Kannada Translation

Ayah by Ayah

Tags

Download Links

Kannada Translation translation for Surah At-Tahrim — Ayah 12

66:12
وَمَرۡيَمَ ٱبۡنَتَ عِمۡرَٰنَ ٱلَّتِيٓ أَحۡصَنَتۡ فَرۡجَهَا فَنَفَخۡنَا فِيهِ مِن رُّوحِنَا وَصَدَّقَتۡ بِكَلِمَٰتِ رَبِّهَا وَكُتُبِهِۦ وَكَانَتۡ مِنَ ٱلۡقَٰنِتِينَ ١٢
ಅವನು ಇಮ್ರಾನರ ಪುತ್ರಿ ಮರ್ಯಮರನ್ನೂ (ಸತ್ಯವಿಶ್ವಾಸಿಗಳಿಗೆ ಉದಾಹರಣೆಯಾಗಿ) ಮುಂದಿಡುತ್ತಾನೆ. ಅವರು ತಮ್ಮ ಶೀಲವನ್ನು ಕಾಪಾಡಿಕೊಂಡಿದ್ದರು. ಆಗ ನಾವು ಅವರೊಳಗೆ ನಮ್ಮ ಆತ್ಮದಿಂದ ಊದಿದೆವು. ಆಕೆ ತಮ್ಮ ಪ್ರಭುವಿನ ವಚನಗಳಲ್ಲೂ, ಅವನ ಗ್ರಂಥಗಳಲ್ಲೂ ವಿಶ್ವಾಸವಿರಿಸಿದ್ದರು. ಮತ್ತು ಆಕೆ ಭಕ್ತಿಯುಳ್ಳವರಲ್ಲಿ ಒಳಪಟ್ಟವರಾದರು1.
Footnotes
  • [1] ಇಬ್ಬರು ದುಷ್ಟ ಸ್ತ್ರೀಯರ ಪ್ರಸ್ತಾಪದ ಬೆನ್ನಿಗೇ ಇಲ್ಲಿ ಇಬ್ಬರು ಶ್ರೇಷ್ಟ ವನಿತೆಯರ ಪ್ರಸ್ತಾಪ ಮಾಡಲಾಗಿದೆ. ಒಬ್ಬರು ಫಿರ್‍ಔನನ ಪತ್ನಿ ಆಸಿಯಾ ಬೀವಿ. ಇನ್ನೊಬ್ಬರು ಮರ್ಯಮ್ ಬೀವಿ. ಪ್ರವಾದಿಯ ಪತ್ನಿಯಾಗಿದ್ದು ಕೂಡಾ ಸತ್ಯದ ಕಡೆಗೆ ಬಾರದ ಸ್ತ್ರೀ, ದುಷ್ಟನ ಪತ್ನಿಯಾಗಿದ್ದು ಅವನ ತೀವ್ರ ವಿರೋಧ ಹಾಗೂ ಚಿತ್ರಹಿಂಸೆಗೆ ಗುರಿಯಾಗಿದ್ದರೂ ಕೂಡಾ ಸತ್ಯವಿಶ್ವಾಸದಲ್ಲಿ ಅಚಲವಾಗಿ ನಿಂತ ಸ್ತ್ರೀ ಎಂಬ ಎರಡು ದ್ರುವಗಳಲ್ಲಿ ನಿಲ್ಲುವ ಸ್ತ್ರೀಯರ ಉದಾಹರಣೆ ಮನೋಜ್ಞವೂ ಚಿಂತೋದ್ದೀಪಕವೂ ಆಗಿದೆ. ಋಣಾತ್ಮಕ (ನೆಗೆಟಿವ್)ದ ಬೆನ್ನಿಗೆ ಧನಾತ್ಮಕ (ಪೋಸಿಟಿವ್) ಆಗಿ ಹೇಳುವುದು ಅಥವಾ ಧನಾತ್ಮಕ (ಪೋಸಿಟಿವ್)ದ ಬೆನ್ನಿಗೆ ಋಣಾತ್ಮಕ (ನೆಗೆಟಿವ್) ವಿಷಯದ ಪ್ರಸ್ತಾಪ ಮಾಡುವುದು ಖುರ್‍ಆನಿನ ಒಂದು ಆಕರ್ಷಕ ಹಾಗೂ ಮನೋಜ್ಞ ಶೈಲಿಯಾಗಿದೆ. ಒಂದೇ ವಿಚಾರದ ಏಕತಾನತೆಯ ನೀರಸತೆಯಿಂದ ಪಕ್ಕನೆ ಇನ್ನೊಂದು ವಿಚಾರಕ್ಕೆ ಸೆಳೆಯುವುದರಿಂದ ಓದುಗನಿಗೆ ಹೊಸ ಹುರುಪು ಮೂಡುತ್ತದೆ. ಮೇಲಕ್ಕೆ ಎಣಿಸಿ ಕೂಡಲೇ ಮೇಲಿಂದ ಕೆಳಕ್ಕೆ ಎಣಿಸಿದರೆ. (ಉದಾ : ಒಂದರಿಂದ 10ರ ವರೆಗೆ ಎಣಿಸಿ ಕೂಡಲೇ 10ರಿಂದ 1ರವರೆಗೆ ಕೆಳಗಡೆಗೆ ಎಣಿಸುವುದು. ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಆಧುನಿಕ ಮನಶಾಸ್ತ್ರ ಹೇಳುತ್ತಿದೆ. ಪ್ರವಾದಿಗಳ ಪತ್ನಿಗಳಾಗಿದ್ದವರು ಸ್ವರ್ಗಕ್ಕೆ ಯೋಗ್ಯತೆ ಪಡೆಯುವ ದಾರಿ ಬಹಳ ಸುಲಭವಿದ್ದು ಕೂಡಾ ಅವರು ಆ ಭಾಗ್ಯದಿಂದ ದೂರವಾಗಿ ಶಾಶ್ವತ ನರಕವಾಸಿಗಳಾದುದು ಹಾಗೂ ದುಷ್ಟನ ಪತ್ನಿಯಾಗಿದ್ದ ಆಸಿಯಾಬೀವಿ ಹಾಗೂ ಯಾರ ಪತ್ನಿಯೂ ಅಲ್ಲವಾಗಿದ್ದ ಮರ್ಯಮ್ ಬೀವಿ ಮಹೋನ್ನತ ಸ್ಥಾನಗಳಿಸಿ ಶಾಶ್ವತ ಸ್ವರ್ಗವಾಸಿಯಾದುದರ ವೃತ್ತಾಂತವನ್ನು ಬೆನ್ನು ಬೆನ್ನಿಗೇ ಎರಡು ಆಯತ್‍ಗಳಲ್ಲಿ ಅಲ್ಲಾಹು ಇಲ್ಲಿ ಹೇಳಿದುದರಲ್ಲಿ ಇನ್ನೊಂದು ಸೂಚನೆಯೂ ಇದೆ. ಅದೇನೆಂದರೆ ಅಧ್ಯಾಯದ ಆರಂಭವು ಪ್ರವಾದಿಪತ್ನಿಯರ ನಡುವೆ ಉಂಟಾದ ಸ್ತ್ರಿ-ಸಹಜವಾದ ಒಂದು ಪುಟ್ಟ ಸವತಿ ಮಾತ್ಸರ್ಯದಿಂದ ಸಂಭವಿಸಿದ ಒಂದು ಘಟನೆಯನ್ನು ಹೇಳಲಾಗಿದೆಯಷ್ಟೆ, ನೀವು ಆ ಇಬ್ಬರು ದುಷ್ಟ ಮಹಿಳೆಯರಂತೆ ಆಗಬಾರದು; ಉಳಿದ ಇಬ್ಬರು ಶ್ರೇಷ್ಟ ಮಹಿಳೆಯರಂತೆ ಆಗಬೇಕು ಎಂಬುದೇ ಆ ಸೂಚನೆ.