Kannada Translation

Ayah by Ayah

Tags

Download Links

Kannada Translation translation for Surah At-Tahrim — Ayah 3

66:3
وَإِذۡ أَسَرَّ ٱلنَّبِيُّ إِلَىٰ بَعۡضِ أَزۡوَٰجِهِۦ حَدِيثٗا فَلَمَّا نَبَّأَتۡ بِهِۦ وَأَظۡهَرَهُ ٱللَّهُ عَلَيۡهِ عَرَّفَ بَعۡضَهُۥ وَأَعۡرَضَ عَنۢ بَعۡضٖۖ فَلَمَّا نَبَّأَهَا بِهِۦ قَالَتۡ مَنۡ أَنۢبَأَكَ هَٰذَاۖ قَالَ نَبَّأَنِيَ ٱلۡعَلِيمُ ٱلۡخَبِيرُ ٣
ಪ್ರವಾದಿಯು ತಮ್ಮ ಓರ್ವ ಪತ್ನಿಯೊಡನೆ ಒಂದು ಸಮಾಚಾರವನ್ನು ರಹಸ್ಯವಾಗಿ ಹೇಳಿದ ಸಂದರ್ಭ (ವನ್ನು ಸ್ಮರಿಸಿರಿ). ತರುವಾಯ ಆ ಪತ್ನಿಯು ಆ ರಹಸ್ಯವನ್ನು (ಬೇರೊಬ್ಬರಲ್ಲಿ) ಬಯಲುಗೊಳಿಸಿ ದಾಗ ಮತ್ತು ಅಲ್ಲಾಹನು ಪ್ರವಾದಿಗೆ ಈ ಸುದ್ದಿಯನ್ನು ತಿಳಿಸಿದಾಗ, ಅವರು ಅದರ ಸ್ಪಲ್ಪಾಂಶವನ್ನು ತಿಳಿಸಿದರು ಮತ್ತು ಸ್ವಲ್ಪಾಂಶವನ್ನು ಕಡೆಗಣಿಸಿದರು. ಹಾಗೆ ಪ್ರವಾದಿಯವರು ಆ ಪತ್ನಿಗೆ ಆ ಸುದ್ದಿಯನ್ನು ತಿಳಿಸಿದಾಗ ಆ ಪತ್ನಿ; ``ತಮಗೆ ಈ ಸುದ್ದಿ ತಿಳಿಸಿದವರು ಯಾರು?’’ ಎಂದು ಕೇಳಿದರು. ಪ್ರವಾದಿಯವರು, ``ನನಗೆ ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವ ಅಲ್ಲಾಹನು ತಿಳಿಸಿ ಕೊಟ್ಟನು’ ಎಂದರು1.
Footnotes
  • [1] ``ಇನ್ನು ಮುಂದೆ ಜೇನು ಸೇವಿಸಲಾರೆ'' ಎಂಬ ತನ್ನ ಶಪಥದ ವಿಷಯ ಯಾರಿಗೂ ಹೇಳಬಾರದು ಎಂದು ನಬಿಯವರು ಹೇಳಿದ್ದರು. ಆದರೆ ಇದೊಂದು ಗಂಭೀರವಾದ ಎಚ್ಚರಿಕೆಯಲ್ಲ ಎಂದು ಪರಿಗಣಿಸಿದ ಹಫ್ಸಾರವರು ಈ ವಿಷಯವನ್ನು ಆಇಶಾ ರವರಲ್ಲಿ ಹೇಳಿಬಿಟ್ಟರು. ಈ ವಿಷಯ ನಬಿಯವರಿಗೆ ವಹೀ ಮೂಲಕ ತಿಳಿಯಿತು. ನಂತರ ನಬಿಯವರು ಹಫ್ಸಾರಲ್ಲಿ ಆ ವಿಷಯವನ್ನು ಅಸ್ಪಷ್ಟವಾಗಿ ಹೇಳಿದರು. ಆಯಿಶಾರವರು ತಾನು ಹೇಳಿರುವ ವಿಷಯವನ್ನು ನಬಿಯವರಿಗೆ ಹೇಳಿರುವರೇನೋ ಎಂಬ ಸಂದೇಹ ಹಫ್ಸಾರಿಗೆ ಕಾಡಿತು. ನಿಮಗೆ ಹೇಗೆ ಗೊತ್ತಾಯಿತು?'' ಎಂದು ಕೇಳಲು ಇದುವೇ ಕಾರಣ. ಆಗ ನಬಿಯವರು; ನನಗೆ ಅಲ್ಲಾಹು ತಿಳಿಸಿದನು ಎಂಬ ವಾಸ್ತವವನ್ನು ಹೇಳಿದರು. ಇದು ಈ ಆಯತ್‍ನ ಒಟ್ಟು ಸಾರ.