Kannada Translation

Ayah by Ayah

Tags

Download Links

Kannada Translation translation for Surah Al-Mulk — Ayah 1

67:1
تَبَٰرَكَ ٱلَّذِي بِيَدِهِ ٱلۡمُلۡكُ وَهُوَ عَلَىٰ كُلِّ شَيۡءٖ قَدِيرٌ ١
ಆಧಿಪತ್ಯ ಯಾವನ ಕೈವಶದಲ್ಲಿದೆಯೋ ಅವನು ಪರಮ ಪರಿಶುದ್ಧನು. ಅವನು ಸಕಲ ವಸ್ತುವಿನ ಮೇಲೆ ಸರ್ವ ಸಮರ್ಥನು1.
Footnotes
  • [1] ಮುಲ್ಕ್ ಎಂದರೆ ಅದಿಪತ್ಯ ಎಂದರ್ಥ. ಈ ಅದ್ಯಾಯದಲ್ಲಿನ ಪ್ರಥಮ ಸೂಕ್ತದಲ್ಲಿ ಈ ಪದ ಬಂದಿದೆ. ಈ ಸೂರಾದ ಪಾರಾಯಣಕ್ಕೆ ವಿಷೇಶ ಮಹತ್ವವಿದೆ. ನಿತ್ಯ ಪಾರಾಯಣಗಾರರಿಗೆ ಸಮಾದಿಯೊಳಗಡೆ ಶಿಕ್ಷೆಯಿಂದ ಪಾರಾಗು ಬಾಗ್ಯ ದೊರೆಯುತ್ತದೆ. ಎಂದು ಇಬ್ನ್ ಅಬ್ಬಾಸ್‍ರಿಂದ ವರದಿಯಾದ ನಬಿವಚನವನ್ನು ತುರ್ಮುದಿ ಉಲ್ಲೇಖಿಸಿದ್ದಾರೆ. ಸಹಾಬಿಯೊಬ್ಬರು ಒಂದು ಸಮಾದಿಯೊಳಗಿಂದ ಸೂರಾ ಮುಲ್ಕ್ ಪಾರಾಯಣದ ದ್ವನಿಯನ್ನು ಕೇಳಿದಾಗ ಪ್ರವಾದಿಯವರಲ್ಲಿ ಆ ವಿಷಯ ತಿಳಿಸುತ್ತಾರೆ. ಆಗ ಪ್ರವಾದಿಯವರು, "ಆ ಸೂರಾ ಶಿಕ್ಷಯಿಂದ ತಡೆಯುತ್ತದೆ. ಅದು ರಕ್ಷಕ, ಸಮಾಧಿಯ ಶಿಕ್ಷೆಯಿಂದ ರಕ್ಷಿಸುತ್ತದೆ." ಎಂದು ಹೇಳಿದರೆಂದು ಹದೀಸ್'ನಲ್ಲಿದೆ. ಈ ಸೂರಾದ ಕೊನೆಯ ಆಯತ್ ಮುಗಿಸಿದಾಗ ಅಥವಾ ಮತ್ತೊಬ್ಬರು ಒದಿ ಮುಗಿಸಿದಾಗ, ಅಲ್ಲಾಹು ರಬ್ಬುಲ್ ಆಲಮೀನ್ ಎಂದು ಹೇಳುವುದು ಸುನ್ನತ್ತಾಗಿದೆ.