Download Links

Kannada Translation translation for Surah At-Tahrim — Ayah 1

66:1
يَٰٓأَيُّهَا ٱلنَّبِيُّ لِمَ تُحَرِّمُ مَآ أَحَلَّ ٱللَّهُ لَكَۖ تَبۡتَغِي مَرۡضَاتَ أَزۡوَٰجِكَۚ وَٱللَّهُ غَفُورٞ رَّحِيمٞ ١
ಓ ಪ್ರವಾದಿವರ್ಯರೇ, ತಾವು ತಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸಿಕೊಂಡು ಅಲ್ಲಾಹನು ತಮಗೆ ಹಲಾಲ್ (ಧರ್ಮಸಮ್ಮತ)ಗೊಳಿಸಿರುವ ವಸ್ತುವನ್ನು ತಾವೇಕೆ ಹರಾಮ್ (ನಿಷಿದ್ಧ) ಗೊಳಿಸುತ್ತೀರಿ?1 ಅಲ್ಲಾಹನು ಕ್ಷಮಾದಾನಿಯೂ ಕೃಪಾನಿಧಿಯೂ ಆಗಿರುತ್ತಾನೆ.
Footnotes
  • [1] *ತಹ್ರೀಮ್ ಅಂದರೆ `ನಿಷಿದ್ಧ ಮಾಡಿಕೊಳ್ಳುವುದು' ಎಂದರ್ಥ. ಒಂದನೇ ಆಯತ್‍ನಲ್ಲೇ ಬಂದಿರುವ ಈ ಪದವನ್ನು ಸೂರತ್‍ಗೆ ಹೆಸರಿಸಲಾಗಿದೆ. ನಬಿಯವರು ಅಸರ್ ನಮಾಝ್‍ನ ನಂತರ ಎಲ್ಲ ಪತ್ನಿಯರ ಮನೆಗಳಿಗೆ ಹೋಗಿ ಬರುತ್ತಿದ್ದರು. ಅವರ ಪೈಕಿ ಝೈನಬ್ ಬೀವಿ ಯವರ ಮನೆಯಲ್ಲಿ ಸ್ವಲ್ಪ ಜೇನುತುಪ್ಪ ಕುಡಿಯುತ್ತಿದ್ದರು. ಆಇಶಾ ಬೀವಿ ಮತ್ತು ಹಫ್ಸಾ ಬೀವಿ ಎಂಬ ಇಬ್ಬರು ಪತ್ನಿಯರಿಗೆ ಇದರಿಂದ ಸಣ್ಣದೊಂದು ಈಷ್ರ್ಯೆಯುಂಟಾಗಿತ್ತು. ನಬಿಯವರು ಹಫ್ಸಾರವರ ಮನೆಗೆ ಬಂದಾಗ; ತಮ್ಮ ಬಾಯಿಂದ `ಮಗಾಫೀರ್'ನ ವಾಸನೆ ಬರುತ್ತಿದೆಯಲ್ಲಾ ಎಂದು ಹಫ್ಸಾ ಹೇಳಿಬಿಟ್ಟರು. (ಮಗಾಫೀರ್ ಅಂದರೆ ಒಂದು ಮರದ ಮಯಣ. ಮಾನ್ಯ ವ್ಯಕ್ತಿಗಳು ಅದನ್ನು ಸೇವಿಸುತ್ತಿರಲಿಲ್ಲ). ಆಗ ನಬಿಯವರು; ``ಇಲ್ಲ, ನಾನು ಜೇನು ಸೇವಿಸಿದ್ದೆ. ನಿಮಗೆ ಅದು ಸಹ್ಯವಾಗುವುದಿಲ್ಲವಾದರೆ ಇನ್ನು ಮುಂದೆ ಜೇನು ಸೇವಿಸುವುದಿಲ್ಲ ಎಂದು ಶಪಥ ಮಾಡಿಬಿಟ್ಟರು. ಈ ಘಟನೆಗೆ ಸಂಬಂಧವಾಗಿ ಈ ಆಯತ್ ಬಂದಿದೆಯೆಂದಾಗಿದೆ ಬಲವಾದ ಅಭಿಪ್ರಾಯ. ಅಲ್ಲಾಹನು ಹಲಾಲ್ ಮಾಡಿರುವ ವಸ್ತು ಜೇನು. ಇದನ್ನು ಪತ್ನಿಯರ ತೃಪ್ತಿಗಾಗಿ ನಿಷಿದ್ಧಗೊಳಿಸುವುದು ಬೇಡ ಎಂದು ಸಾರ.